Karnataka Politics: ನಾನ್ಯಾಕೆ ಮತ್ತೆ ಬಿಜೆಪಿ ಸೇರಿದೆ-ಉತ್ತರ ಕೊಟ್ಟ ಶೆಟ್ಟರ್‌!!

Former CM Jagadish Shettar: ಮರಳಿ ಬಿಜೆಪಿಗೆ ಬರಬೇಕು ಎಂಬುವುದು ಪಕ್ಷದ ಆಸೆಯಾಗಿತ್ತು. ಕಾಂಗ್ರೆಸ್‌ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಸಭಾಪತಿಗಳಾದ ಬಸವರಾಜ್‌ ಹೊರಟ್ಟಿ (Basavaraj Horatti) ಅವರಿಗೆ ನೀಡಿರುವುದಾಗಿಯೂ, ದೇಶದ ರಕ್ಷಣೆ, ದೇಶದ ಒಗ್ಗೂಡುವಿಕೆಗಾಗಿ ಪ್ರಧಾನಿ ಮೋದಿ ಅವರು ಹತ್ತು ವರ್ಷಗಳಿಂದ ಕೆಲಸ ಮಾಡಿದ್ದಾರೆ. ಅವರು ಮರು ಆಯ್ಕೆಯಾಗಬೇಕು. ಈ ಕಾರಣದಿಂದ ಕಾಂಗ್ರೆಸ್‌ ತೊರೆಯುತ್ತಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Former CM Jagadish Shettar) ಹೇಳಿರುವುದಾಗಿ ವರದಿಯಾಗಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಾನು ಮರಳಿ ಬರಬೇಕು ಅನ್ನೋದು ಅವರ ಆಶಯ ಆಗಿತ್ತು. ಹಾಗಾಗಿ ಬಿಜೆಪಿಗೆ ಮರಳಿ ಬಂದಿದ್ದೇನೆ ಎಂದು ನ್ಯೂಸ್‌ 18 ವರದಿ ಮಾಡಿದೆ.

Leave A Reply

Your email address will not be published.