Ayodhya: ರಾಮಮಂದಿರಕ್ಕೆ ಗಣೇಶ್‌ ಭಟ್‌ ಅವರು ಕೆತ್ತಿದ ರಾಮನ ಪ್ರತಿಮೆ ಹೇಗಿದೆ? ಇಲ್ಲಿದೆ ನೋಡಿ!!!

Share the Article

ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠೆ ಮಾಡಲಾಗಿದೆ. ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಕಡೆದ ಬಾಲ ರಾಮ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಮೂವರು ಶಿಲ್ಪಿಗಳು ಪ್ರತ್ಯೇಕವಾಗಿ ರಾಮಮಂದಿರಕ್ಕಾಗಿ ಮೂರು ಮೂರ್ತಿಗಳನ್ನು ಕೆತ್ತಿದ್ದರು. ಅದರಲ್ಲಿ ಅರುಣ್‌ ಅವರ ರಚನೆಯ ಮೂರ್ತಿ ಪ್ರತಿಷ್ಠೆಗಾಗಿ ಆಯ್ಕೆ ಮಾಡಲಾಗಿತ್ತು.

ಕನ್ನಡಿಗರಿಬ್ಬರು ಕೃಷ್ಣ ಶಿಲೆಯಲ್ಲಿ ರಾಮಮೂರ್ತಿಗಳನ್ನು ಕೆತ್ತಿದ್ದರು. ಅಮೃತ ಶಿಲೆಯಲ್ಲಿ ಪಾಂಡೆಯವರು ರಾಮಮೂರ್ತಿ ಕೆತ್ತಿದ್ದರು. ಸತ್ಯನಾರಾಯಣ ಪಾಂಡೆ ಅವರು ಕೆತ್ತಿದ್ದ ಮೂರ್ತಿಯನ್ನು ಮಂಗಳವಾರ ಅನಾವರಣ ಮಾಡಲಾಗಿತ್ತು.

ಇದೀಗ ಹೊನ್ನಾವರದ ಗಣೇಶ್‌ ಭಟ್‌ ಅವರ ನೇತೃತ್ವದಲ್ಲಿ ರಚಿಸಿದ ರಾಮಲಲ್ಲಾನ ಮೂರ್ತಿ ಬಿಡುಗಡೆಯಾಗಿದೆ.

ಸೂರ್ಯ ದೇವರು ಕಿರೀಟದಲ್ಲಿ ನೆಲೆಸಿದ್ದು, ಸೂರ್ಯ ಚಕ್ರ, ವಿಗ್ರಹದ ಮೇಲೆ ಸಿಂಹ ಲಲಾಟವನ್ನು ಇಲ್ಲಿ ಮಾಡಲಾಗಿದೆ.

ಬಿಲ್ಲು ಬಾಣ ಹೊಂದಿದೆ. ವಾಲ್ಮೀಕಿ ರಾಮಾಯಣದ ಪ್ರಕಾರ ಮುಖವನ್ನು ಕೆತ್ತನೆ ಮಾಡಲಾಗಿದೆ. ಏಕಶಿಲೆಯ ಮೂರ್ತಿ ಇದಾಗಿದ್ದು, ಕಮಲ ದಳದ ಪೀಠವಿದೆ. ಇದನ್ನು ಹೊಯ್ಸಳ ಶೈಲಿಯಲ್ಲಿ ಕೆತ್ತಲಾಗಿದೆ ಎಂದು ವರದಿಯಾಗಿದೆ.

Leave A Reply

Your email address will not be published.