Ayodhya Special: ರಾಮಮಂದಿರ ಉದ್ಘಾಟನೆ; ಮಗುವಿಗೆ ʼರಾಮ್‌ ರಹೀಮ್‌ʼ ಎಂದು ನಾಮಕರಣ ಮಾಡಿದ ಮುಸ್ಲಿಂ ಕುಟುಂಬ!!

Share the Article

UP: ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆಯ ದಿನ ಸೋಮವಾರ ಫಿರೋಜಾಬಾದ್‌ನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿ ರಾಮ್‌ ರಹೀಮ್‌ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಹಿಂದೂ ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರಿದ್ದಾರೆ ಎನ್ನಬಹುದು.

ರಾಮಮಂದಿರ ಉದ್ಘಾಟನೆಯ ದಿನವೇ ಮಗು ಜನಿಸಿದ ಕಾರಣ ಮಗುವಿನ ಅಜ್ಜಿ ಹುಸ್ನಾ ಬಾನು ಅವರು ಮಗುವಿಗೆ ʼರಾಮ್‌ ರಹೀಮ್‌ʼ ಎಂದು ಹೆಸರಿಟ್ಟಿದ್ದಾರೆ.

ಮಗುವಿಗೆ ರಾಮ್‌ ರಹೀಮ್‌ ಹೆಸರಿಟ್ಟು ಹಿಂದೂ ಮುಸ್ಲಿಂ ಏಕತೆಯ ಸಂದೇಶ ನೀಡಿದ್ದೇವೆ ಎಂದು ಮಗುವಿನ ಅಜ್ಜಿ ಹೇಳಿದ್ದಾರೆ.

ಸೋಮವಾರ ಮಹಿಳಾ ಆಸ್ಪತ್ರೆಯಲ್ಲಿ ಫಿರೋಜಾಬಾದ್‌ ಫರ್ಜಾನಾ ಎಂಬ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

Leave A Reply