Ayodhya rama mandir: ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ- ಮುಸ್ಲಿಂಮರಿಂದ ಮಂದಿರಕ್ಕೆ ಬಂತು ವಿಶೇಷ ಉಡುಗೊರೆ !!
Ayodhya rama mandir: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಧಾರ್ಮಿಕ ವಿಧಿ-ವಿಧಾನಗಳು ಪ್ರಾರಂಭವಾಗಿವೆ. ದೇಶಾದ್ಯಂತ ಜನರು ಜಾತಿ-ಭೇಧಗಳನ್ನು ಮರೆತು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಅನೇಕ ಉಡುಗೊರೆಗಳೂ ಹರಿದುಬರುತ್ತಿವೆ. ಇದೀಗ ಮುಸ್ಲಿಂ ಬಂಧುಗಳೂ ಕೂಡ ಮಂದಿರ ಉದ್ಘಾಟನೆಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
https://x.com/ANI/status/1748559543620264312?t=xrFoiUTpJSsJF-s7yjpz-Q&s=08
ಇದನ್ನು ಓದಿ: LIC ಯಿಂದ ಮತ್ತೊಂದು ಅದ್ಭುತವಾದ ಪಾಲಿಸಿ, ಈ ಯೋಜನೆಯಿಂದ ಏನೆಲ್ಲ ಯೂಸ್ ಗಳಿದೆ ಗೊತ್ತಾ?
ಹೌದು, ಅಯೋಧ್ಯೆಯ ರಾಮ ಮಂದಿ(Ayodhya rama mandir)ರಕ್ಕೆ ಅಫ್ಘಾನಿಸ್ತಾನ, ಕಾಶ್ಮೀರದ ಮುಸ್ಲಿಮರಿಂದ ವಿಶೇಷ ಉಡುಗೊರೆ ಬಂದಿದೆ. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಅವರು ಕಾಶ್ಮೀರ, ತಮಿಳುನಾಡು ಮತ್ತು ಅಫ್ಘಾನಿಸ್ತಾನದಿಂದ ಪಡೆದ ಉಡುಗೊರೆಗಳನ್ನು ಶ್ರೀ ರಾಮ ದೇವಾಲಯದ ‘ಯಾಜ್ಮನ್’ ಅನಿಲ್ ಮಿಶ್ರಾ ಅವರಿಗೆ ಹಸ್ತಾಂತರಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್ ಅವರು ‘ಕಾಶ್ಮೀರದ ಮುಸ್ಲಿಂ ಸಹೋದರ ಸಹೋದರಿಯರು ನನ್ನನ್ನು ಭೇಟಿಯಾಗಲು ಬಂದು ರಾಮ ಮಂದಿರ ನಿರ್ಮಾಣದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಮತ್ತು ನಾವು ವಿಭಿನ್ನ ಧರ್ಮಗಳನ್ನು ನಂಬಿದರೂ, ನಮ್ಮ ಪೂರ್ವಜರು ಒಂದೇ’ ಎಂದು ಹೇಳಿದರು. ಇನ್ನು ಅವರು ನೀಡಿದ, ಸಾವಯವವಾಗಿ ಉತ್ಪಾದಿಸಿದ 2 ಕೆಜಿ ಶುದ್ಧ ಕೇಸರಿಯನ್ನು ದೇವಾಲಯಕ್ಕೆ ಹಸ್ತಾಂತರಿಸಿದರು.