Home Interesting Mudigere: ಕಾಫಿನಾಡಲ್ಲಿ ಹಿಂದೂ ಹುಡುಗಿ ಜೊತೆ ಅನ್ಯ ಕೋಮಿನ ಹುಡುಗನ ಸುತ್ತಾಟ, ಹುಡುಗನ ಜೊತೆ ಸ್ನೇಹಿತರನ್ನೂ...

Mudigere: ಕಾಫಿನಾಡಲ್ಲಿ ಹಿಂದೂ ಹುಡುಗಿ ಜೊತೆ ಅನ್ಯ ಕೋಮಿನ ಹುಡುಗನ ಸುತ್ತಾಟ, ಹುಡುಗನ ಜೊತೆ ಸ್ನೇಹಿತರನ್ನೂ ಅಟ್ಟಾಡಿಸಿ ಹೊಡೆದ ಹಿಂದೂ ಯುವಕರು !!

Mudigere

Hindu neighbor gifts plot of land

Hindu neighbour gifts land to Muslim journalist

Mudigere: ನೈತಿಕ ಪೋಲೀಸ್ ಗಿರಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕ ಸ್ನೇಹ ಬೆಳೆಸಿದ್ದ ಎಂದು ಅವನನ್ನು ಮತ್ತು ಅವನ ಸ್ನೇಹಿತರನ್ನು ಹಿಂದೂ ಯುವಕರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ.

ಹೌದು, ಚಿಕ್ಕಮಗಳೂರಿನ(Chikkamagaluru) ಮೂಡಿಗೆರೆ(Mudigere) ಬಸ್ ನಿಲ್ದಾಣದಲ್ಲಿ ಇಂತಹ ಒಂದು ಘಟನೆ ನಡೆದಿದ್ದು, ಘಟನೆಯ ವಿಡಿಯೋ ಬಸ್‌ ನಿಲ್ದಾಣದ ಸಿಸಿಟಿವಿ ಯಲ್ಲಿ ದಾಖಲಾಗಿದೆ. ಇನ್ನು ಹಲ್ಲೆ ಮಾಡಿದ ನಾಲ್ವರು ಹಿಂದೂ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದು, ಸದ್ಯ ಆ ನಾಲ್ವರನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಇಬ್ಬರು ಯುವಕರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂದಹಾಗೆ ಹಲ್ಲೆಗೊಳಗಾದ ಯುವಕರನ್ನು ಮುನೀರ್, ಸಮೀರ್ ಎಂದು ಗುರುತಿಸಲಾಗಿದೆ. ಇವರು ಹಿಂದೂ ಯುವತಿಯೊಂದಿಗೆ ಒಡನಾಟ ಹೊಂದಿದ್ದು ಲವ್ ಜಿಹಾದ್ ಶಂಕೆ ಮೂಡಿದೆ. ಹೀಗಾಗಿ ಮೂಡಿಗೆರೆ ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಂದ ನಾಲ್ವರು ಯುವಕರು ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಸದ್ಯ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.