Home latest Killer CEO case: ತಾಯಿಯೇ ಮಗುವನ್ನು ಕೊಂದ ಪ್ರಕರಣ – ವೈದ್ಯರಿಂದ ಸ್ಪೋಟಕ ಸತ್ಯ ಬಹಿರಂಗ...

Killer CEO case: ತಾಯಿಯೇ ಮಗುವನ್ನು ಕೊಂದ ಪ್ರಕರಣ – ವೈದ್ಯರಿಂದ ಸ್ಪೋಟಕ ಸತ್ಯ ಬಹಿರಂಗ !!

Killer CEO case

Hindu neighbor gifts plot of land

Hindu neighbour gifts land to Muslim journalist

Killer CEO case: ಕಂಪನಿಯೊಂದರ ಸಿಇಓ ಸುಚನಾ ಸೇಠ್ (Suchana Seth) ತನ್ನದೇ ಮಗುವನ್ನು ಗೋವಾದ ಹೋಟೆಲ್‍ನಲ್ಲಿ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ತರುವಾಗ ಚಿತ್ರದುರ್ಗ (Chitradurga) ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಬಳಿಕ ಹಿರಿಯೂರಿನ ತಾಲೂಕು ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸ್ಪೋಟಕ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಅಪಾರ್ಟ್ಮೆಂಟ್ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಕೃತಕ ಬುದ್ಧಿಮತ್ತೆ ಸ್ಟಾರ್ಟ್‌ಅಪ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಕಾರಿ ಆಸ್ಪತ್ರೆಯ ಉಸ್ತುವಾರಿ ಡಾ.ಕುಮಾರ್ ನಾಯಕ್ ಅವರು ಸುಚನಾ ಸೇಠ್ ಅವರು ಟವೆಲ್ ಅಥವಾ ದಿಂಬನ್ನು ಬಳಸಿ ಬಾಲಕನನ್ನು ಕತ್ತು ಹಿಸುಕಿದ್ದಾರೆ ಎಂದು ವೈದ್ಯರು ತಿಳಿಸಿದ್ದು ಇದರಿಂದ ತಾಯಿಯ ವಿಕೃತಿ ಬಯಲಾಗಿದೆ.

ಇದನ್ನೂ ಓದಿ: Heart Attack: ಕ್ರಿಕೆಟ್‌ ಆಡುವಾಗ ಕುಸಿದು ಬಿದ್ದು ಹೃದಯಾಘಾತ; ಆಸ್ಪತ್ರೆ ದಾರಿಯಲ್ಲೇ ಸಾವು!!!

ಈ ಬಗ್ಗೆ ಪ್ರತಿಕ್ರಿಯಿಸಿದ ಡಾಕ್ಟರ್ ಅವರು ಮಹಿಳೆ ತನ್ನ ಮಗನನ್ನು ಕೊಲ್ಲಲು ಆಯುಧವನ್ನು ಬಳಸಿಲ್ಲ. ಬದಲಾಗಿ ಟವೆಲ್‌ ಅಥವಾ ದಿಂಬನ್ನು ಬಳಸಿ ಹತ್ಯೆ ಮಾಡಿದ್ದಾರೆ. ಹೀಗಾಗಿ ಮಗುವಿನ ಮುಖ, ಎದೆಭಾಗ ಊದಿಕೊಂಡು, ಮೂಗಿನಿಂದ ರಕ್ತ ಸ್ರಾವವಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?

ಸುಚನಾ ಸೇಠ್ ಗೋವಾದ ಹೋಟೆಲ್ ಒಂದರಲ್ಲಿ ತನ್ನ ಮಗುವನ್ನು ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ತರುವಾಗ ಹೊಟೇಲ್ ಸಿಬ್ಬಂದಿ ಹಾಗೂ ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಚಿತ್ರದುರ್ಗ (Chitradurga) ಪೊಲೀಸರಿಗೆ (Police) ಒಪ್ಪಿಸಲಾಗಿತ್ತು. ಮಹಿಳೆಯ ಸೂಟ್‍ಕೇಸ್ ಪರಿಶೀಲಿಸಿದಾಗ ಮಗುವಿನ ಮೃತದೇಹ ಪತ್ತೆಯಾಗಿತ್ತು. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಒಪ್ಪಿಸಿದ್ದರು.