Drone prathap: ಗ್ರಾಂಡ್ ಫಿನಾಲೆ ಟೈಮಲ್ಲಿ ಡ್ರೋನ್ ಪ್ರತಾಪ್ ಜೈಲು ಪಾಲು !!

Drone prathap: ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದಲ್ಲಿ ಇದೀಗ 15ನೇ ವಾರ ಚಾಲ್ತಿಯಲ್ಲಿದೆ. ಅಂದರೆ ಮುಕ್ತಾಯದ ಹಂತದಲ್ಲಿದೆ. ಮುಂದಿನ ವಾರವೇ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ಪ್ರೇಕ್ಷಕರು, ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ. ನಾಡಿನ ಹೆಚ್ಚಿನ ಅಭಿಮಾನಿಗಳಿಗೆ ಡ್ರೋನ್ ಪ್ರತಾಪ್(Drone prathap) ಗೆಲ್ಲಬೇಕೆಂಬುದೇ ಆಸೆ. ಆದರೆ ಇದೀಗ ಶಾಕಿಂಗ್ ಎಂಬಂತೆ ಕೊನೇ ಗಳಿಗೆಯಲ್ಲಿ ಡ್ರೋನ್ ಪ್ರತಾಪ್ ಜುಲು ಪಾಲಾಗಿದ್ದಾರೆ.

ಅಯ್ಯೋ ಇದೇನಪ್ಪಾ.. ನಮ್ಮ ನೆಚ್ಚಿನ ಕಂಟೆಸ್ಟೆಂಟ್ ಜೈಲಿಗೆ ಹೋದ್ರಾ, ಗೆಲ್ಲಬೇಕಾದವರಿಗೆ ಇಧೇನಾಯ್ತು ಎಂದು ವ್ಯಥೆ ಪಡಬೇಡಿ. ಡ್ರೋನ್ ಪ್ರತಾಪ್ ಹೋಗಿದ್ದು ಬಿಗ್ ಬಾಸ್(Bigg boss) ಮನೆಯೊಳಗಿನ ಜೈಲಿಗೆ!! ಹೌದು, ಈ ಸೀಸನ್‌ನ ಕಟ್ಟ ಕಡೆಯ ‘ಉತ್ತಮ’ ಪಟ್ಟ ಸಂಗೀತಾ ಶೃಂಗೇರಿ(Sangeeta shringeri) ಪಾಲಾಗಿದೆ. ಕಟ್ಟ ಕಡೆಯ ಕಳಪೆ ಪಟ್ಟವನ್ನ ಪಡೆದು ಕೊನೆಯ ಬಾರಿಗೆ ಜೈಲಿಗೆ ಹೋಗಿದ್ದಾರೆ ಡ್ರೋನ್ ಪ್ರತಾಪ್.

ಇದನ್ನೂ ಓದಿ: Earn Money: ಫ್ರೀಯಾಗಿ ರೂ.25 ಸಾವಿರ ಪಡೆಯಿರಿ, ಹೀಗೆ ಮಾಡಿದ್ರೆ ಸಾಕು!

ಪ್ರತಾಪ್‌ಗೆ ಕಳಪೆ ಕೊಟ್ಟವರು ಯಾರು?

ಈ ವಾರದ ಹಾಗೂ ಕಡೆಯ ಕಳಪೆಯನ್ನು ಪ್ರತಾಪ್‌ಗೆ ನೀಡಲಾಗಿದೆ. ವಿನಯ್, ತುಕಾಲಿ ಸಂತೋಷ್, ಕಾರ್ತಿಕ್ ಈ ಮೂವರು ಪ್ರತಾಪ್ ಹೆಸರನ್ನು ತೆಗೆದುಕೊಂಡಿದ್ದಾರೆ. “ಇಡೀ ಸೀಸನ್ ತೆಗೆದುಕೊಂಡರೆ ಅಷ್ಟಾಗಿ ಏನು ಪರ್ಫಾಮೆನ್ಸ್ ತೋರಿಸಿಲ್ಲ” ಎಂದು ವಿನಯ್ ಹೇಳಿದರೆ, “ಜೀರೋ ಪರ್ಫಾಮೆನ್ಸ್” ಎಂದು ಕಾರ್ತಿಕ್ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಪ್ರತಾಪ್‌ಗೆ ಕಳಪೆ ಸಿಕ್ಕಿದ್ದಕ್ಕೆ ಸಂಗೀತಾ ತುಂಬಾ ಬೇಸರ ಪಟ್ಟುಕೊಂಡು ಭಾವುಕರಾಗಿದ್ದಾರೆ. ನನ್ನ ಪ್ರಕಾರ ಯಾರು ಇಲ್ಲಿ ಕಳಪೆ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ನೊಂದ ಡ್ರೋನ್ ಪ್ರತಾಪ್, ಸಂಗೀತಾ ದೀದಿ ಇಷ್ಟು ವಾರಗಳು ನನ್ನ ಪರವಾಗಿ ನಿಂತಿದ್ದರು. ಅದಕ್ಕೆ ನಾನು ಅವರಿಗೆ ಋಣಿಯಾಗಿದ್ದೀನಿ ಎಂದು ಹೇಳುತ್ತಲೇ ಜೈಲಿಗೆ ಪ್ರತಾಪ್ ಕಾಲಿಟ್ಟಿದ್ದಾರೆ.

1 Comment
  1. […] ಇದನ್ನೂ ಓದಿ: Drone prathap: ಗ್ರಾಂಡ್ ಫಿನಾಲೆ ಟೈಮಲ್ಲಿ ಡ್ರೋನ್ ಪ… […]

Leave A Reply

Your email address will not be published.