Indian Railways: ರಾತ್ರಿ ಮಲಗುವ ಸಮಯ ಸೇರಿ ಭಾರತೀಯ ರೈಲ್ವೇ ತಂದಿದೆ ಹಲವು ಹೊಸ ನಿಯಮ! ಇನ್ನು ಇಷ್ಟು ಗಂಟೆ ಮಾತ್ರ ನಿದ್ರೆಗೆ ಅವಕಾಶ!!!
ರಾತ್ರಿ ಪ್ರಯಾಣದ ಸಮಯದಲ್ಲಿ ರೈಲಿನಲ್ಲಿ ಜೋರಾಗಿ ಮಾತನಾಡುವುದು, ಗಲಾಟೆ ಮಾಡುವುದು, ಹಾಡುಗಳನ್ನು ಕೇಳಬಾರದು. ಇವು ಉಳಿದ ಪ್ರಯಾಣಿಕರಿಗೆ ತೊಂದರೆ ನೀಡುತ್ತದೆ. ಇದಕ್ಕಾಗಿಯೇ ಭಾರತೀಯ ರೈಲ್ವೇ ಕೆಲವು ನಿಯಮ ಮಾಡಿದೆ. ಈ ನಿಯಮ ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಹಾಗೆನೇ ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ರಾತ್ರಿ ಗರಿಷ್ಠ 9 ಗಂಟೆಗಳ ಕಾಲ ನಿದ್ರೆ ಮಾಡಬಹುದಿತ್ತು. ಆದರೆ ಇದೀಗ ಈ ಸಮಯವನ್ನು 8 ಗಂಟೆಗೆ ಇಳಿಕೆ ಮಾಡಲಾಗಿದೆ. ಎಸಿ ಕೋಚ್‌ಗಳು ಮತ್ತು ಸ್ಪೀಪರ್‌ಗಳ ಪ್ರಯಾಣಿಕರು ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ನಿದ್ದೆ ಮಾಡಬಹುದಿತ್ತು. ಈಗ ಮಲಗುವ ಸಮಯವನ್ನು ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಮಾಡಲಾಗಿದೆ. ಸ್ಲೀಪರ್ ಸೌಲಭ್ಯ ಹೊಂದಿರುವ ಎಲ್ಲಾ ರೈಲುಗಳಿಗೂ ಈ ಬದಲಾವಣೆ ಅನ್ವಯವಾಗಲಿದೆ.
ಇದನ್ನೂ ಓದಿ: Bengaluru ಹೋಟೆಲ್‌ಗೆ ಬಂದ ಯುವತಿಯ ಹಿಂಬದಿಗೆ ಕೈ ನಿಂದ ಹೊಡೆದ ಕಾಮುಕ! ನೋಡಿ ಖುಷಿಪಟ್ಟ ಉಳಿದಿಬ್ಬರು, ಮುಂದೇನಾಯ್ತು ಗೊತ್ತೇ?
ಹೊಸ ನಿಯಮಗಳು; ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುವಂತಿಲ್ಲ, ಸಂಗೀತವನ್ನು ಜೋರಾಗಿ ಕೇಳಬಾರದು, 10 ಗಂಟೆಯ ನಂತರ ಸಣ್ಣ ದೀಪಗಳನ್ನು ಉರಿಸಬೇಕು. ಅದು ಬಿಟ್ಟು ಬೇರೆ ದೀಪ ಉರಿಯಲು ಅವಕಾಶವಿಲ್ಲ. ಆನ್‌ಲೈನ್ ಊಟವನ್ನು ರಾತ್ರಿ 10 ಗಂಟೆಯ ನಂತರ ನೀಡಲಾಗುವುದಿಲ್ಲ. ಧೂಮಪಾನ, ಮದ್ಯಪಾನ ನಿಷೇಧ