Honour Killing: ತಂಗಿ, ತಾಯಿಯನ್ನೇ ನಿರ್ದಯೆಯಿಂದ ನೀರಿಗೆ ತಳ್ಳಿ ಕೊಂದ ಅಣ್ಣ; ಇದರ ಹಿಂದಿದೆ ಬೆಚ್ಚಿ ಬೀಳಿಸುವ ಕಾರಣ!!

Honour Killing : ಮೈಸೂರು ಜಿಲ್ಲೆಯಲ್ಲಿ(Mysore News) ಹೃದಯ ವಿದ್ರಾವಕ (Heart touching Incident) ಘಟನೆ ವರದಿಯಾಗಿದೆ. ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನೇ ಕೆರೆಗೆ ತಳ್ಳಿ ಕೊಲೆ (Young Man kills sister and mother) ಮಾಡಿದ ಘಟನೆ (Honour Killing)ವರದಿಯಾಗಿದೆ.

ಇದನ್ನೂ ಓದಿ: Puttur : ಅನಾರೋಗ್ಯದಿಂದ ಇಂಜಿನಿಯರಿಂಗ್ ಪದವೀಧರೆ ಮೃತ್ಯು!!

ಹುಣಸೂರು ತಾಲ್ಲೂಕು ಮರೂರು ಗ್ರಾಮದಲ್ಲಿ ನಿತಿನ್‌ ಎಂಬ ವ್ಯಕ್ತಿ ತನ್ನ ತಂಗಿ ಧನುಶ್ರೀ (19) ಮತ್ತು ತಾಯಿ ಅನಿತಾ (43) ಅವರನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಧನುಶ್ರೀ ಅನ್ಯ ಕೋಮಿನ ಯುವಕನ ಜೊತೆಗೆ ತುಂಬಾ ಸಲುಗೆಯಿಂದ ಇದ್ದದ್ದನ್ನು ತಿಳಿದು ಸಿಟ್ಟಿಗೆದ್ದಿದ್ದ ನಿತಿನ್‌ ತಂಗಿಯನ್ನು ನೀರಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಈ ಸಂದರ್ಭ ಮಗಳನ್ನು ರಕ್ಷಿಸಲು ಮುಂದಾದ ತಾಯಿಯನ್ನು (Honour Killing)ಕೂಡ ಕೆರೆಗೆ ತಳ್ಳಿದ್ದಾನೆ.

ನಿತಿನ್ ಈ ಮೊದಲೂ ತಂಗಿಗೆ ಅನ್ಯಕೋಮಿನ ಯುವಕನ ಜೊತೆಗೆ ಓಡಾಟ ನಡೆಸದಂತೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಆದಾಗ್ಯೂ, ಎಷ್ಟು ಹೇಳಿದರೂ ತನ್ನ ಮಾತನ್ನು ಕೇಳದೆ ಅನ್ಯ ಕೋಮಿನ ಯುವಕನ ಜತೆಗಿನ ಸುತ್ತಾಟವನ್ನೇ ಮುಂದುವರಿಸಿದ ತಂಗಿಯ ಮೇಲೆ ಸಿಟ್ಟುಗೊಂಡ ನಿತಿನ್‌ ತಂಗಿಯನ್ನು ಹತ್ಯೆ ಮಾಡಿದ್ದಾನೆ. ಆರೋಪಿ ನಿತಿಶ್ ತಲೆಮರೆಸಿಕೊಂಡಿದ್ದು, ಇದೀಗ ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹೊರಗೆ ತೆಗೆದಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Leave A Reply

Your email address will not be published.