Republic Day Bengaluru Traffic: ಗಣರಾಜ್ಯೋತ್ಸವ ಆಚರಣೆ: ಸವಾರರೇ ಗಮನಿಸಿ, ಈ ಎಲ್ಲ ವಾಹನ ಮಾರ್ಗ ಬದಲಾವಣೆ!!

Republic Day Bengaluru Traffic: ಜನವರಿ 26ರಂದು ಗಣರಾಜ್ಯೋತ್ಸವಕ್ಕೆ (Republic Day) ಸಿದ್ಧತೆ ಭರದಿಂದ ಸಾಗುತ್ತಿದ್ದು, ಬೆಂಗಳೂರು (Bengaluru) ನಗರ ಸಂಚಾರಿ ಪೊಲೀಸರು ಕೆಲವೊಂದು ರಸ್ತೆಯಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದಾರೆ. ನಗರ ಸಂಚಾರಿ ಪೊಲೀಸರು ಕೆಲವೊಂದು ರಸ್ತೆಯಲ್ಲಿ ವಾಹನಗಳ ಮಾರ್ಗ ಬದಲಾವಣೆ(Republic Day Bengaluru Traffic) ಮಾಡಿದ್ದಾರೆ. 26 ರಂದು ಬೆಳಗ್ಗೆ 8.30 ರಿಂದ 10.30 ರವೆಗೂ ಈ ಮಾರ್ಗದಲ್ಲಿ ಹೋಗದಿರಿ

ಇದನ್ನೂ ಓದಿ: Rahul gandhi: ರಾಮನ ಕುರಿತು ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ ರಾಹುಲ್ ಗಾಂಧಿ!!

ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?

ಸೆಂಟ್ರಲ್ ಸ್ಟ್ರೀಟ್ -ಅನಿಲ್ ಕುಂಬ್ಳೆ ರಸ್ತೆಯಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೂ, ಕಬ್ಬನ್ ರಸ್ತೆ-ಸಿಟಿ ಓ ವೃತ್ತದಿಂದ ಕೆ.ಆರ್. ರಸ್ತೆ ಮತ್ತು ಕಬ್ಬನ್ ಜಂಕ್ಷನ್‍ವರೆಗೆ, ಎಂಜಿ ರೋಡ್ -ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಪಾರ್ಕಿಂಗ್ ನಿಷೇಧ ಮಾಡಲಾಗಿದೆ.

ಜನವರಿ 26 ರಂದು ಬೆಳಗ್ಗೆ 8.30 ರಿಂದ 10.30 ರವೆಗೆ ಈ ಮಾರ್ಗದಲ್ಲಿ ಸಂಚರಿಸದಿರುವುದು ಉತ್ತಮ.ಇನ್ ಫಾಂಟ್ರಿ ರಸ್ತೆಯಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮಣಿಪಾಲ್ ಸೆಂಟರ್‍ಗೆ ತೆರಳುವ ವಾಹನಗಳು ಕಬ್ಬನ್ ರಸ್ತೆ ಮೂಲಕ ತೆರಳಬೇಕು. ಕಬ್ಬನ್ ರಸ್ತೆ, ಮಣಿಪಾಲ್ ಸೆಂಟರ್ ಜಂಕ್ಷನ್‍ನಿಂದ BRV ಜಂಕ್ಷನ್ ಕಡೆ ಸಂಚಾರವನ್ನ ನಿರ್ಬಂಧ ಮಾಡಲಾಗಿದೆ. ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ರಸ್ತೆಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

Leave A Reply

Your email address will not be published.