BBK Season 10: ಫಿನಾಲೆ ಟಿಕೆಟ್‌ ದೊರಕಿದ್ದು ಯಾರಿಗೆ? ಪ್ರತಾಪ್‌ಗಾ? ಟ್ವಿಸ್ಟ್‌ ನೀಡಿದ ಬಿಗ್‌ಬಾಸ್‌!!! ಫಿನಾಲೆ ಟಿಕೆಟ್‌ ಜೊತೆಗೆ ಕ್ಯಾಪ್ಟನ್ಸಿ ಪಟ್ಟ ಅಲಂಕರಿಸಿದ್ದು ಇವರೇ ನೋಡಿ!!!

Share the Article

BBK Season 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಇನ್ನೇನು ಕೆಲವೇ ವಾರದಲ್ಲಿ ಮುಗಿಯುವ ಹಂತಕ್ಕೆ ಬಂದಿದೆ. ಈ ವಾರ ಟಿಕೆಟ್‌ ಟು ಫಿನಾಲೆ ಟಾಸ್ಕ್‌ ನೀಡಿದ್ದಾರೆ ಬಿಗ್‌ಬಾಸ್. ಈ ವೈಯಕ್ತಿಕ ಆಟದಲ್ಲಿ ಬಿಗ್‌ಬಾಸ್‌ ಹೆಚ್ಚು ಸ್ಕೋರ್‌ ಗಳಿಸಿದ ಮೂವರಿಗೆ ಕ್ಯಾಪ್ಟನ್ಸಿ ಟಾಸ್ಕ್‌ ಜೊತೆಗೆ ಟಿಕೆಟ್‌ ಟು ಫಿನಾಲೆ ಟಿಕೆಟನ್ನು ನೀಡಲಿದ್ದಾರೆ ಎನ್ನಲಾಗಿದೆ. ಈ ಆಟದಲ್ಲಿ ಸಂಗೀತ ಶೃಂಗೇರಿ ಅವರು ಕ್ಯಾಪ್ಟನ್‌ ಆಗಿ ಫಿನಾಲೆ ವಾರಕ್ಕೆ ಎಂಟ್ರಿ ನೀಡಿದ್ದಾರೆ ಎಂದು ಮೂಲಗಳ ಪ್ರಕಾರ ಮಾಹಿತಿ.

ಸಂಗೀತ ಶೃಂಗೇರಿ ಅವರು ಕ್ಯಾಪ್ಟನ್‌ ಹಾಗೂ ಟಿಕೆಟ್‌ ಟು ಫಿನಾಲೆ ಪಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: BBK Season 10: ಫಿನಾಲೆ ಟಿಕೆಟ್‌ ದೊರಕಿದ್ದು ಯಾರಿಗೆ? ಪ್ರತಾಪ್‌ಗಾ? ಟ್ವಿಸ್ಟ್‌ ನೀಡಿದ ಬಿಗ್‌ಬಾಸ್‌!!! ಫಿನಾಲೆ ಟಿಕೆಟ್‌ ಜೊತೆಗೆ ಕ್ಯಾಪ್ಟನ್ಸಿ ಪಟ್ಟ ಅಲಂಕರಿಸಿದ್ದು ಇವರೇ ನೋಡಿ!!!

ಇವತ್ತು ಬಿಗ್‌ಬಾಸ್‌ ನೀಡಿದ ಪ್ರೋಮದಲ್ಲಿ ಟಿಕೆಟ್‌ ಟು ಫಿನಾಲೆ ಆಟದ ಕೊನೆಯ ಆಟವನ್ನು ನೀಡಿದ್ದರು. ಈ ಆಟದಲ್ಲಿ ಡ್ರೋನ್‌ ಅವರು ಸಂಗೀತ ಅವರನ್ನು ಹೊರಗಿಟ್ಟಿದ್ದಾರೆ. ಸಂಗೀತ ಅವರಿಗೆ 260 ಅಂಕ ಇದ್ದು, ಡ್ರೋನ್‌ ಅವರಿಗೆ 280 ಅಂಕ ಇದ್ದುದರಿಂದ, ಈ ನಿರ್ಣಾಯಕ ಆಟದಲ್ಲಿ ನಾನು ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದರ ಪ್ರಕಾರ ಯಾರೇ ವಿನ್‌ ಆದರೂ ಅವರು ಡ್ರೋನ್‌ ಅವರನ್ನು ಅಂಕಗಿಂತ ಮುಂದೆ ಹೋಗೋಕೆ ಸಾಧ್ಯವಾಗುವುದಿಲ್ಲ ಎಂದೇ ಅಂದಾಜು ಮಾಡಲಾಗಿತ್ತು.

ಆದರೆ ಇದೀಗ ಬಿಗ್‌ಬಾಸ್‌ ಟ್ವಿಸ್ಟ್‌ ನೀಡಿದ್ದು, ಟಾಪ್‌ ಮೂವರು ಕ್ಯಾಪ್ಟನ್ಸಿ ಟಾಸ್ಕ್‌ ಗೆ ಆಯ್ಕೆ ಮಾಡಿ, ಅದರಲ್ಲಿ ವಿನ್‌ ಆದವರಿಗೆ ಕ್ಯಾಪ್ಟನ್ಸಿ ಜೊತೆಗೆ ಟಿಕೆಟ್‌ ಟು ಫಿನಾಲೆ ಟಿಕೆಟ್‌ ನೀಡಿದ್ದಾರೆಂದು ಹೇಳಲಾಗಿದೆ. ಈ ಆಟದಲ್ಲಿ ಸಂಗೀತ ಅವರು ವಿನ್‌ ಆಗಿ ನೇರವಾಗಿ ಬಿಗ್‌ಬಾಸ್‌ ಫೈನಲ್‌ ವಾರಕ್ಕೆ ಬಂದು, ಕ್ಯಾಪ್ಟನ್ಸಿ ಪಟ್ಟವನ್ನು ಎರಡನೇ ಬಾರಿ ಅಲಂಕರಿಸಿದ್ದಾರೆ ಎಂದು ಹೇಳಲಾಗಿದೆ.

Leave A Reply

Your email address will not be published.