C M Siddaramaiah: ಜ. 22 ರಂದು ಪ್ರಧಾನಿ ಮೋದಿಯಿಂದ ರಾಮನ ಪ್ರಾಣ ಪ್ರತಿಷ್ಠೆ , ಸಿಎಂ ಸಿದ್ದರಾಮಯ್ಯರಿಂದ ರಾಮ ಮಂದಿರ ಉದ್ಘಾಟನೆ !!

Share the Article

C M Siddaramaiah: ಜನವರಿ 22ರಂದು ಅಯೋಧ್ಯೆಯಲ್ಲಿ 500 ವರ್ಷಗಳ ಹಿಂದೂಗಳ ಕನಸು ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಭವ್ಯ ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ನಡೆಸಲಿದ್ದಾರೆ. ವಿಶೇಷ ಅಂದೂರೃ ಈ ದಿನವೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ(C M Siddaramaiah)ಅವರು ರಾಮ ಮಂದಿರ ಉದ್ಘಾಟನೆ ಆಗಲಿದೆ.

ಹೌದು, ಜನವರಿ 22 ದೇಶದಲ್ಲಿ ಐತಿಹಾಸಿಕ ದಿನವಾಗಿ ಉಳಿಯಲಿದೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಬಾಲ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಆದರೆ, ಇತ್ತ ಬೆಂಗಳೂರಿನಲ್ಲಿ ನಿರ್ಮಾಣ ಆಗಿರುವ ಭವ್ಯ ರಾಮ ಮಂದಿರವನ್ನು(Ramamandir) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡುತ್ತಿದ್ದಾರೆ.

ಬೆಂಗಳೂರು(Bengaluru)ಪೂರ್ವ ತಾಲೂಕಿನ ಬಿದರಹಳ್ಳಿಯಲ್ಲಿ ಶ್ರೀರಾಮ ಟ್ರಸ್ಟ್ ನಿರ್ಮಿಸಿರುವ ಸೀತಾ-ರಾಮ, ಲಕ್ಷ್ಮಣ, ಆಂಜನೇಯ ದೇವಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 22ರಂದು ಉದ್ಘಾಟಿಸಲಿದ್ದಾರೆ. ವಿಶೇಷ ಅಂದರೆ ಇಲ್ಲಿ ಸೀತಾ-ರಾಮ ಲಕ್ಷ್ಮಣ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

Leave A Reply