Home Breaking Entertainment News Kannada Bihar: ಕಾರ್ಯಕ್ರಮಕ್ಕೆ 18 ಗಂಟೆ ತಡವಾಗಿ ಬಂದ ಖ್ಯಾತ ನಟಿ – ಸಿಟ್ಟಿಗೆದ್ದು ಕಲ್ಲಿನಿಂದಲೇ ಹೊಡೆದು...

Bihar: ಕಾರ್ಯಕ್ರಮಕ್ಕೆ 18 ಗಂಟೆ ತಡವಾಗಿ ಬಂದ ಖ್ಯಾತ ನಟಿ – ಸಿಟ್ಟಿಗೆದ್ದು ಕಲ್ಲಿನಿಂದಲೇ ಹೊಡೆದು ಓಡಿಸಿದ ಫ್ಯಾನ್ಸ್!!

Bihar

Hindu neighbor gifts plot of land

Hindu neighbour gifts land to Muslim journalist

Bihar: ಕಾರ್ಯಕ್ರಮಗಳಿಗೆ ಅಥವಾ ಸಮಾರಂಭಗಳಿಗೆ ಸೆಲೆಬ್ರಿಟಿಗಳು ಅಥವಾ ರಾಜಕಾರಣಿಗಳು ತಡವಾಗಿ ಬರುವುದು ಅವರ ಒಂದು ವಾಡಿಕೆ ಎಂಬಂತೆ ಆಗಿದೆ. ಕೆಲವರು ತಡವಾಗಿ ಬಂದು ಅದು, ಇದು ಸಬೂಬು ನೀಡಿ ಕ್ಷಮೆ ಕೇಳುವುದುಂಟು. ತಡವೆಂದರೆ ಅರ್ಧಗಂಟೆ, ಒಂದು ತಾಸು ಅಥವಾ ಹೆಚ್ಚೆಂದರೆ ಎರಡು ತಾಸು ತಡವಾಗಿ ಬರುವುದು ಕಾಮನ್ ಆಗಿದೆ. ಆದರೆ ಬರೋಬ್ಬರಿ 18 ತಾಸು ತಡವಾಗಿ ಬಂದವರನ್ನ ನೀವು ನೋಡಿದ್ದೀರಾ. ಇಲ್ಲೊಬ್ಬಳು ನಟಿ ಹಾಗೇ ಮಾಡಿದ್ದಾಳೆ!! ಆದರೆ ಆಕೆಯ ಅಭಿಮಾನಿಗಳು ಕೂಡ ತಕ್ಕ ಪಾಠ ಕಲಿಸಿ ಕಳಿಸಿದ್ದಾರೆ.

https://x.com/Jayantika_t/status/1747920048541634848?s=20

ಹೌದು, ಭೋಜಪುರಿಯ(Bhojpuri) ಖ್ಯಾತ ನಟಿ ಹಾಗೂ ಗಾಯಕಿ ಅಕ್ಷರಾ ಸಿಂಗ್‌(Akshara singh)ಗೆ ಅಪಾರ ಅಭಿಮಾನಿಗಳಿದ್ದಾರೆ. ಸೋಶಿಯಲ್‌ ಮೀಡಿಯದಲ್ಲಿ ಸದಾ ಸಕ್ರಿಯವಾಗಿರುವ ಆಕೆಗೆ ದೊಡ್ಡ ಪ್ರಮಾಣದ ಅಭಿಮಾನಿ ವರ್ಗವೇ ಇದೆ. ಇತ್ತೀಚೆಗಷ್ಟೇ ಅಕ್ಷರಾ ಬಿಹಾರದ ಚೌರಂಗಾಬಾದ್ ಜಿಲ್ಲೆಯಲ್ಲಿ ಅಂಗಡಿಯೊಂದರ ಉದ್ಘಾಟನೆಗೆ ತೆರಳಿದ್ದರು. ಅಕ್ಷರಾ ಬರುತ್ತಿದ್ದಾರೆ ಎಂದು ತಿಳಿದ ಅಭಿಮಾನಿಗಳು ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ ಕಾರ್ಯಕ್ರಮಕ್ಕೆ ಬರೋಬ್ಬರಿ 18 ಗಂಟೆ ತಡವಾಗಿ ಅಕ್ಷರಾ ಸಿಂಗ್‌ ಆಗಮಿಸಿದ್ದರು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಕೆರಳಿದ ಅಭಿಮಾನಿಗಳು ಆಕೆ ಬಂದು ಹಾಡು ಶುರುಮಾಡುತ್ತಿದ್ದಂತೆ ಕಲ್ಲು ತೂರಾಟ ಶುರುಮಾಡಿದ್ದಾರೆ.

