Chinese influencer: ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಲು ನಕಲಿ ಗರ್ಭಧಾರಣೆ ನಾಟಕವಾಡಿದ ಯುವತಿ : ಮುಂದೇನಾಯ್ತು ಗೊತ್ತಾ??

Chinese influencer : ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಮೂವತ್ತೆರಡು ವರ್ಷದ ಚೆನ್ ಕ್ಸಿಯಾವೋಸಿ ನಕಲಿ ಗರ್ಭಧಾರಣೆಯ ಮೂಲಕ ಮ್ಯಾಚ್‌ಮೇಕಿಂಗ್ ಕಾರ್ಯಕ್ರಮಕ್ಕೆ ಹಾಜರಾಗಿ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಮಾಧ್ಯಮಗಳ ವರದಿ ಅನುಸಾರ, ಈ ಮಹಿಳೆ ತನ್ನ ಹುಟ್ಟಲಿರುವ ಮಗುವಿಗೆ ತಂದೆ ಮತ್ತು ತನಗಾಗಿ ಗಂಡನನ್ನು ಹುಡುಕುತ್ತಿದ್ದೇನೆ ಎಂದು ಕೂಡ ಹೇಳಿಕೊಂಡಿದ್ದಳು. ಅಷ್ಟೇ ಅಲ್ಲದೆ, ಮಹಿಳೆ ತಾನು ಒಂಟಿಯಾಗಿದ್ದು, ಆಸ್ತಿ ಅಥವಾ ಕಾರು ಇಲ್ಲ, ಐದು ತಿಂಗಳ ಗರ್ಭಿಣಿ ಎಂದು ಬಿಂಬಿಸುವ ಪತ್ರವನ್ನು ಹೊಂದಿದ್ದಳು ಎನ್ನಲಾಗಿದೆ. ಈ ಮಹಿಳೆ ಗರ್ಭಿಣಿಯಂತೆ (pregnancy)ಕಾಣುವ ವಿಡಿಯೋಗಳನ್ನು  ಹಂಚಿಕೊಳ್ಳುತ್ತಾ,ಅದರಲ್ಲಿ ತಾನು ಒಂಟಿಯಾಗಿದ್ದು ಸಾಕಷ್ಟು ಕಷ್ಟದಲ್ಲಿರುವ ಹಾಗೆ ಜನರಿಗೆ ಬಿಂಬಿಸಿ  ಸಿಂಪತಿ ಪಡೆಯುತ್ತಿದ್ದಳು. ಈ ಮೂಲಕ ತನ್ನ ಫಾಲೋವರ್ಸ್ಗಳನ್ನು ಹೆಚ್ಚಿಸಲು ಪ್ಲಾನ್ ಮಾಡಿದ್ದಳು ಎಂಬುದು ತನಿಖೆಯ ಮೂಲಕ ಬೆಳಕಿಗೆ ಬಂದಿದೆ.

ಮಹಿಳೆ ತನ್ನ ಭಾವಿ ಪತಿಯಿಂದ ಏನನ್ನು ನಿರೀಕ್ಷಿಸುತ್ತಿರುವೆ ಎಂಬುದನ್ನು ವಿವರವಾಗಿ ವಿವರಣೆ ನೀಡಿದ್ದಾಳೆ. ಪತಿಯಾಗುವ ವ್ಯಕ್ತಿ ಫ್ಲಾಟ್ ಮತ್ತು ಕಾರು ಹೊಂದಿರಬೇಕು. 20,000 ಯುವಾನ್ (ರೂ. 2.36 ಲಕ್ಷ) ಗಿಂತ ಹೆಚ್ಚು ಮಾಸಿಕ ವೇತನವನ್ನು ಹೊಂದಿರಬೇಕು. ಇದರ ಜೊತೆಗೆ ನನ್ನನ್ನು ಮತ್ತು ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು” ಎಂದು ಮಹಿಳೆ ಹೇಳಿಕೊಂಡಿರುವುದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ನಲ್ಲಿ ವರದಿಯಾಗಿದೆ.

ಆದರೆ ಆಕೆಯ ನಾಟಕವನ್ನು ನಿಜ ಎಂದು ನಂಬಿದ್ದ ಜನರಿಗೆ ಈಕೆಯ ಅಸಲಿ ಮುಖ ತಿಳಿದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆಕೆಯ ನೋವಿಗೆ ಸ್ಪಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿದ್ದ ಹಲವು ಮಂದಿ ನೆಟ್ಟಿಗರು ಆಕ್ರೋಶಗೊಂಡಿದ್ದು, ಆಕೆಯ ವಿರುದ್ಧ ಸರಿಯಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

Leave A Reply

Your email address will not be published.