Mandya: ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು!!!

Mandya: ಮಂಡ್ಯ ಮೇಲುಕೋಟೆಯಲ್ಲಿ ನಡೆದ ಶಿಕ್ಷಕಿ ದೀಪಿಕಾ ಕೊಲೆ (Murder) ಪ್ರಕರಣ ಕುರಿತು ಹತ್ಯೆಯಾದ 30 ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿತೀಶ್‌ (21) ಬಂಧಿತ ಆರೋಪಿ.

ದೀಪಿಕಾರನ್ನು ಪ್ಲ್ಯಾನ್‌ ಮಾಡಿ ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಕೊಲೆಗೂ ಮೊದಲು ನಿತೀಶ್‌ ಗುಂಡಿ ತೆಗೆದಿದ್ದ. ನಂತರ ದೀಪಿಕಾರನ್ನು ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಅಡ್ಡಗಟ್ಟಿ ಕೊಲೆ ಮಾಡಿ ಹೂತು ಹಾಕಿರುವುದಾಗಿ ವರದಿಯಾಗಿದೆ.

ದೀಪಿಕಾರನ್ನು ಕೊಲೆ ಮಾಡಿದ ನಂತರ ನಿತೀಶ್‌ ಎರಡು ದಿನಗಳ ಕಾಲ ಗ್ರಾಮದಲ್ಲಿಯೇ ಇದ್ದ. ದೀಪಿಕಾಳ ಶವ ಪತ್ತೆಯಾಯಿತು ಎಂದು ಗೊತ್ತಾಯಿಯೋ ಆವಾಗ ನಾಪತ್ತೆಯಾಗಿದ್ದಾನೆ. ಆರೋಪಿಯನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಂಧನ ಮಾಡಲಾಗಿದೆ. ಮೇಲುಕೋಟೆ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

22 ವರ್ಷದ ನಿತೇಶ್‌ ದೀಪಿಕಾರನ್ನು ಅಕ್ಕ ಅಕ್ಕ ಎಂದೇ ಕರೆಯುತ್ತಿದ್ದ. ಆಕೆಗೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದ ಈತ ರೀಲ್ಸ್‌ ಮಾಡಲು ನೆರವಾಗುತ್ತಿದ್ದ ಎನ್ನಲಾಗಿದೆ. ನಿತೇಶ್‌ ಅಕ್ಕನೆಂದು ಕರೆಯುತ್ತಿದ್ದ ದೀಪಿಕಾ ಅವರ ವಿಚಾರದಲ್ಲಿ ಬೇರೆ ಭಾವನೆಗಳನ್ನು ವ್ಯಕ್ತಪಡಿಸಲು ಶುರು ಮಾಡಿದ್ದ ಎನ್ನಲಾಗಿದೆ. ಹಾಗಾಗಿ ಇವರಿಬ್ಬರ ನಡುವಿನ ಸಂಬಧದ ಬಗ್ಗೆ ಗಾಸಿಪ್‌ ಹರಿದಾಡುತ್ತಿದ್ದವು.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ದೀಪಿಕಾ ಆತನಿಂದ ಅಂತರ ಕಾಯ್ದುಕೊಂಡಿದ್ದರು. ಮಾತುಕತೆ, ಆತ್ಮೀಯತೆ, ಭೇಟಿ ಮೊದಲಿನ ಹಾಗೆ ಇಲ್ಲ ಎನ್ನಲಾಗಿದೆ. ಆದರೆ ದೀಪಿಕಾರನ್ನು ಅತಿಯಾಗಿ ಹಚ್ಚಿಕೊಂಡಿದ್ದ ನಿತೇಶ್‌ಗೆ ಇದು ಆಕ್ರೋಶವನ್ನುಂಟು ಮಾಡಿತ್ತು.

ಕಳೆದ ವಾರ ನಿತೇಶ್‌ ಹುಟ್ಟು ಹಬ್ಬವಿತ್ತು. ಈ ಹಿಂದೆ ನಿತೇಶ್‌ ಹುಟ್ಟು ಹಬ್ಬವೆಂದರೆ ದೀಪಿಕಾ ಸಂಭ್ರಮ ಪಡುತ್ತಿದ್ದರು. ಆದರೆ ಈ ಬಾರಿ ಆಕೆ ವಿಷ್‌ ಮಾಡಿಲ್ಲ ಎಂದು ಹೇಳಲಾಗಿದೆ. ಹಾಗಾಗಿ ಆತ ಮಧ್ಯಾಹ್ನ ಶಾಲೆಯಲ್ಲಿದ್ದ ದೀಪಿಕಾ ಅವರಿಗೆ ಕರೆ ಮಾಡಿದ್ದ ಎನ್ನಲಾಗಿದೆ. ಸುಮಾರು ಒಂದು ಗಂಟೆ ಕಾಲ ಶತಪಥ ತಿರುಗುತ್ತಾ ಫೋನಿನಲ್ಲಿ ಮಾತನಾಡಿದ್ದ ದೀಪಿಕಾ ಅಲ್ಲಿಂದ ಹೊರಟಿದ್ದರು ಎನ್ನಲಾಗಿದೆ.

ಹಾಗೆ ಹೊರಟ ದೀಪಿಕಾ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿಗೆ ಬಂದಿದ್ದಾರೆ. ಅಲ್ಲಿ ಇವರಿಬ್ಬರ ಮಧ್ಯೆ ಮಾತುಕತೆ ನಡೆದಿದೆ. ಎರಡು ವರ್ಷಗಳಿಂದ ಒಳ್ಳೆಯ ರೀತಿಯಲ್ಲಿದ್ದು ಇದೀಗ ಏಕೆ ದೂರ ಮಾಡಿದ್ದು ಎಂದು ಪ್ರಶ್ನೆ ಮಾಡಿ, ದೂರ ಮಾಡಬೇಡಿ ಎಂದು ಕೇಳಿಕೊಂಡಿದ್ದಾನೆ ಎನ್ನಲಾಗಿದೆ. ಇದು ಇವರಿಬ್ಬರ ನಡುವೆ ಜಗಳವಾಗಿ ಮಾರ್ಪಾಡಾಗಿದೆ. ಅಂತಿಮವಾಗಿ ಶಾಲಿನಿಂದ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾನೆ. ನಂತರ ಶವವನ್ನು ಕೆಳಗೆ ಎಳೆದುಕೊಂಡು ಹೋಗಿ ಮಣ್ಣಲ್ಲೇ ಹೂತು ಹಾಕಿದ್ದಾಣೆ.

 

Leave A Reply

Your email address will not be published.