Ram Mandir Inauguration: ಮಂದಿರದ ವತಿಯಿಂದ ಆಹ್ವಾನಿತರಿಗೆ ಪ್ರಸಾದದ ಡಬ್ಬಿ; ಇದರಲ್ಲಿ ಏನೇನಿತ್ತು ಗೊತ್ತೇ?

Share the Article

Ram Mandir Inauguration: ಸೋಮವಾರ (ಜನವರಿ 22) ಅಯೋಧ್ಯೆಯಲ್ಲಿ ಭಗವಾನ್ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿದಿದ್ದು, ಈ ಪ್ರಾಣ ಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ವಿಶೇಷ ಪ್ರಸಾದ ನೀಡಲಾಗಿತ್ತು. ಈ ಸಿಹಿಗಳನ್ನು ಪ್ರಸಾದ ಡಬ್ಬಿಯಲ್ಲಿ ನೀಡಲಾಗಿದ್ದು, ಎಂಟು ವಸ್ತುಗಳನ್ನು ಪ್ರತಿ ಬಾಕ್ಸ್‌ನಲ್ಲಿ ಇಡಲಾಗಿತ್ತು.

ಶುದ್ಧ ತುಪ್ಪದಿಂದ ಮಾಡಿದ ಗೋಧಿ ಹಿಟ್ಟು ಬಳಸಿ ಮಾಡಿದ ಲಡ್ಡುಗಳು, ರಾಮ್‌ದಾನ ಚಿಕ್ಕಿ, ಎಳ್ಳು ಬೆಲ್ಲದಿಂದ ಮಾಡುವ ವಿಶೇಷ ತಿನಿಸು ಗುರ್‌ ರೇವರಿ, ಪ್ರಾಚೀನ ಕಾಲದಿಂದಲೂ ದೇಗುಲಗಳಲ್ಲಿ ಪ್ರಸಾದವಾಗಿ ನೀಡುತ್ತಿರುವ ಎಲಾಚಿದಾನ್‌( ಎಲಾಚಿ ಸಕ್ಕರೆ ಉಂಡೆ), ಅಕ್ಷತೆ, ಕುಂಕುಮ ಹಾಗೂ ಕೃಷ್ಣನಿಗೆ ಪ್ರಿಯವಾದ ತುಳಸಿದಳ, ರಾಮದೀಪ, ಮೌಲಿ ಕಾಲವ (ಕೆಂಪುದಾರ) ಇವು ಒಳಗೊಂಡಿದೆ.

ಪ್ರಸಾದ ತುಂಬಿದ ಪೆಟ್ಟಿಗೆಯ ಬಣ್ಣ ಕೇಸರಿ. ಬಾಕ್ಸ್ ಮೇಲೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಲೋಗೋ ಬರೆಯಲಾಗಿದೆ. ಇದಲ್ಲದೇ ಪೆಟ್ಟಿಗೆಯ ಮೇಲೆ ಹನುಮಂತನಗರದ ಜನರೊಂದಿಗೆ ದ್ವಿಪದಿಯನ್ನೂ ಬರೆಯಲಾಗಿದೆ.

ಲಕ್ನೋದ ಛಪ್ಪನ್ ಭೋಗ್ ಅವರು ಈ ಪ್ರಸಾದವನ್ನು ರಾಮಮಂದಿರದ ಅತಿಥಿಗಳಿಗಾಗಿ ಅರ್ಪಿಸಿದ್ದಾರೆ. ರೋಲಿ-ಅಕ್ಷತ್ ಪ್ರತ್ಯೇಕವಾಗಿ ಸುಂದರವಾಗಿ ಪ್ಯಾಕ್ ಮಾಡಲಾಗಿದೆ.

 

Leave A Reply

Your email address will not be published.