Ayodhya District: ಅಯೋಧ್ಯೆಯಲ್ಲಿ ರಾಮಮಂದಿರ ಬೆನ್ನಲ್ಲೇ ಮಸೀದಿ ನಿರ್ಮಾಣ ಯೋಜನೆ!!
Ayodhya District: ಅಯೋಧ್ಯೆಯಲ್ಲಿ (Ayodhya District) ರಾಮ ಮಂದಿರ ಉದ್ಘಾಟನೆಯ ಬೆನ್ನಲ್ಲೇ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಈ ವರ್ಷದ ಕೊನೆಯಲ್ಲಿ ಅದೇ ನಗರದಲ್ಲಿ ಹೊಸ ಮಸೀದಿ ನಿರ್ಮಾಣವನ್ನು ಪ್ರಾರಂಭ ಮಾಡಲು ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: Santan Rally ವೇಳೆ ಕಿಡಿಗೇಡಿಗಳಿಂದ ದಾಳಿ; ಧಾರ್ಮಿಕ ಧ್ವಜ ಹರಿದು ವಿಕೃತಿ!!
ರಾಮ ಮಂದಿರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಹಣವನ್ನು ಸಂಗ್ರಹಿಸಲು ಮತ್ತು ಕೆಲಸವನ್ನು ಪ್ರಾರಂಭಿಸಲು ಮುಸ್ಲಿಂ ಗುಂಪುಗಳು ಪ್ರಯತ್ನ ನಡೆಸುತ್ತಿದೆ. ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಮಸೀದಿ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಪವಿತ್ರ ರಂಜಾನ್ ತಿಂಗಳ ಬಳಿಕ ಮೇ ತಿಂಗಳಲ್ಲಿ ನಿರ್ಮಾಣ ಪ್ರಾರಂಭವಾಗಲಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಮಸೀದಿ ಪೂರ್ಣಗೊಳ್ಳಲು ಮೂರರಿಂದ ನಾಲ್ಕು ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.