Moral Policing: ಮತ್ತೊಂದು ನೈತಿಕ ಪೊಲೀಸ್‌ಗಿರಿ! ಹಿಂದೂ ಯುವಕ ಮುಸ್ಲಿಂ ಯುವತಿಗೆ ತಂಡದಿಂದ ಹಲ್ಲೆ!!!

Moral Policing: ನೈತಿಕ ಪೊಲೀಸ್‌ ಗಿರಿ ಘಟನೆಯೊಂದು ಇತ್ತೀಚೆಗೆ ಹಾನಗಲ್ಲ ನಾಲ್ಕರ ಕ್ರಾಸ್‌ನಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಬ್ಯಾಡಗಿಯಲ್ಲಿ ಮತ್ತೊಂದು ನೈತಿಕ ಪೊಲೀಸ್‌ ಗಿರಿ ನಡೆದಿದೆ. ತನ್ನ ಅಕ್ಕನ ಮನೆಗೆಂದು ಹಾವೇರಿಯಿಂದ ಬ್ಯಾಡಗಿಗೆ ಹೋಗುತ್ತಿದ್ದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಹುಡುಗನ ಜೊತೆ ಮಾತನಾಡುತ್ತಿದ್ದಾಳೆ ಎಂದು ಆರೋಪಿಸಿ ಏಳು ಜನ ಮುಸ್ಲಿಂ ಹುಡುಗರು ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ಮೇಲೆ ಹಲ್ಲೆ ಮಾಡಿರುವ ಕುರಿತು ವರದಿಯಾಗಿದೆ. ಇವರು ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಜನರ ಕೈಗೆ ಸಿಕ್ಕಿ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: High Court: ಮದುವೆಯಾಗಲು ಧರ್ಮ ಬದಲಾಯಿಸಲು ಬಯಸುವಿರಾ? ಇಲ್ಲಿದೆ ಹೊಸ ಮಾರ್ಗಸೂಚಿ!!

ಹಾವೇರಿ ಹುಮ್ನಾಬಾದ್‌ ಓಣಿಯ ಯುವತಿ ಮತ್ತು ಹಾವೇರಿ ಮಾಚಾಪುರ ಗ್ರಾಮದ ಯುವಕ ಜಗದೀಶ ಕರೇಗೌಡ್ರ ಹಲ್ಲೆಗೊಳಗಾದವರು. ಈ ಕುರಿತು ಪೊಲೀಸ್‌ ಪ್ರಕರಣ ದಾಖಲಾಗಿಲ್ಲ. ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.

Leave A Reply

Your email address will not be published.