Lok Sabha Election Survey: ಲೋಕಸಭಾ ಚುನಾವಣೆ ಸಮೀಕ್ಷೆ- ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಇಷ್ಟು ಸೀಟು !!

Lok Sabha Election Survey: ಮುಂಬರುವ ಲೋಕಸಭಾ ಚುನಾವಣೆಯ ತಾತ್ಕಾಲಿಕ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟ ಮಾಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ತಯಾರಿಗಳು ಬಿರುಸಿನಿಂದ ಸಾಗುತ್ತಿದ್ದು ಕೆಲವು ಪತ್ರಿಕೆಗಳು, ಮಾಧ್ಯಮಗಳು ಚುನಾವಣಾ ಸಮೀಕ್ಷೆಗಳನ್ನು(Lok Sabha Election Survey) ಕೈಗೊಳ್ಳುತ್ತಿವೆ. ಅಂತೆಯೇ ಇದೀಗ ಅಚ್ಚರಿಯ ಸಮೀಕ್ಷೆಯೊಂದು ಹೊರ ಬಿದ್ದಿದ್ದು ಮುಂಬರುವ ಲೋಕ ಸಮರದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಸೀಟು ಗೆಲ್ಲುತ್ತೆ ಎಂಬ ವಿಚಾರ ಹೊರ ಬಿದ್ದಿದೆ.

ಇದನ್ನೂ ಓದಿ: Republic Day Bengaluru Traffic: ಗಣರಾಜ್ಯೋತ್ಸವ ಆಚರಣೆ: ಸವಾರರೇ ಗಮನಿಸಿ, ಈ ಎಲ್ಲ ವಾಹನ ಮಾರ್ಗ ಬದಲಾವಣೆ!!

ಹೌದು, ಕಾಂಗ್ರೆಸ್(Congress)ಪಕ್ಷ ಅಧಿಕಾರದಲ್ಲಿರುವ ದಕ್ಷಿಣ ಭಾರತದ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿ Lok Poll ನಿಂದ ಸಮೀಕ್ಷೆಯೊಂದು ನಡೆದಿದ್ದು, ಇದರ ವರದಿ ಬಿಡುಗಡೆಯಾಗಿದೆ. ಈ Lok Poll ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ 12-14 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಇದರಿಂದ ಬಿಜೆಪಿ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದೆ.

ಇಷ್ಟೇ ಅಲ್ಲದೆ 25 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಬಿಜೆಪಿ 10-12 ಸ್ಥಾನಗಳಲ್ಲಿ ಜಯಗಳಿಸಲಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 1-2 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.

1 Comment
  1. […] ಇದನ್ನೂ ಓದಿ: Lok Sabha Election Survey: ಲೋಕಸಭಾ ಚುನಾವಣೆ ಸಮೀಕ್ಷೆ- ಕರ್… […]

Leave A Reply

Your email address will not be published.