ಇದನ್ನೂ ಓದಿ: Symbol of death: ನಿಮಗೇನಾದರೂ ಈ ಸಂಕೇತ ಕಂಡುಬಂದ್ರೆ, ನೀವು ಸಾವಿಗೆ ಹತ್ತಿರಾಗಿದ್ದೀರಿ ಎಂದರ್ಥ !!

ಬೆಳಗ್ಗೆ ಬರಬೇಕಾಗಿದ್ದ ಅಕ್ಷರಾ ಸಿಂಗ್‌ ರಾತ್ರಿಯ ವೇಳೆ ಸ್ಥಳಕ್ಕೆ ಆಗಮಿಸಿದ್ದರು. ಆದರೆ, ಆಕೆಯನ್ನು ನೋಡುವ ಸಲುವಾಗಿ ಚಳಿಯಲ್ಲಿ ನಡುಗುತ್ತಾ ನಿಂತಿದ್ದ ಅಭಿಮಾನಿಗಳ ಸಿಟ್ಟು ಅದಾಗಲೇ ನೆತ್ತಿಗೇರಿತ್ತೆಂದು ಕಾಣುತ್ತದೆ. ಹೀಗಾಗಿ ಎಲ್ಲರ ಕೈಗೆ ಕಲ್ಲು ಬಂದಿದ್ದು, ತೂರಾಟ ಶುರುಮಾಡಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಆದರೆ, ಆಕೆಯನ್ನು ನಿಯಂತ್ರಿಸದ ಕಾರಣ ಪೊಲೀಸರು ಅಲ್ಲಿಂದ ಕಳುಹಿಸಲು ಯತ್ನಿಸಿದ್ದಾರೆ. ಅಭಿಮಾನಿಗಳು ತಿರುಗಿಬಿದ್ದರು. ಅಭಿಮಾನಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಮೈದಾನಕ್ಕೆ ನುಗ್ಗಿ ಲಾಠಿ ಚಾರ್ಜ್ ಮಾಡಬೇಕಾಯಿತು. ಕೆಲವರು ತಿರುಗಿಬಿದ್ದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು.

ಈ ದಾಳಿಯಲ್ಲಿ ಕೆಲ ಅಭಿಮಾನಿಗಳು ಹಾಗೂ ಪೊಲೀಸರಿಗೆ ಗಾಯಗಳಾಗಿವೆ. ಆಕೆ ತಡವಾಗಿ ಬಂದಿದ್ದರಿಂದ ಅಭಿಮಾನಿಗಳು ತಾಳ್ಮೆ ಕಳೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ಅಕ್ಷರಾ ಸಿಂಗ್‌ ಅವರನ್ನು ಸುರಕ್ಷಿತವಾಗಿ ಹೊರಗಡೆ ಕಳುಹಿಸಲು ಯತ್ನಿಸಿದ್ದೂ ಕೂಡ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ರುವಾನ್ ಟಾಪ್ ಇನ್ ಚಾರ್ಜ್ ನವಲ್ ಕಿಶೋರ್ ಮಂಡಲ್ ಅವರು 200 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಒಟ್ಟಿನಲ್ಲಿ ಇದು ತಡವಾಗಿ ಬರುವ ಎಲ್ಲಾ ಸೆಲೆಬ್ರಿಟಿಗಳಿಗೆ ಪಾಟವಾಗಿದೆ.