Expired Spices: ಅಡುಗೆ ರುಚಿಸಲಿಲ್ಲ ಎಂದು ಅಮ್ಮನ ಮಸಾಲೆ ಡಬ್ಬಿ ತೆರೆದ ಮಗಳಿಗೆ ಕಾದಿತ್ತು ಶಾಕ್; ಇದರ ಅಸಲಿ ಕಹಾನಿ ಕೇಳಿದರೆ ಬೆಚ್ಚಿ ಬೀಳೋದು ಫಿಕ್ಸ್!!

Share the Article

Expired Spices: ಅಮ್ಮ ಎಂದರೇ ಯಾವುದಕ್ಕೂ ಹೋಲಿಕೆ ಮಾಡಲಾಗದ ವಿಶೇಷ ವರ. ಮಕ್ಕಳ ಇಷ್ಟ ಕಷ್ಟಗಳನ್ನು ಅರಿತು ಶುಚಿ ರುಚಿಯಾದ ಆಹಾರ ತಯಾರಿಕೆಯಲ್ಲಿ ಖುಷಿಯನ್ನು ಕಾಣುವ ಅಪರೂಪದ ಜೀವ ತಾಯಿ. ಅದೇ ರೀತಿ ತಾಯಿಯೊಬ್ಬಳು ತನ್ನ ಮಗಳ ನೆಚ್ಚಿನ ಆಹಾರ ಮಾಡಿದ್ದು, ಆದರೆ, ಆಹಾರ (Food)ರುಚಿಸಲಿಲ್ಲ ಎಂದು ಮಗಳು ತಾಯಿ ಬಳಸುವ ಮಸಾಲೆ ಡಬ್ಬಿ (Spice)ತೆರೆದಾಗ ಆಕೆ ಶಾಕ್ ಆಗಿದ್ದಾಳೆ.

ಹಿಂದಿನ ಕಾಲದಲ್ಲಿ ಮಸಾಲೆ (Spice) ಪದಾರ್ಥಗಳು ಹಾಗೂ ತರಕಾರಿಗಳು ಸೇರಿದಂತೆ ಹೆಚ್ಚಿನದೆಲ್ಲವನ್ನೂ ಮನೆಯಲ್ಲೇ ತಯಾರಿಸಲಾಗುತ್ತಿತ್ತು. ಈಗ ಎಲ್ಲೆಡೆ ರೆಡಿಮೇಡ್ (Readymade) ಫುಡ್ ಗಳ ಹಾವಳಿ. ಅಷ್ಟೆ ಏಕೆ ಎಷ್ಟೋ ಮಂದಿ ಈ ಫುಡ್ ಗಳ ಎಕ್ಸ್ಪೈರಿ ಡೇಟ್ (Expiry date) ಗಳ ಕಡೆಗೂ ಗಮನ ಹರಿಸುವುದಿಲ್ಲ. ಅದೇ ರೀತಿ, ಮೆಕ್ ಗೊನಾಗಲ್ ಹೆಸರಿನ ಯುವತಿ ತನ್ನ ಅಮ್ಮನ ಅವಾಂತರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾಳೆ.

Expired Spices: ಅಡುಗೆ ರುಚಿಸಲಿಲ್ಲ ಎಂದು

ಇದನ್ನೂ ಓದಿ: Old Pension: ನೌಕರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್; ಹಳೆ ಪಿಂಚಣಿ ಯೋಜನೆಗೆ ಗ್ರೀನ್ ಸಿಗ್ನಲ್!!

ಯಾವಾಗಲೂ ಬಹಳ ರುಚಿಕರವಾಗುತ್ತಿದ್ದ ಅಮ್ಮ ಮಾಡಿದ ಎಪ್ಪಲ್ ಪಾಯಿ ಆ ದಿನ ತನ್ನ ರುಚಿ ಕಳೆದುಕೊಂಡಿತ್ತು. ಹೀಗಾಗಿ, ಅಮ್ಮನ ಕೈರುಚಿಯನ್ನು ಇಷ್ಟಪಡುವ ಗೊನಾಗಲ್ ರುಚಿ ಕೆಡಲು ಕಾರಣವೇನು ಎಂದು ತಿಳಿಯಲು ತನ್ನ ತಾಯಿ ಯಾವಾಗಲೂ ಬಳಸುವ ಮಸಾಲೆ ಡಬ್ಬಿ ಗಮನಿಸಿದ್ದಾಳೆ. ಜಾಯಿಕಾಯಿ ಸ್ವಲ್ಪ ಜಿಗುಟಾಗಿತ್ತು. ಹಾಗಾಗಿ ಸರಿಯಾಗಿ ಮಿಕ್ಸ್ ಆಗಿಲಿಲ್ಲವೇನೋ ಎನ್ನುತ್ತ ತಾಯಿ ಡಬ್ಬಿಯಲ್ಲಿದ್ದ ಜಾಯಿಕಾಯಿಯನ್ನು ತೋರಿಸ್ತಾಳೆ.ತಾಯಿ ತೋರಿಸಿದ ಮಸಾಲೆ ಡಬ್ಬವನ್ನು ನೋಡಿದ ಗೊನಾಗಲ್ ಗೆ ಒಮ್ಮೆಲೆ ಶಾಕ್ ಆಗಿದ್ದಾಳೆ.

ಮಸಾಲೆ ಡಬ್ಬದ ಮೇಲಿರುವ ಚಿತ್ರದಲ್ಲಿ ಎಕ್ಸಪೈರಿ ಡೇಟ್ ಡಿಸೆಂಬರ್ 16, 1999 ಎಂದು ಬರೆದಿತ್ತಂತೆ. ಅಂದರೆ, ಮಸಾಲೆ ಡಬ್ಬಿಯ ಅವಧಿ ಮೀರಿ ಆಗಲೇ 24 ವರ್ಷ ಬಳಕೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದನ್ನು ನೋಡಿದ ಗೊನಾಗಲ್ ಮನೆಯಲ್ಲಿರುವ ಮಸಾಲೆ ಡಬ್ಬಗಳ ಅವಧಿಯ ದಿನಾಂಕವನ್ನೂ ಪರೀಕ್ಷಿಸಿದ್ದು, ಮನೆಯಲ್ಲಿದ್ದ ಮೂವತ್ತು ಡಬ್ಬದಲ್ಲಿ ಕೇವಲ 6 ಡಬ್ಬದಲ್ಲಿ ಮಾತ್ರ ಮಸಾಲೆ ಉಳಿದಿತ್ತು. ಉಳಿದ ಎಲ್ಲವನ್ನೂ ಆಕೆಯ ತಾಯಿ ಬಳಸಿದ್ದರಂತೆ. ಗೊನಾಗಲ್ ತನ್ನ ತಾಯಿಯ ಬಗ್ಗೆ ಶೇರ್ ಮಾಡಿಕೊಂಡಿರುವ ಈ ಪೋಸ್ಟ್ ಗೆ ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ರೀತಿಯ ಆಹಾರವನ್ನು ಸೇವಿಸಿದರೂ ನಿಮಗೆ ಏನೂ ಆಗಲಿಲ್ಲವಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave A Reply