Maldives : ಭಾರತದ ಮೇಲಿನ ದ್ವೇಷ – ಬಾಲಕನ ಪ್ರಾಣವನ್ನೇ ತೆಗೆದ ಮಾಲ್ಡೀವ್ಸ್!!

Maldives : ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ(PM Modi)ಯವರು ಲಕ್ಷದ್ವೀಪಕ್ಕೆ ನೀಡಿದ ಭೇಟಿಯಿಂದಾಗಿ ಆರ್ಥಿಕವಾಗಿ ನೆಲಕಚ್ಚಿರುವ ಮಾಲ್ಡೀವ್ಸ್ ಚೀನಾ ದೇಶದ ಸಹವಾಸ ಮಾಡಿ ಭಾರತದ ವಿರುದ್ಧ ತಿರುಗಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಭಾರತದ ಮೇಲಿನ ದ್ವೇಷದಿಂದ ಈ ಮಾಲ್ಡೀವ್ಸ್(Maldives)ಒಬ್ಬ ಬಾಲಕನ ಜೀವವನ್ನೇ ತೆಗೆದಿದೆ.

ಹೌದು, ಸುಕಾಸುಮ್ಮನೆ ಭಾರತದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿಕೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷನ ಹಠಮಾರಿತನಕ್ಕೆ 14 ವರ್ಷದ ಬಾಲಕ ಬಲಿಯಾಗಿರುವ ಘಟನೆ ವರದಿಯಾಗಿದೆ. ಜೀವವನ್ನು ಉಳಿಸಬಹುದಾದ ಭಾರತೀಯ ಡೋರ್ನಿಯರ್ ವಿಮಾನದ ಬಳಕೆಗೆ ಅಧ್ಯಕ್ಷ ಮೊಹಮ್ಮದ್ ಮುಯಿಝು ಅನುಮತಿ ನಿರಾಕರಿಸಿದ್ದು, ಇದರಿಂದಾಗಿ 14 ವರ್ಷದ ಮಾಲ್ಡೀವ್ಸ್ ಬಾಲಕ ಶನಿವಾರ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಏನಿದು ಘಟನೆ?
ಉತ್ತರ ಕೊರೊಲಿನಾದ ಗಾಫ್‌ ಆಲಿಫ್‌ ವಿಲ್ಲಿಂಗ್ಲಿಯಲ್ಲಿರುವ ದೂರದ ವಿಲ್ಮಿಂಗ್ಟನ್‌ ದ್ವೀಪದಲ್ಲಿ ವಾಸಿಸುವ 13 ವರ್ಷದ ಬಾಲಕನೊಬ್ಬನಿಗೆ ಸ್ಟ್ರೋಕ್‌ ಆಗಿದೆ. ಆತನು ಬ್ರೇನ್‌ ಟ್ಯೂಮರ್‌ನಿಂದ ಬಳಲುತ್ತಿರುವ ಕಾರಣ ಕ್ಷಿಪ್ರವಾಗಿ ಉನ್ನತ ಚಿಕಿತ್ಸೆಯ ಅನಿವಾರ್ಯತೆ ಉಂಟಾಗಿದೆ. ಆಗ ಆತನ ಪೋಷಕರು ಮಾಲ್ಡೀವ್ಸ್‌ ರಾಜಧಾನಿ ಮಾಲೆಯಲ್ಲಿರುವ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲು ಮುಂದಾಗಿದ್ದಾರೆ. ಭಾರತದ ವಿಮಾನದಲ್ಲಿ ಏರ್‌ಲಿಫ್ಟ್‌ ಮಾಡಲು ತೀರ್ಮಾನಿಸಿದ್ದು, ಮಾಲ್ಡೀವ್ಸ್‌ ಸರ್ಕಾರದ ಅನುಮತಿ ಕೇಳಿದ್ದಾರೆ. ಆದರೆ ಚೀನಾ ಪರ ನಿಲುವು ಹೊಂದಿರುವ, ಚೀನಾವನ್ನು ಓಲೈಸುವ ಮೊಹಮ್ಮದ್‌ ಮುಯಿಜು ನೇತೃತ್ವದ ಸರ್ಕಾರವು ಭಾರತದ ವಿಮಾನದಲ್ಲಿ ಏರ್‌ಲಿಫ್ಟ್‌ ಮಾಡಲು ಅನುಮತಿ ನೀಡಿಲ್ಲ.

ಮಾಲ್ಡೀವ್ಸ್‌ನಿಂದ ಬಾಲಕನನ್ನು ಭಾರತಕ್ಕೆ ಕರೆ ತರಲು ಭಾರತದ ಹೆಲಿಕಾಪ್ಟರ್ ಕೂಡಾ ಸಿದ್ದವಿತ್ತು. ಆದರೆ, ಅನುಮತಿ ನೀಡಲು ಮಾಲ್ಡೀವ್ಸ್ ಸರ್ಕಾರ ಮೀನಮೇಷ ಎಣಿಸಿತು. ಹೀಗಾಗಿ, ಬಾಲಕ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾನೆ. ಈ 16 ನಿರ್ಣಾಯಕ ಗಂಟೆಗಳ ವಿಳಂಬವು ಗಾಫ್ ಅಲಿಫ್ ವಿಲ್ಲಿಂಗಿಲಿಯ ಆಸ್ಪತ್ರೆಯ ಬಳಿ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಏಕೆಂದರೆ ವಿಳಂಬದ ಬಗ್ಗೆ ಕುಟುಂಬಸ್ಥರು ಹಾಗೂ ಜನ ಸಮುದಾಯ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ.

Leave A Reply

Your email address will not be published.