Udyogini Scheme:ಮಹಿಳೆಯರಿಗಾಗಿ ಕೇಂದ್ರದಿಂದ ಹೊಸ ಸ್ಕೀಮ್; ಈ ಯೋಜನೆಯಲ್ಲಿ ಸಿಗಲಿದೆ ಬಡ್ಡಿ ರಹಿತ ಸಾಲ!!

Women Empowerment Scheme: ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಸ್ವಾವಲಂಬಿಯಾಗಿ (Women Empowerment Scheme)ಜೀವನ ನಡೆಸಲು ಈ ಯೋಜನೆಗಳು ನೆರವಾಗುತ್ತಿವೆ.

ಇದನ್ನೂ ಓದಿ: Kitchen Tips: ಅನ್ನ ಸೀದು ಹೋಯ್ತಾ ಚಿಂತಿಸಬೇಡಿ!! ಸುಟ್ಟ ವಾಸನೆ ಹೋಗಲಾಡಿಸಲು ಈ ಟಿಪ್ಸ್ ಫಾಲೋ ಮಾಡಿ!?

ಮಹಿಳೆಯರಿಗಾಗಿ ಇರುವ ಅತ್ಯುತ್ತಮ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆ (UDYOGINI SCHEME)ಕೂಡ ಒಂದಾಗಿದ್ದು, ಕೇಂದ್ರ ಸರ್ಕಾರದ ಸೂಚನೆಯ ಅನುಸಾರ ಬ್ಯಾಂಕ್‌ಗಳು (Bank)ಈ ಯೋಜನೆಯನ್ನು ಜಾರಿಗೆ ತರುತ್ತವೆ. ಈ ಯೋಜನೆಯಡಿಯಲ್ಲಿ ಸಣ್ಣ ವ್ಯಾಪಾರ ಸಾಲ ಮತ್ತು ಕೃಷಿ ಸಾಲವನ್ನು ಪಡೆಯಬಹುದು.

# ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಸಾಲ ಪಡೆಯಲು 18 ರಿಂದ 55 ವರ್ಷದೊಳಗಿನವರಾಗಿರಬೇಕು.

# ಈ ಯೋಜನೆಯಡಿ ಸ್ವಯಂ ಉದ್ಯೋಗಿ ಉದ್ಯಮಿಗಳಿಗೆ ಸಾಲ ನೀಡಲಾಗುತ್ತದೆ.

# ಈ ಉದ್ಯೋಗಿನಿ ಯೋಜನೆಯಡಿ ಮಹಿಳೆಯರು 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಪಡೆಯಬಹುದು.

ಈಗಾಗಲೇ ವ್ಯಾಪಾರ ಮಾಡುತ್ತಿದ್ದರೂ ಕೂಡ ಈ ಸಾಲ ಪಡೆಯಬಹುದು. ಅಂಗವಿಕಲರು, ವಿಧವೆಯರು ಮತ್ತು ದಲಿತ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಇತರ ವರ್ಗದ ಮಹಿಳೆಯರಿಗೆ ಶೇ.10 ರಿಂದ 12ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಇದರ ಮೂಲಕ 88 ಬಗೆಯ ಸಣ್ಣ ಉದ್ದಿಮೆಗಳನ್ನು ಮಾಡಲು ಅವಕಾಶವಿದೆ.

Leave A Reply

Your email address will not be published.