Yakshagana Theme: ಕರಾವಳಿಯ ಕಲೆ ಯಕ್ಷಗಾನಕ್ಕೆ ಕೇಂದ್ರ ಸರ್ಕಾರದ ಮನ್ನಣೆ: ಯಕ್ಷಗಾನ ಥೀಮ್ ಮೊದಲ ಅಂಚೆ ಚೀಟಿ ಬಿಡುಗಡೆಗೆ ಸನ್ನದ್ಧ!!
Yakshagana theme: ಪ್ರಪ್ರಥಮ ಬಾರಿಗೆ ಕರಾವಳಿಯ(Dakshina kannada) ಜನಪ್ರಿಯ ಕಲೆ ಯಕ್ಷಗಾನಕ್ಕೆ (Yakshagana)ಕೇಂದ್ರ ಸರ್ಕಾರದ ರಾಷ್ಟ್ರೀಯ ಮನ್ನಣೆ ದೊರೆಯುತ್ತಿದೆ. ಕೇಂದ್ರ ಸರ್ಕಾರ ಯಕ್ಷಗಾನ ಥೀಮ್(Yakshagana theme First Post)ಹೊಂದಿರುವ ವಿಶೇಷ ಅಂಚೆ ಚೀಟಿಯನ್ನು (postage stamp) ಹೊರತರುತ್ತಿದ್ದು, ಜ.25ರಂದು ಮಂಗಳೂರಿನಲ್ಲಿ(Mangaluru) ಬಿಡುಗಡೆಯಾಗಲಿದೆ.
ಯಕ್ಷಗಾನ ಥೀಮ್‌ನ ಈ ವಿಶೇಷ ಅಂಚೆ ಚೀಟಿಯಲ್ಲಿ ಯಕ್ಷಗಾನದ ರೇಖಾಚಿತ್ರ ಇರಲಿದೆ ಎನ್ನಲಾಗಿದೆ. ಇದರಲ್ಲಿ ಯಕ್ಷಗಾನದ ತೆಂಕು ಹಾಗೂ ಬಡಗು ಎರಡೂ ತಿಟ್ಟುಗಳಿಗೆ ಸಮಾನ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಎರಡೂ ತಿಟ್ಟುಗಳ ರೇಖಾಚಿತ್ರ ವಿನ್ಯಾಸವುಳ್ಳ ಚಿತ್ರವನ್ನು ಅಂಚೆ ಚೀಟಿಯಾಗಿ ರೂಪಿಸಲಾಗಿದೆ.
ಇದನ್ನೂ ಓದಿ: Bengaluru: ಬೆಂಗಳೂರು ಮೆಟ್ರೋದಲ್ಲಿ ಯುವತಿಯ ಖಾಸಗಿ ಅಂತ ಮುಟ್ಟಿದ ಕಾಮುಕ !! ವಿಡಿಯೋ ವೈರಲ್
ಯಕ್ಷಗಾನಕ್ಕೆ ರಾಷ್ಟ್ರೀಯ ಮನ್ನಣೆ ದೊರೆಯಬೇಕು ಎಂಬ ಆಶಯದಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್(Nalin kumar kateel)ಕಳೆದ ಮೂರು ವರ್ಷಗಳಿಂದ ಸತತ ಪ್ರಯತ್ನ ನಡೆಸಿದ್ದರು. ಸದ್ಯ, ನಳಿನ್ ಕುಮಾರ್ ಕಟೀಲ್ ಅವರ ಕೋರಿಕೆ ಮೇರೆಗೆ ಕೇಂದ್ರ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ ಲಿಮಿಟೆಡ್ (ಎಂಆರ್‌ಪಿಎಲ್) ಅಂಚೆಚೀಟಿ ಪ್ರಾಯೋಜನೆ ವಹಿಸಿಕೊಂಡಿದೆ ಎನ್ನಲಾಗಿದೆ. ಸುಮಾರು 5.36 ಲಕ್ಷ ರು. ಮೊತ್ತವನ್ನು ಅಂಚೆ ಇಲಾಖೆಗೆ ಬಿಡುಗಡೆ ಮಾಡಿದ್ದು, ಈ ಮೊತ್ತದಲ್ಲಿ ಸುಮಾರು 5 ಲಕ್ಷದಷ್ಟು ಯಕ್ಷಗಾನ ಥೀಮ್‌ನ ಅಂಚೆ ಚೀಟಿ ಮುದ್ರಣಗೊಂಡು ಹೊರಬರಲಿದೆ. ಪ್ರತಿ ಅಂಚೆ ಚೀಟಿ 5 ರು. ಮುಖಬೆಲೆಯನ್ನು ಹೊಂದಿರಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ventolin price canada: Ventolin inhaler best price – buy ventolin tablets uk
ventolin price in india