Drone Prathap: ಸಂಕಷ್ಟಗಳ ಸರಮಾಲೆ; ಡ್ರೋನ್‌ ಪ್ರತಾಪ್‌ ಮೇಲೆ ವಂಚನೆ ಆರೋಪ!!!

Drone Prathap: ಡ್ರೋನ್ ಪ್ರತಾಪ್ ಅವರಿಗೆ ಒಂದರ ಮೇಲೊಂದರಂತೆ ಸಂಕಷ್ಟ ಎದುರಾಗುತ್ತಿದೆ.ಪ್ರತಾಪ್‌ ವಿರುದ್ಧ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಮಾನನಷ್ಟ ಮೊಕದ್ದಮೆ ಹೂಡಿದ ಬೆನ್ನಲ್ಲೇ ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. ಬ್ಯೂಸಿನೆಸ್ ಪಾರ್ಟನರ್ ʻಸಾರಂಗ್ ಮಾನೆಗೆʼ ಪ್ರತಾಪ್‌ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Accident: ಭೀಕರ ಅಪಘಾತ; ಶ್ರೀಲಂಕಾ ಸಚಿವ ಸೇರಿ ಮೂವರ ದಾರುಣ ಸಾವು!!!

‘ಬಿಗ್‌ ಬಾಸ್‌ ಸೀಸನ್‌ʼ 10ರಲ್ಲಿ ಭಾಗವಹಿಸಿ ಫಿನಾಲೆ ಹಂತಕ್ಕೆ ಡ್ರೋನ್‌ ಪ್ರತಾಪ್‌ (Drone Prathap) ತಲುಪಿದ್ದಾರೆ. ಡ್ರೋನ್‌ ಪ್ರತಾಪ್‌ ಅವರು ದೊಡ್ಮನೆಯಲ್ಲಿ ಆಟದ ಜೊತೆ ಜೊತೆಗೆ ವೈಯುಕ್ತಿಕ ವಿಚಾರದಿಂದ ಕೂಡ ಭಾರೀ ಸುದ್ದಿಯಾಗಿದ್ದರು. ಈಗಾಗಲೇ ಪ್ರತಾಪ್‌ ವಿರುದ್ಧ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇದೀಗ ಮತ್ತೆ ಡ್ರೋನ್ ಪ್ರತಾಪ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

 

ಬ್ಯೂಸಿನೆಸ್ ಪಾರ್ಟನರ್ ʻಸಾರಂಗ್ ಮಾನೆಗೆʼ ಪ್ರತಾಪ್‌ ಮೋಸ ಮಾಡಿರುವ ಸುದ್ದಿ ಇದೀಗ ಮುನ್ನಲೆಗೆ ಬಂದಿದೆ.ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ ಸಂಸ್ಥೆಯ ಸಿಇಓ ಆಗಿರುವ ಸಾರಂಗ್ ಮಾನೆ ಕೆಲ ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರಿಗೆ ಎಂಟು ಡ್ರೋನ್ಗಳನ್ನು ನೀಡುವಂತೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದರು. ಎಂಟು ತಿಂಗಳ ಹಿಂದೆ ಯಷ್ಟೇ ಡ್ರೋನ್‌ ಪ್ರತಾಪ್‌ ಅವರು ಬ್ಯೂಸಿನೆಸ್ ಪಾರ್ಟನರ್ ಸಾರಂಗ್ ಅವರನ್ನು ಮಹಾರಾಷ್ಟ್ರದ ದುಲೇನಲ್ಲಿ ಭೇಟಿ ಮಾಡಿದ್ದರಂತೆ.

 

ಪ್ರತಾಪ್‌ ಅವರು ಸಾರಂಗ್‌ ಅವರಿಗೆ ಒಂಬತ್ತು ಡ್ರೋನ್‌ ನೀಡಬೇಕಿತ್ತು. ಹೀಗಾಗಿ ಸಾರಂಗ್‌ ಅವರು ಪ್ರತಾಪ್‌ಗೆ 35 ಲಕ್ಷದ 75 ಸಾವಿರ ನೀಡಿದ್ದರು ಎನ್ನಲಾಗಿದೆ. ಆದರೆ ಡ್ರೋನ್ ನೀಡಲು ಪ್ರತಾಪ್‌ ಎರಡುವರೆ ತಿಂಗಳ ಕಾಲಾವಧಿ ಪಡೆದುಕೊಂಡಿದ್ದರು.ಇದಾದ ನಂತರ ಎರಡು ಡ್ರೋನ್ ಅನ್ನು ಸಾರಂಗ್‌ ಅವರಿಗೆ ಪ್ರತಾಪ್‌ ನೀಡಿದ್ದರು. ಇದಾದ ಮೇಲೆ ಇನ್ನರೆಡು ಡ್ರೋನ್‌ಗಳನ್ನು ಸಾರಂಗ್‌ಗೆ ಕಳುಹಿಸಿಕೊಟ್ಟಿದ್ದರು. ಆದರೀಗ ಸಾರಂಗ್‌ ಈ ಬಗ್ಗೆ ಆರೋಪ ಮಾಡಿದ್ದು, ನಾಲ್ಕು ಡ್ರೋನ್‌ಗಳು ಈಗ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಬ್ಯಾಟರಿಗಳ ಕ್ಯಾಲಿಟಿ ಕೂಡ ಸರಿಯಿಲ್ಲ. ಮತ್ತೊಂದು ಡ್ರೋನ್ ಹಾರುವ ಸಂದರ್ಭ ಕೆಳಗಡೆ ಬಿದ್ದು ಹೋಗಿದ್ದು, ಇದರಿಂದ ನಾವು ತುಂಬಾ ನಷ್ಟ ಎದುರಿಸುತ್ತಿದ್ದೇವೆ ಎಂದು ಡ್ರೋನ್ ಪ್ರತಾಪ್ ವಿರುದ್ದ ಕಿಡಿ ಕಾರಿದ್ದಾರೆ.

Leave A Reply

Your email address will not be published.