Honeymoon: ಅಯೋಧ್ಯೆಗೆ ಹನಿಮೂನ್‌ಗೆ ಕರೆದುಕೊಂಡು ಹೋದ ಗಂಡ, ಡೀವೋರ್ಸ್‌ ಕೇಳಿದ ಹೆಂಡತಿ!!!

ಹನಿಮೂನ್‌ಗೆಂದು ಹೋಗುವ ವಿಚಾರದಲ್ಲಿ ಗಂಡ ಹೆಂಡತಿಯ ಮಧ್ಯೆ ಜಗಳವಾಗಿದ್ದು, ಇದೀಗ ಡಿವೋರ್ಸ್‌ವರೆಗೆ ಬಂದು ನಿಂತಿದೆ. ಗೋವಾಕ್ಕೆ ಹೋಗಿ ಹನಿಮೂನ್‌ ಮಾಡೋಣ ಎಂದು ಹೇಳಿದ ಗಂಡ, ಹೆಂಡತಿಯನ್ನು ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದು, ಇದೀಗ ಹೆಂಡತಿ ಈ ವಿಚಾರದಿಂದ ಸಿಟ್ಟುಗೊಂಡಿದ್ದು, ಡಿವೋರ್ಸ್‌ ಕೇಳಿದ್ದಾಳೆ.

 

ಗೋವಾಕ್ಕೆ ಕರೆದೊಯ್ಯುವ ಆಸೆಯನ್ನು ಗಂಡ ಈಡೇರಿಸಲು ವಿಫಲವಾದ ನಂತರ ಮಹಿಳೆಯೊಬ್ಬಳು ಇದೀಗ ಡಿವೋರ್ಸ್‌ ಪಡೆಯಲು ಪ್ರಯತ್ನ ಪಟ್ಟಿದ್ದಾಳೆ.

ಅಯೋಧ್ಯೆ ಮತ್ತು ವಾರಣಾಸಿಗೆ ಕರೆದೊಯ್ದಿರುವುದಾಗಿ ಮಹಿಳೆ ಹೇಳಿದ್ದು, ಪ್ರವಾಸದಿಂದ ಬಂದು ಹತ್ತು ದಿನಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ತಾನು ಮತ್ತು ತನ್ನ ಪತಿ ಇಬ್ಬರೂ ಉದ್ಯೋದಲ್ಲಿದ್ದು, ಉತ್ತಮ ಸಂಬಳ ಪಡೆಯುತ್ತೇವೆ. ಆದರೆ ನನ್ನ ಗಂಡ ವಿದೇಶಕ್ಕೆ ಕರೆದುಕೊಂಡು ಹೋಗುತ್ತೇನೆಂದು ಪೋಷಕರ ಬಳಿ ಹೇಳಿದ್ದರು. ಆದರೆ ಪೋಷಕರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದರು ಎಂದು ವಿಚ್ಛೇದನ ಅರ್ಜಿಯಲ್ಲಿ ಮಹಿಳೆ ತಿಳಿಸಿದ್ದಾರೆ.

ತನ್ನ ಪತಿ ತನಗಿಂತ ತನ್ನ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂದು ಹೇಳಿದ್ದಾಳೆ. ಈ ವಿಚಾರದಿಂದ ಗಂಡ ಹೆಂಡತಿಯ ಮಧ್ಯೆ ಜಗಳ ನಡೆದಿದೆ. ನಂತರ ಗಂಡ ಹೆಂಡತಿಯನ್ನು ಸಮಾಧಾನ ಮಾಡಿ ಗೋವಾಕ್ಕೆ ಹೋಗುವ ಎಂದು ಹೇಳಿದ್ದಾನೆ.

ವಿವಾಹವಾದ ಐದು ತಿಂಗಳ ನಂತರ ದಂಪತಿಗಳು ಗೋವಾ ಮತ್ತು ದಕ್ಷಿಣ ಭಾರತದ ಪ್ರವಾಸಕ್ಕೆ ಹೋಗಲು ತೀರ್ಮಾನ ಮಾಡಿಕೊಂಡಿದ್ದಾರೆ. ಆದರೆ ಪ್ರವಾಸಕ್ಕೆ ಒಂದು ದಿನ ಮೊದಲು ಪತಿ ತನ್ನ ಹೆಂಡತಿಗೆ ಅಯೋಧ್ಯೆ ಮತ್ತು ವಾರಣಾಸಿಗೆ ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಅನಂತರ ಮಹಿಳೆ ಪತಿ ಒತ್ತಾಯಕ್ಕೆ ಅಯೋಧ್ಯೆ, ವಾರಣಾಸಿಗೆ ಹೋಗಿ ಬಂದ ಮಹಿಳೆ ನಂತರ ಡಿವೋರ್ಸ್‌ ಬೇಕೆಂದು ಕೇಳಿದ್ದಾಳೆ. ಈ ಹಿನ್ನೆಲೆ ದಂಪತಿಗೆ ಕೌನ್ಸಿಲಿಂಗ್‌ ನಡೆಸಲಾಗುತ್ತಿದೆ ಎಂದು ವಕೀಲ ಶೈಲ್‌ ಅವಸ್ತಿ ತಿಳಿಸಿದ್ದಾರೆ.

 

Leave A Reply

Your email address will not be published.