Pension For Farmers: ಕೇಂದ್ರದಿಂದ ಸಣ್ಣ ರೈತರಿಗೆ ಬಿಗ್ ಅಪ್ಡೇಟ್: ಈ ಯೋಜನೆ ಮೂಲಕ ಪಡೆಯಿರಿ ಮಾಸಿಕ 3 ಸಾವಿರ ಪಿಂಚಣಿ!!
Pension for Farmers: ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ವ್ಯವಸಾಯ ಮಾಡುವ ಸಲುವಾಗಿ ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ(Pension for Farmers)ನೀಡುತ್ತದೆ. ಆದರೆ, ಪಿಎಂ ಕಿಸಾನ್ ಮಾನಧನ್ ಯೋಜನೆಯಲ್ಲಿ (PM Kisan Maan Dhan Yojana)ಸಣ್ಣ ರೈತರಿಗೆ ಮಾಸಿಕ 3,000 ರೂ ಪಿಂಚಣಿ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ: Budget 2024: ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರದಿಂದ ಮಾಸ್ಟರ್ ಪ್ಲಾನ್; ಕೈಗೆಟಕುವ ದರದಲ್ಲಿ ವಸತಿ ಯೋಜನೆಗೆ ಚಿಂತನೆ!!
ಪ್ರಧಾನಮಂತ್ರಿ ಕಿಸಾನ್ ಮಾನಧನ್ ಯೋಜನೆಯಲ್ಲಿ ಎರಡು ಹೆಕ್ಟೇರ್ ಅಥವಾ ಐದು ಎಕರೆವರೆಗೆ ಜಮೀನು ಹೊಂದಿರುವ ರೈತರು ಹಾಗೂ 18ರಿಂದ 40 ವರ್ಷ ವಯೋಮಿತಿಯ ರೈತರು ನೊಂದಣಿ ಮಾಡಬಹುದು. ಇದರಲ್ಲಿ ಅರ್ಹ ರೈತರು ತಿಂಗಳಿಗೆ 55 ರೂನಿಂದ 200 ರೂವರೆಗೆ ಹಣವನ್ನು ಪಿಂಚಣಿ ನಿಧಿಗೆ ತುಂಬಿಸುತ್ತಿರಬೇಕು. ಕೇಂದ್ರ ಸರ್ಕಾರ ಕೂಡ ಇಷ್ಟೇ ಹಣವನ್ನು ನಿಧಿಗೆ ಹಾಕುತ್ತದೆ. ಒಂದು ವೇಳೆ 18 ವರ್ಷ ವಯಸ್ಸಿನಲ್ಲಿ ಈ ಯೋಜನೆ ಆರಂಭ ಮಾಡಿದರೆ, ತಿಂಗಳಿಗೆ ಕನಿಷ್ಠ 55 ರೂನಂತೆ ಕಟ್ಟಬೇಕಾಗುತ್ತದೆ. ಒಂದು ವೇಳೆ 40ನೇ ವಯಸ್ಸಿನಲ್ಲಿ ಯೋಜನೆ ಪಡೆದರೆ ತಿಂಗಳಿಗೆ ಕಟ್ಟಬೇಕಾಗಿರುವ ಕನಿಷ್ಠ ಮೊತ್ತ 200 ರೂ ಯಾಗಿದೆ. 60 ವರ್ಷದವರೆಗೆ ಪ್ರತೀ ತಿಂಗಳು ಪಿಂಚಣಿ ನಿಧಿಗೆ ಕಟ್ಟಬೇಕು. ಅದಾದ ಬಳಿಕ ತಿಂಗಳಿಗೆ 3,000 ರೂ ಇಲ್ಲವೇ ಅದಕ್ಕಿಂತ ಹೆಚ್ಚಿನ ಮೊತ್ತದ ಪಿಂಚಣಿಯನ್ನು ರೈತರು ಪಡೆಯಬಹುದು.