Kitchen Tips: ಅನ್ನ ಸೀದು ಹೋಯ್ತಾ ಚಿಂತಿಸಬೇಡಿ!! ಸುಟ್ಟ ವಾಸನೆ ಹೋಗಲಾಡಿಸಲು ಈ ಟಿಪ್ಸ್ ಫಾಲೋ ಮಾಡಿ!?

Kitchen Tips: ಅನ್ನ ಮಾಡುವಾಗ ಕೆಲವೊಮ್ಮೆ ಮರೆತು ಹೋಗಿಯೋ ಇಲ್ಲವೇ ನೀರು ಕಡಿಮೆಯಾಗಿ ಅನ್ನ ಸೀದು ಹೋಗುತ್ತದೆ. ಅಷ್ಟೆ ಅಲ್ಲದೇ ಆ ಅನ್ನವನ್ನು ತಿನ್ನಲು ಆಗುವುದಿಲ್ಲ. ಆಗ ಅನ್ನವನ್ನು ಚೆಲ್ಲಿ ಬಿಡಬೇಕಾಗುತ್ತದೆ. ಅದಕ್ಕೆ ಏನು ಮಾಡೋದು ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್!!

ಅನ್ನವನ್ನು ಹೆಚ್ಚಿನ ತಾಪಮಾನದಲ್ಲಿ ಇಲ್ಲವೇ ದೀರ್ಘಕಾಲದವರೆಗೆ ಇಟ್ಟಾಗ ಸೀದು ಹೋಗುತ್ತದೆ. ಇದರಿಂದ ಸುಟ್ಟ ವಾಸನೆ ಉಂಟಾಗಿ ಅನ್ನ ತಿನ್ನಲಾಗದು. ಈ ರೀತಿ ಆದಾಗ ಹೆಚ್ಚಿನವರು ಅನ್ನವನ್ನು ಎಸೆಯುತ್ತಾರೆ. ಆದರೆ ನೀವು ಸರಳ ವಿಧಾನ ಅನುಸರಿಸಿದರೆ ಅನ್ನ ಸೀದ ವಾಸನೆ ಇರುವುದಿಲ್ಲ.

ಇದನ್ನೂ ಓದಿ: Political News: ಕಾಂಗ್ರೆಸ್‌ನಿಂದ ಬಿಜೆಪಿಯತ್ತ ಜಗದೀಶ್ ಶೆಟ್ಟರ್- ಮಾತುಕತೆ ಯಶಸ್ವಿ

ಅನ್ನದಿಂದ ಸುಟ್ಟ ವಾಸನೆಯನ್ನು ತೆಗೆದು ಹಾಕಲು ನೀವು ಈರುಳ್ಳಿಯನ್ನು ಬಳಸಬಹುದು. ಮೊದಲು, ಈರುಳ್ಳಿಯ ಮೇಲ್ಭಾಗವನ್ನು ಸ್ವಲ್ಪ ಕತ್ತರಿಸಿ, ನೀರಿನಲ್ಲಿ ತೊಳೆದು ಸಿಪ್ಪೆ ಸಹಿತ ನಾಲ್ಕು ತುಂಡುಗಳಾಗಿ ಕತ್ತರಿಸಿಕೊಳ್ಳಿ. ಈ ತುಂಡುಗಳನ್ನು ಅನ್ನದ ಪಾತ್ರೆಯ ಸುತ್ತಲೂ 4 ಕಡೆ ಹುದುಗಿಸಿ. ಮುಚ್ಚಳ ಮಚ್ಚಿ 10 ನಿಮಿಷ ಬಿಡಿ. ( ಸ್ಟೌವ್‌ ಹಚ್ಚಬೇಡಿ). ನಂತರ ಅನ್ನದಿಂದ ಈರುಳ್ಳಿಯನ್ನು ಹೊರಗೆ ತೆಗೆದು ಬಿಡಿ. ಇದಾದ ಬಳಿಕ, ಮೇಲ್ಭಾಗದ ಅನ್ನವನ್ನಷ್ಟೇ ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಹೀಗೆ ಮಾಡಿದರೆ,ಅನ್ನದಲ್ಲಿ ಸುಟ್ಟ ವಾಸನೆ ಇರುವುದಿಲ್ಲ .

Leave A Reply

Your email address will not be published.