Ram Lalla ನ ದರ್ಶನ ಪಡೆಯಲು ಮೊದಲ ದಿನವೇ ಗರ್ಭ ಗುಡಿ ಪ್ರವೇಶಿಸಿದ ರಾಮನ ಭಂಟ ಮಾರುತಿ!!
Ram Mandir: ಅಯೋಧ್ಯೆಯ(Ayodhya)ರಾಮಲಲ್ಲಾ(Ramlalla) ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಅದ್ಧೂರಿಯಿಂದ ಜರುಗಿದ್ದು, ಅಪಾರ ಸಂಖ್ಯೆಯ ಭಕ್ತರು ರಾಮನ ದರ್ಶನ ಪಡೆಯುತ್ತಿದ್ದಾರೆ. ಈ ನಡುವೆ, ರಾಮ ಲಲ್ಲಾನ ದರ್ಶನ ಪಡೆಯಲು ಗರ್ಭಗುಡಿಗೆ ರಾಮನ ಪರಮ ಭಕ್ತ ಎಂದೇ ಖ್ಯಾತಿ ಪಡೆದ ಮಾರುತಿಯೊಂದು (Balaram)ಪ್ರವೇಶಿಸಿದ ಘಟನೆ ವರದಿಯಾಗಿದೆ.
https://x.com/ShriRamTeerth/status/1749850186950824443?s=20
ಇದನ್ನೂ ಓದಿ: Pomegranate Benifits: ಬೆಳ್ಳಂಬೆಳಿಗ್ಗೆ ದಾಳಿಂಬೆ ಹಣ್ಣು ತಿಂದ್ರೆ ಇಷ್ಟೆಲ್ಲಾ ಪ್ರಯೋಜನಗಳು ಇದ್ಯ?
ರಾಮ ಮಂದಿರದ ಗರ್ಭಗುಡಿಗೆ ಮಂಗಳವಾರ ಸಂಜೆ 5:50ರ ವೇಳೆಗೆ ಕೋತಿಯೊಂದು ಪ್ರವೇಶಿಸಿದ ಪ್ರಸಂಗ ನಡೆದಿದ್ದು, ಇದನ್ನು ಕಂಡ ಜನರು ‘ರಾಮನನ್ನು ಭೇಟಿ ಮಾಡಲು ಹನುಮಂತನೇ ಬಂದನೇನೋ ಎಂದು ವ್ಯಾಖ್ಯಾನ ಮಾಡುತ್ತಿದ್ದಾರೆ. ದೇಗುಲದ ದಕ್ಷಿಣ ದ್ವಾರದಿಂದ ಪ್ರವೇಶಿಸಿದ ಕೋತಿ, ನೇರವಾಗಿ ಗರ್ಭ ಗುಡಿಗೆ ಬಂದಿದ್ದು, ಇದನ್ನು ಕಂಡ ಸಿಬ್ಬಂದಿ, ಉತ್ಸವ ಮೂರ್ತಿಯನ್ನು ಬೀಳಿಸಿದರೆ ಎಂಬ ಗೊಂದಲದಿಂದ ಗರ್ಭಗುಡಿ ಕಡೆಗೆ ಧಾವಿಸಿದ್ದಾರೆ. ಕೂಡಲೇ ವಾನರ, ನಿಧಾನವಾಗಿ ಪೂರ್ವ ದ್ವಾರದ ಕಡೆಗೆ ತೆರಳಿ ಕಿಂಚಿತ್ತೂ ಹಾನಿಯಾಗದ ರೀತಿಯಲ್ಲಿ ಯಾರಿಗೂ ಹಾನಿ ಮಾಡದೆ ಹೊರ ಹೋಗಿದೆ ಎಂದು ಸ್ವತಃ ಮಂದಿರ ಟ್ರಸ್ಟ್ ಮಾಹಿತಿ ನೀಡಿದೆ.