Home Karnataka State Politics Updates BMTC ಯಿಂದ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್!! ಮದುವೆ, ಪ್ರವಾಸಕ್ಕೆ ಬಿಎಂಟಿಸಿಯಿಂದ ಬಸ್ ವ್ಯವಸ್ಥೆ...

BMTC ಯಿಂದ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್!! ಮದುವೆ, ಪ್ರವಾಸಕ್ಕೆ ಬಿಎಂಟಿಸಿಯಿಂದ ಬಸ್ ವ್ಯವಸ್ಥೆ : ಯಾವ ಬಸ್ ಗೆ ಎಷ್ಟು ಬಾಡಿಗೆ ??

BMTC

Hindu neighbor gifts plot of land

Hindu neighbour gifts land to Muslim journalist

BMTC: .ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ಗಳು ಇನ್ನು ಮುಂದೆ ಮದುವೆ ಸಮಾರಂಭ, ಪ್ರವಾಸ ಇತ್ಯಾದಿಗಳ ಬಾಡಿಗೆಗೆ ಸಿಗಲಿವೆಯಂತೆ. ಸಾಂದರ್ಭಿಕ ಒಪ್ಪಂದದ ಆಧಾರದ ಮೇರೆಗೆ ವಿವಾಹ ಸಮಾರಂಭ, ಪ್ರವಾಸ ಇತ್ಯಾದಿಗಳಿಗೆ ಬಸ್ ಒದಗಿಸಲು ಸಂಸ್ಥೆ ಮುಂದಾಗಿದ್ದು, ವಿವಿಧ ಮಾದರಿಯ ಬಸ್ಗಳ ವಿವಿಧ ರೀತಿಯ ಬಾಡಿಗೆ ನಿಗದಿಪಡಿಸಿ ಬಿಎಂಟಿಸಿ ವಿವರ ಬಿಡುಗಡೆ ಮಾಡಿದೆ.

 

# ಬಿಬಿಎಂಟಿಸಿ ಪುಷ್ಪಕ್ (47 ಆಸನ) ಬಸ್ಸಿಗೆ 8 ಗಂಟೆಯ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 55 ರೂಪಾಯಿ‌ ನಿಗದಿ ಮಾಡಲಾಗಿದ್ದು ಅಂದರೆ ಒಟ್ಟು 8,250 ದರ ನಿಗದಿ ಪಡಿಸಲಾಗಿದೆ.

# 12 ಗಂಟೆ ಅವಧಿಗೆ ಕಿಲೋ ಮೀಟರ್ಗೆ 50 ರೂಪಾಯಿಯಂತೆ ಬಾಡಿಗೆ ದರ 10 ಸಾವಿರ ನಿಗದಿ ಮಾಡಲಾಗಿದೆ.

# ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 45 ರೂಪಾಯಿಯಂತೆ 24 ಗಂಟೆ ಅವಧಿಗೆ 11,250 ರೂ. ಬಾಡಿಗೆ ನಿಗದಿ ಮಾಡಲಾಗಿದೆ.

# 24 ಗಂಟೆಗೆ ನಗರದ ಹೊರಗಡೆ ಪ್ರಯಾಣ ಮಾಡಲು ಕಿ.ಮೀಗೆ 45 ರೂಪಾಯಿಯ ಹಾಗೆ 11,250 ರೂ. ಬಾಡಿಗೆ ನಿಗದಿ ಮಾಡಲಾಗಿದೆ.

# ಸಾಮಾನ್ಯ ಬಸ್ (44 ಆಸನ) ಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ಗೆ 50 ರೂಪಾಯಿಯ ಹಾಗೆ ಒಟ್ಟು 7,500 ರೂ. ದರ ನಿಗದಿ ಮಾಡಲಾಗಿದೆ.

