BBK10: ಸುದೀಪ್ ಬಗ್ಗೆ ಆಡಿದ ಮಾತಿನಿಂದ ರಕ್ಷಕ್ ಭಾರೀ ಟ್ರೋಲ್ ; ಫುಲ್ ಗರಂ ಆದ ಸುದೀಪ್ ಫ್ಯಾನ್ಸ್; ವೀಡಿಯೋ ಮಾಡಿ ಕ್ಷಮೆ ಕೇಳಿದ ರಕ್ಷಕ್!!!

BBK 10: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ(BIGG Boss season 10)ಸ್ಪರ್ಧಿಯಾಗಿದ್ದ ಬುಲೆಟ್‌ ರಕ್ಷಕ್‌ ದೊಡ್ಮನೆಯಿಂದ ಹೊರ ಬಿದ್ದ ಬಳಿಕ ಅನೇಕ ಸಂದರ್ಶನದಲ್ಲಿ ತಮ್ಮ ಅನುಭವವನ್ನು ಹೇಳಿಕೊಂಡು ಸುದ್ದಿಯಾಗಿದ್ದರು. ಬಿಗ್‌ ಬಾಸ್‌ ಇದೀಗ ಫಿನಾಲೆ ಹಂತಕ್ಕೆ ಬರುತ್ತಿದ್ದಂತೆ, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ರಕ್ಷಕ್‌ ಆಡಿದ ಮಾತು ವೈರಲ್‌ ಆಗಿದ್ದು, ಕಿಚ್ಚನ ಅಭಿಮಾನಿಗಳಿಂದ ಭಾರೀ ಟೀಕೆಗೆ ಗುರಿಯಾಗುತ್ತಿದ್ದಾರೆ.

 

https://pic.twitter.com/hQV9TaZtI9

ಇತ್ತೀಚೆಗಷ್ಟೇ ಬಿಗ್‌ಬಾಸ್‌ನ ಸೀಸನ್‌ 10ರ ಕೆಲವು ಸ್ಪರ್ಧಿಗಳನ್ನು ನ್ಯೂಸ್‌ ಫಸ್ಟ್‌ ವಾಹಿನಿ ಮಾತುಕತೆ ನಡೆಸಿದ್ದು, ಇದರಲ್ಲಿ ಸ್ನೇಹಿತ್‌, ರಕ್ಷಕ್‌ ಬುಲೆಟ್‌, ಮೈಕಲ್‌, ನೀತು ವನಜಾಕ್ಷಿ, ಪವಿ ಪೂವಪ್ಪ ಭಾಗವಹಿಸಿದ್ದರು.ಈ ವೇಳೆ ಕಳಪೆ ಮತ್ತು ಉತ್ತಮ ಪಟ್ಟದ ಬಗ್ಗೆ ಎಲ್ಲರ ನಡುವೆ ಚರ್ಚೆ ನಡೆದಿದೆ. ಈ ಸಂದರ್ಭ ರಕ್ಷಕ್‌, “‌ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಡ್ರಾಮಾ ಮಾಡುತ್ತಾರೆ.

ಇದನ್ನೂ ಓದಿ: Vehicles Scrapping Policy: ಹಳೆ ವಾಹನ ಗುಜರಿಯಿಟ್ಟು ಹೊಸ ವಾಹನ ಖರೀದಿ ಮಾಡುವವರಿಗೆ ತೆರಿಗೆ ವಿನಾಯಿತಿ!!

ಕಳಪೆ ಉತ್ತಮ ಎಂದು ಕೊಟ್ಟಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲುವುದಿಲ್ಲ. ಆಮೇಲೆ ಸುದೀಪ್‌ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಎನ್ನುವ ಥರ ಎಲ್ಲರೂ ಇರ್ತಾರೆ” ಎಂದು ರಕ್ಷಕ್‌ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ಇದೀಗ ಭಾರೀ ಟೀಕೆಗೆ ಗುರಿಯಾಗುತ್ತಿದೆ.ಕಿಚ್ಚನ ಅಭಿಮಾನಿಗಳು ರಕ್ಷಕ್‌ ಅವರನ್ನು ಟ್ರೋಲ್‌ ಮಾಡುತ್ತಿದ್ದು, ಈ ವಿಚಾರ ಅರಿವಿಗೆ ಬರುತ್ತಿದ್ದಂತೆ ರಕ್ಷಕ್‌ ವಿಡಿಯೋ ಮುಖಾಂತರ ಸುದೀಪ್‌ ಅವರ ಬಳಿ ಕ್ಷಮೆ ಕೇಳಿದ್ದಾರೆ.

“ನಾನು ಸುದೀಪ್ ಅಣ್ಣನ ಬಗ್ಗೆ ನೆಗೆಟಿವ್‌ ಆಗಿ ಮಾತನಾಡಿದೆ ಎಂಬ ರೀತಿಯಲ್ಲಿ ಎರಡು ದಿನಗಳಿಂದ ಒಂದು ವಿಡಿಯೋ ಹರಿದಾಡುತ್ತಿದೆ. ಇಡೀ ಸಂದರ್ಶನ ನೋಡಿದರೆ ನಿಮಗೆ ತಿಳಿಯುತ್ತದೆ. ನಾನು ಯಾವ ಸಂದರ್ಭದಲ್ಲಿ ಆ ಲೈನ್‌ ಹೇಳಿದೆ ಎಂದು ತಿಳಿಯುತ್ತದೆ. ಆದರೂ, ಇದರಿಂದ ಸುದೀಪ್‌ ಅಣ್ಣನಿಗೂ ಮತ್ತು ಸುದೀಪ್‌ ಅಣ್ಣನ ಫ್ಯಾನ್ಸ್‌ಗೂ ಬೇಜಾರಾಗಿದ್ದರೆ,ಎಲ್ಲರಿಗೂ ಸಾರಿ “ಎಂದು ವೀಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. ಸುದೀಪಣ್ಣನ ಮೇಲೆ ತುಂಬ ಗೌರವವಿದೆ ಎಂದು ವಿಡಿಯೋ ಮೂಲಕ ರಕ್ಷಕ್‌ ಕ್ಷಮೆ ಕೇಳಿದ್ದಾರೆ .

Leave A Reply

Your email address will not be published.