Mumbai high court: ಮುಸ್ಲಿಂ ಗಂಡ-ಹೆಂಡತಿಯರ ಕುರಿತು ಮಹತ್ವದ ತೀರ್ಪು ಹೊರಡಿಸಿದ ಹೈಕೋರ್ಟ್ !!
Mumbai high court: ಡಿವೋರ್ಸ್ ಪಡೆದ ಮುಸ್ಲಿಂ ಮಹಿಳೆಯರು ತಮ್ಮ ಮಾಜಿ ಪತಿಯಿಂದ ಜೀವನಾಂಶವನ್ನು ಪಡೆಯಬಹುದು ಎಂದು ಬಾಂಬೆ ಹೈಕೋರ್ಟ್(Mumbai high court) ಮಂಗಳವಾರ ತೀರ್ಪು ನೀಡಿದೆ.
ಹೌದು, ಬಾಂಬೆ ಹೈಕೋರ್ಟ್ ಮುಸ್ಲಿಂ-ಗಂಡ ಹೆಂಡತಿಯರ ಕುರಿತು ಮಹತ್ವದ ತೀರ್ಪು ಹೊರಡಿಸಿದ್ದು, ವಿಚ್ಛೇದನ ಪಡೆದ ಮಹಿಳೆಯರು ತಮ್ಮ ಗಂಡನಿಂದ ಜೀವನಾಂಶ ಪಡೆಯಬಹುದು ಎಂದು ತಿಳಿಸಿದೆ. ಇಷ್ಟೇ ಅಲ್ಲದೆ ಎರಡನೇ ಮದುವೆಯ ನಂತರವೂ ಮಹಿಳೆಯರು ತಮ್ಮ ಮೊದಲ ಪತಿಯಿಂದ ನ್ಯಾಯಯುತ ಪರಿಹಾರ ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: Dharamsala: ಹೊಸ ವರ್ಷಕ್ಕೆ ಧರ್ಮಸ್ಥಳ, ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ಕೊಟ್ಟ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್!!
ಅಂದಹಾಗೆ ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರ ಏಕಸದಸ್ಯ ಪೀಠ ಈ ತೀರ್ಪನ್ನು ನೀಡಿದ್ದು ವಿವಾಹಿತ ಮಹಿಳೆಯರ ಆಸ್ತಿ ಕಾಯ್ದೆ (ಎಂಡಬ್ಲ್ಯೂಪಿಎ) ಅಡಿಯಲ್ಲಿ, ವಿಚ್ಛೇದಿತ ಮಹಿಳೆ ತನ್ನ ಮರುವಿವಾಹವನ್ನು ಲೆಕ್ಕಿಸದೆ ಜೀವನಾಂಶಕ್ಕೆ ಅರ್ಹಳಾಗಿದ್ದು, ಮುಸ್ಲಿಂ ಮಹಿಳೆಯರು ಜೀವನಾಂಶಕ್ಕಾಗಿ ಮೊದಲ ಪತಿಯಿಂದ ಹಣವನ್ನು ಕೇಳಲು ಅರ್ಹರಾಗಿದ್ದಾರೆ ಎಂದು ತಿಳಿಸಿದೆ.
ಈ ಕಾಯ್ದೆಯು ಮುಸ್ಲಿಂ ಮಹಿಳೆಯರ ಬಡತನವನ್ನು ತಡೆಗಟ್ಟಲು ಮತ್ತು ವಿಚ್ಛೇದನದ ನಂತರವೂ ಸಾಮಾನ್ಯ ಜೀವನವನ್ನು ನಡೆಸುವ ಹಕ್ಕನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಮರುವಿವಾಹದ ಆಧಾರದ ಮೇಲೆ ಮಾಜಿ ಪತ್ನಿಗೆ ನೀಡಲಾಗುವ ರಕ್ಷಣೆಯನ್ನು ಸೀಮಿತಗೊಳಿಸುವ ಉದ್ದೇಶವನ್ನು ಈ ಕಾಯ್ದೆ ಎಲ್ಲಿಯೂ ಹೊಂದಿಲ್ಲ ನ್ಯಾಯಾಲಯ ತಿಳಿಸಿದೆ.