Suicide: ಆತ್ಮಹತ್ಯೆ ಮಾಡುವುದಾಗಿ ಸೇತುವೆ ಹತ್ತಿ ನಿಂತ ಭೂಪ, ಬಿರಿಯಾನಿ ಆಮಿಷವೊಡ್ಡಿದ ಪೊಲೀಸರು; ಮುಂದೇನಾಯ್ತು ಗೊತ್ತೇ?
Suicide: ಕೊಲ್ಕತ್ತಾದ ಕಲಿಯಾ ಪ್ರದೇಶದ ಟೈಲ್ಸ್ ವ್ಯಾಪಾರಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ಸೇತುವೆ ಮೇಲೆ ಏರಿದ್ದ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಎನ್ನಲಾಗಿದೆ. ಅಲ್ಲದೇ ಪತ್ನಿ ಜೊತೆ ಕೂಡಾ ಗಲಾಟೆ ನಡೆದಿತ್ತು. ಹೆಂಡತಿ ತನ್ನ ಕಿರಿಯ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಇವರಿಬ್ಬರು ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರ ವಿಚಾರಣೆ ನಡೆಯುತ್ತಿತ್ತು ಎನ್ನಲಾಗಿದೆ.
ಹಿರಿಯ ಮಗಳೊಂದಿಗೆ ವಾಸಿಸುತ್ತಿದ್ದ ಈ ವ್ಯಕ್ತಿ, ಇತ್ತೀಚಿನ ಎಲ್ಲಾ ತೊಂದರೆಗಳಿಂದ ಕಂಗೆಟ್ಟಿದ್ದು, ಸೋಮವಾರ ಮಗಳ ಜೊತೆ ದ್ವಿಚಕ್ರ ವಾಹನದಲ್ಲಿ ಬರುವಾಗ ಮಧ್ಯಾಹ್ನ 2.40 ರ ಸುಮಾರಿಗೆ ತನ್ನ ಮೊಬೈಲ್ ಫೋನ್ ಕೆಳಗೆ ಬಿದ್ದಿದೆ ಎಂದು ಗಾಡಿ ನಿಲ್ಲಿಸಿದ್ದು, ನಂತರ ಸೀದಾ ಕಬ್ಬಿಣದ ಸೇತುವೆ ಮೇಲೆ ಏರಿ ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಒಂದು ವೇಳೆ ಆತ ಅಲ್ಲಿಂದ ಹಾರಿದ್ದರೆ ವಿದ್ಯುತ್ ತಂತಿಗಳ ಮೇಲೆ ಅಥವಾ ರೈಲು ಹಳಿಯ ಮೇಲೆ ಬೀಳುವ ಸಾಧ್ಯತೆ ಇತ್ತು. ಇದರಿಂದ ಪ್ರಾಣಾಪಾಯ ಕೂಡಾ ಇತ್ತು.
ಈ ವಿಷಯ ಪೊಲೀಸರಿಗೆ ತಲುಪಿದ್ದು, ಕೂಡಲೇ ಅವರು ಸ್ಥಳಕ್ಕೆ ಬಂದಿದ್ದರು. ಪೊಲೀಸರು ಆತನ ಮನವೊಲಿಸಲು ಪ್ರಯತ್ನ ಪಟ್ಟರೂ ಮುಂದಾಗಿದ್ದಾರೆ. ಆದರೆ ಇದ್ಯಾವ ಮಾತು ಕೇಳುವ ಸ್ಥಿತಿಯಲ್ಲಿರದ ಆತನಿಗೆ ಅಂತಿಮವಾಗಿ ಟಾಪ್ ರೆಸ್ಟೋರೆಂಟ್ನಿಂದ ಬಿರಿಯಾನಿ ತಂದು ಕೊಡುವುದಾಗಿ ಹೇಳಿದ್ದಾರೆ.
ನಂತರ ಜೀವನೋಪಯಕ್ಕಾಗಿ ಉತ್ತಮ ಉದ್ಯೋಗ ಕೊಡುವುದಾಗಿ ಹೇಳಿದ್ದು, ನಂತರ ಆತ ಕೆಳಗಿಳಿದು ಪ್ರಕರಣ ಸುಖಾಂತ್ಯಗೊಂಡಿದೆ.