Ram Mandir: ರಾಜಸ್ಥಾನ ಶಿಲ್ಪಿಯ ವಿಗ್ರಹ ಆಯ್ಕೆಯಾಗಿದ್ದರೆ ಬಾಲಕ ರಾಮ ಹೇಗಿರುವ ಗೊತ್ತೇ? ಇಲ್ಲಿದೆ ನೋಡಿ ಫೋಟೋಸ್‌!

Ayodhya Ram Mandir: ಅಯೋಧ್ಯೆಯ ಭವ್ಯ ಮಂದಿರದ ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ರಾಮಲಲ್ಲಾ ಮೂರ್ತಿ (Ram Lalla Idol) ವಿರಾಜಮಾನವಾಗಿದೆ. ಪ್ರಾಣ ಪ್ರತಿಷ್ಠೆಗಾಗಿ ಒಟ್ಟು ಮೂರು ಮೂರ್ತಿಗಳನ್ನು ಅಂತಿಮವಾಗಿ ಸೆಲೆಕ್ಟ್‌ ಮಾಡಲಾಗಿತ್ತು. ರಾಜಸ್ಥಾನದ ಸತ್ಯನಾರಾಯಣ ಪಾಂಡೆ (Rajashan Sculptor) ಕೆತ್ತಿದ ಬಿಳಿ ಅಮೃತಶಿಲೆಯ ವಿಗ್ರಹ ಫೋಟೋ ಇದೀಗ ಬಹಿರಂಗವಾಗಿದ್ದು, ವೈರಲ್‌ ಆಗುತ್ತಿದೆ. (White Marble Ram Lalla Idol).

ಬಿಳಿ ಅಮೃತಶಿಲೆಯ ವಿಗ್ರಹವು ಪ್ರಸ್ತುತ ಟ್ರಸ್ಟ್‌ನಲ್ಲಿದೆ. ಈ ವಿಗ್ರಹದ ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣವಿದೆ. ದೇವತೆಯ ಹಿಂದೆ ಕಮಾನಿನಂತಿರುವ ರಚನೆಯು ವಿಷ್ಣುವಿನ ವಿವಿಧ ಅವತಾರಗಳನ್ನು ಚಿತ್ರಿಸುವ ಸಣ್ಣ ಶಿಲ್ಪಗಳನ್ನು ಒಳಗೊಂಡಿದೆ. ರಾಮ ಅಲಂಕರಿಸುವ ಆಭರಣಗಳು ಮತ್ತು ಬಟ್ಟೆಗಳ ಕೆತ್ತನೆಯು ವಿಗ್ರಹವು ಗಮನಾರ್ಹವಾದ ಕುಶಲತೆಗೆ ಸಾಕ್ಷಿಯಾಗಿದೆ. ವಿಗ್ರಹದ ಮಾನದಂಡಗಳು, ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಯ ಟ್ರಸ್ಟ್‌ನಿಂದ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿಯೇ ಇವೆ.

ಈ ವಿಗ್ರಹ ಪ್ರಸ್ತುತ ಟ್ರಸ್ಟ್‌ನಲ್ಲಿದೆ. ಇದರಲ್ಲಿ ಚಿನ್ನದ ಬಿಲ್ಲು ಮತ್ತು ಬಾಣವಿದೆ. ವಿಷ್ಣುವಿನ ವಿವಧ ಅವತಾರಗಳನ್ನು ಚಿತ್ರಿಸುವ ಸಣ್ಣ ಸಣ್ಣ ಶಿಲ್ಪಗಳನ್ನು ಒಳಗೊಂಡಿದೆ.

ಅಂದ ಹಾಗೆ ಭಕ್ತರಲ್ಲಿ ರಾಮ ಲಲ್ಲಾ ವಿಗ್ರಹಕ್ಕೆ ಕಪ್ಪು ಶಿಲೆ ಅಥವಾ ಕೃಷ್ಣ ಶಿಲೆಯನ್ನು (Krishna Shila) ಯಾಕೆ ಬಳಸಲಾಗಿದೆ ಎಂಬ ಪ್ರಶ್ನೆ ಇದೆ. ಈ ಶಿಲೆ ಬಳಸುವುದಕ್ಕೂ ಕಾರಣವಿದೆ.

51 ಇಂಚಿನ ಕಪ್ಪು ಶಿಲೆಯ ವಿಗ್ರಹವನ್ನು, 2.5 ಶತಕೋಟಿ ಹಳೆಯ ಕಲ್ಲಿನಿಂದ ಕೆತ್ತಲಾಗಿದೆ. ಈ ಶಿಲೆಯು ಹೆಚ್ಚು ಬಾಳಿಕೆ ಬರುವುದರ ಜೊತೆಗೆ ಮತ್ತು ಹವಾಮಾನ ಬದಲಾವಣೆಯಿಂದ ನಷ್ಟವಾಗುವುದಿಲ್ಲ. ಕನಿಷ್ಠ ನಿರ್ವಹಣೆಯೊಂದಿಗೆ ಈ ಉಪೋಷ್ಣವಲಯದ ವಲಯದಲ್ಲಿ ಸಾವಿರಾರು ವರ್ಷಗಳ ಕಾಲ ಉಳಿಯುತ್ತದೆ ಎಂದು ಎಂದು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ಸ್‌ನ ಎಚ್ ಎಸ್ ವೆಂಕಟೇಶ್ ಅವರು ಹೇಳಿದ್ದಾರೆ. ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್‌ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲುವುದಿಲ್ಲ, ತುಕ್ಕು ಹಿಡಿಯುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ಕಲ್ಲು ಇದು.

 

Leave A Reply

Your email address will not be published.