# 12 ಗಂಟೆ ಅವಧಿಗೆ ಕಿಲೋ ಮೀಟರ್ಗೆ 48 ರೂಪಾಯಿಯ ಹಾಗೆ 9600 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.

# ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 44 ರೂಪಾಯಿಯ ಹಾಗೆ 24 ಗಂಟೆಯ ಅವಧಿಗೆ 11,000 ರೂ. ಬಾಡಿಗೆ ನಿಗದಿ ಪಡಿಸಲಾಗಿದೆ.

# 24 ಗಂಟೆಗೆ ನಗರದ ಹೊರಗೆ ಕಿ.ಮೀಗೆ 45 ರೂಪಾಯಿಯ ಹಾಗೆ 11,250 ರೂ. ಬಾಡಿಗೆ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: Google Search: ಭಾರತೀಯರು ಮೊಬೈಲ್ನಲ್ಲಿ ಹೆಚ್ಚು ಸರ್ಚ್ ಮಾಡೋದು ಏನು ಗೊತ್ತಾ?? ತಿಳಿದರೆ ನೀವೂ ಶಾಕ್ ಆಗೋದು ಗ್ಯಾರಂಟಿ!!

# ಬಿಎಂಟಿಸಿ ಮಿಡಿ (31 ಆಸನ) ಬಸ್ಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 47 ರೂಪಾಯಿ‌ಯ ಹಾಗೆ ಒಟ್ಟು 7,050 ರೂ. ದರ ನಿಗದಿ ಮಾಡಲಾಗಿದೆ.

# ಕಿಲೋ ಮೀಟರ್ ಗೆ 45 ರೂಪಾಯಿಯ ಹಾಗೆ 12 ಗಂಟೆ ಅವಧಿಗೆ 9000 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.

# 24 ಗಂಟೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 42 ರೂಪಾಯಿಯ ಹಾಗೆ 10,500 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.

# 24 ಗಂಟೆಗೆ ನಗರದ ಹೊರಗೆ ಕಿ.ಮೀಗೆ 42 ರೂಪಾಯಿಯಂತೆ 12,600 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.

# ಬಿಎಂಟಿಸಿ ಬಿಎಸ್ 6 (41 ಆಸನ) ಬಸ್ಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 60 ರೂಪಾಯಿ‌ ನಿಗದಿ ಮಾಡಲಾಗಿದ್ದು, ಒಟ್ಟು 9000 ರೂ. ದರ ನಿಗದಿಪಡಿಸಲಾಗಿದೆ.

# ಕಿಲೋ ಮೀಟರ್ ಗೆ 55 ರೂಪಾಯಿಯ ಹಾಗೆ 12 ಗಂಟೆ ಅವಧಿಗೆ 11,000 ರೂ ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 50 ರೂಪಾಯಿಯ ಹಾಗೆ ಬಾಡಿಗೆ 11,500 ರೂ ನಿಗದಿ ಮಾಡಲಾಗಿದೆ. 24 ಗಂಟೆಗೆ ನಗರದ ಹೊರಗೆ ಕಿ.ಮೀಗೆ 5 ರೂಪಾಯಿಯಂತೆ 15,000 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.

# ಎಸಿ ಬಸ್ಗಳಿಗೆ 12 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 80 ರೂಪಾಯಿಯ ಹಾಗೆ 14,000 ರೂ ನಿಗದಿ ಮಾಡಲಾಗಿದೆ. 24 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 80 ರೂಪಾಯಿಯ ಹಾಗೆ 20 ಸಾವಿರ ಬಾಡಿಗೆ ನಿಗದಿ ಮಾಡಲಾಗಿದೆ.

# 40 ಆಸನದ ಎಲೆಕ್ಟ್ರಿಕ್ ಬಸ್ಗೆ 24 ಗಂಟೆ ಅವಧಿಗೆ 15,000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ. 

# 33 ಆಸನದ ಬಸ್ಗೆ 24 ಗಂಟೆ ಅವಧಿಗೆ 13,000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ.