PM Kisan: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಪಡೆಯಲು ಈ ಪ್ರಕ್ರಿಯೆ ಕಡ್ಡಾಯ!!!
PM Kisan: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯಲು ಕೇಂದ್ರ ಸರಕಾರವು ಇ-ಕೆವೈಸಿ ಹಾಗೂ ಭೌತಿಕ ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಇದನ್ನು ಪೂರ್ಣಗೊಳಿಸದ ಫಲಾನುಭವಿಗಳ ಸಹಾಯಧನ ಪಾವತಿಯನ್ನು ತಡೆಹಿಡಿಯೋದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲ್ಲಿಯ ತನಕ ಸಾಕಷ್ಟು ರೈತರು ಇನ್ನೂ ಇ-ಕೆವೈಸಿ ಪೂರ್ಣಗೊಳಿಸಿಲ್ಲವೋ ಅವರನ್ನು ನಿರಂತರವಾಗಿ ಕೃಷಿ ಇಲಾಖೆ ಮನವಿ ಮಾಡಿದರೂ ಪೂರ್ಣಗೊಳಿಸಿಲ್ಲ. ಇದೀಗ ಕೃಷಿ ಇಲಾಖೆ ವಿವಿಧ ಪಂಚಾಯತ್ ಮಟ್ಟದಲ್ಲಿ ಇ-ಕೆವೈಸಿ ಹಾಗೂ ಭೌತಿಕ ದೃಢೀಕರಣ ಶಿಬಿರ ಆಯೋಜಿಸಿದೆ.
ಈ ಯೋಜನೆಯಲ್ಲಿ ರೈತರು ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂ. ನಂತೆ ವಾರ್ಷಿಕ ಒಟ್ಟು ಆರು ಸಾವಿರ ಪಡೆಯುತ್ತಾರೆ.
ಇ-ಕೆವೈಸಿ ಮಾಡಿಸೋದು ಹೇಗೆ?
ಇ-ಕೆವೈಸಿ ಮಾಡಲು https://pmkisan.gov.in ವೆಬ್‌ಸೈಟ್ ನಲ್ಲಿ ಅಥವಾ ಪಿ.ಎಂ.ಕಿಸಾನ್ ಮೊಬೈಲ್ ಆಪ್ ಮುಖಾಂತರ ಮಾಡಬಹುದು.
ಇ-ಕೆವೈಸಿಯನ್ನು ಒಟಿಪಿ ಮುಖಾಂತರ ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ನಂಬರ್ ಜೋಡಣೆ ಮಾಡಿದವರು https://pmkisan.gov.in ವೆಬ್‌ಸೈಟ್‌ನ ಇ-ಕೆವೈಸಿ ಮೇಲೆ ಕ್ಲಿಕ್ಕಿಸಿ ಆಧಾರ್ ನಂಬರ್, ಕ್ಯಾಪ್ಚಾ ನಮೂದಿಸಿ.
ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ದಾಖಲಿಸಿ ಇ-ಕೆವೈಸಿ ಮಾಡಿ.
ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಮಾತ್ರ ಸ್ಮಾರ್ಟ್ ಫೋನ್‌ನಲ್ಲಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಸೇರ್ಪಡೆಗೊಳ್ಳೋದು ಹೇಗೆ?
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ www.pmkisan.gov.in. ಭೇಟಿ ನೀಡಿ.
ಮುಖಪುಟದಲ್ಲಿ ‘Farmers Corner’ ಆಯ್ಕೆ ಮೇಲೆ ಕ್ಲಿಕಿಸಿ.
ನಂತರ ‘New Farmer Registration’ ಮೇಲೆ ಕ್ಲಿಕ್ ಮಾಡಿ.
ನಂತರ ನೋಂದಣಿ ಅರ್ಜಿ ತೆರೆದುಕೊಳ್ಳುತ್ತದೆ.
ಅದರಲ್ಲಿ ತೋರಿಸೋ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
ನಂತರ submit ಆಯ್ಕೆ ಮೇಲೆ ಕ್ಲಿಕ್ ಮಾಡಿ.