Chit fund: ಗೃಹಲಕ್ಷ್ಮೀ ಯೋಜನೆಗೆ ಮೆಗಾ ಟ್ವಿಸ್ಟ್ – 2,000 ಬಳಸಿ ಹೊಸ ಸ್ಕೀಮ್ ಘೋಷಿಸಲು ಮುಂದಾದ ಸರ್ಕಾರ !!
Chit fund: ರಾಜ್ಯ ಸರ್ಕಾರವು ಮಹಿಳೆಯರಿಗೆ ಗೃಹಲಕ್ಷ್ಮಿ (Gruhalakshmi) ಯೋಜನೆಯಡಿ 2,000 ಗಿಫ್ಟ್ ಕೊಟ್ಟಿದ್ದು ಅದೇ ದುಡ್ಡನ್ನು ಮಹಿಳೆಯರು ಚಿಟ್ಫಂಡ್ನಲ್ಲಿ (Chit Fund) ಹೂಡಿಕೆ ಮಾಡುವ ಬೊಂಬಾಟ್ ಸ್ಕೀಮ್ನ್ನು ತರಲು ರೆಡಿ ಮಾಡಿದೆ.
ಹೌದು, ಗ್ಯಾರಂಟಿ ಸ್ಕಿಮ್ಗಳ ಅನಾವರಣೆ ಬಳಿಕ ಕರ್ನಾಟಕ ಸರ್ಕಾರವು ಉಳಿತಾಯ ಯೋಜನೆಗೆ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಎಂಎಸ್ಐಎಲ್ ಚಿಟ್ ಫಂಡ್ ಮೂಲಕ ಜನರು ಹಣ ಉಳಿಸಲು ಸರ್ಕಾರ ಮುಂದಾಗಿದೆ. ಜನರು ಹಣ ಉಳಿತಾಯ ಮಾಡುವ ಯೋಜನೆ ಇದಾಗಿದ್ದು, ಸರ್ಕಾರ ಈಗಾಗಲೇ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ. ಎಸ್ಐಎಲ್ನಲ್ಲಿ 10 ಸಾವಿರದ ವರೆಗೆ ಚಿಟ್ಫಂಡ್ ವ್ಯವಹಾರ ನಡೆಸಬಹುದಾಗಿದೆ.
ಎಂಎಸ್ಐಎಲ್ನಿಂದ ಏಪ್ರಿಲ್ನಲ್ಲಿ ಈ ನಯಾ ಸ್ವರೂಪದ ಚಿಟ್ಫಂಡ್ ರಾಜ್ಯದ್ಯಾಂತ ಜಾರಿಯಾಗಲಿದೆ. ಪ್ರಮುಖವಾಗಿ ಮಹಿಳೆಯರನ್ನು ಈ ಚಿಟ್ಫಂಡ್ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದ್ದು, ಮಹಿಳೆಯರಿಗೆ ಗೃಹಲಕ್ಷ್ಮಿಯ ಯೋಜನೆಯಿಂದ ಹಣ ಬರುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಚಿಟ್ಫಂಡ್ ಉನ್ನತೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.
ಇದನ್ನೂ ಓದಿ: Mangaluru: ಖ್ಯಾತ ಜನಪದ ವಿದ್ವಾಂಸ, ಹಿರಿಯ ಸಾಹಿತಿ ಅಮೃತ ಸೋಮೇಶ್ವರ ಇನ್ನಿಲ್ಲ!!!
ಅಂದಹಾಗೆ ವ್ಯವಹಾರದಲ್ಲಿ ಈಗಾಗಲೇ ನೆರೆಯ ರಾಜ್ಯ ಕೇರಳ ಯಶ್ವಸಿಯಾಗಿದ್ದು, ಸುಮಾರು 27 ಸಾವಿರ ಕೋಟಿಯಷ್ಟು ವ್ಯವಹಾರವಿದೆ. ಕರ್ನಾಟಕದಲ್ಲಿ 22 ಸಾವಿರ ಗ್ರಾಹಕರು 305 ಕೋಟಿ ಮಾತ್ರ ಇದೆ. ಹೀಗಾಗಿ ಇದನ್ನ ಉತ್ತೇಜಿಸಲು ಸರ್ಕಾರ ಹೊಸ ಪ್ಲ್ಯಾನ್ ರೂಪಿಸಿದೆ. ಇದು ಶಿಕ್ಷಣ, ಆರೋಗ್ಯಕ್ಕೆ ಅನುಕೂಲವಾಗಿದೆ.
ರಾಜ್ಯದಲ್ಲಿ ಬಹುತೇಕ ಪ್ರತಿ ಕುಟುಂಬಕ್ಕೂ ಗ್ಯಾರಂಟಿ ಯೋಜನೆಗಳಿಂದ ಹಣ ತಲುಪುತ್ತಿದೆ. ಈಗ ಉಳಿತಾಯಕ್ಕೆ ಹೆಚ್ಚು ಅವಕಾಶಗಳಿವೆ. ಎಂಎಸ್ಐಎಲ್ ಚಿಟ್ ಫಂಡ್ನಲ್ಲಿ ಗುಂಪುಗಳಿಗೆ ತಕ್ಕಂತೆ ಶೇಕಡ 13 ರಿಂದ 15ರವರೆಗೂ ಲಾಭ ದೊರಕುತ್ತದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಹೂಡಿಕೆಯ ಮೊತ್ತಕ್ಕೂ ಖಾತರಿ ಇರುತ್ತದೆ . ‘ಗೃಹಲಕ್ಷ್ಮಿ ಯೋಜನೆಯಿಂದ ದೊರಕುತ್ತಿರುವ ಹಣವನ್ನು ಮಹಿಳೆಯರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ತುರ್ತು ಬಳಕೆಯ ಉದ್ದೇಶಗಳಿಗಾಗಿ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂಬುದು ಸರ್ಕಾರದ ಅಭಿಲಾಷೆ ಆಗಿದೆ.
ಚಿಟ್ ಫಂಡ್ಗಳು ಹೇಗೆ ಕೆಲಸ ಮಾಡುತ್ತವೆ?
ಚಿಟ್ ಫಂಡ್ನ ಅರ್ಥವನ್ನು ಅರ್ಥಮಾಡಿಕೊಂಡ ನಂತರ, ಅದರ ಕಾರ್ಯವನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ. ಚಿಟ್-ಫಂಡ್ ಯೋಜನೆಯ ಭಾಗವಾಗಿ, ಸಮಾನ ಸಂಖ್ಯೆಯ ಸದಸ್ಯರೊಂದಿಗೆ, ನೀವು ನಿಗದಿತ ಅವಧಿಯಲ್ಲಿ ನಿಗದಿತ ಮೊತ್ತದ ಹಣವನ್ನು ಸಂಗ್ರಹಿಸಬೇಕಾಗುತ್ತದೆ. ಹಣವನ್ನು ಸಂಗ್ರಹಿಸಿದ ನಂತರ, ಹರಾಜು ಅಥವಾ ಲಾಟರಿ ವ್ಯವಸ್ಥೆಯ ಮೂಲಕ, ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಹಣವನ್ನು ಆ ವ್ಯಕ್ತಿಗೆ ನೀಡಲಾಗುತ್ತದೆ.
ಚಿಟ್ ಫಂಡ್ಗಳು ರಿವರ್ಸ್ ಹರಾಜು ಕಾರ್ಯವಿಧಾನವನ್ನು ಬಳಸುತ್ತವೆ, ಇದರಲ್ಲಿ ವಿಜೇತ ಬಿಡ್ಡರ್, ಪ್ರತಿ ಮಧ್ಯಂತರಕ್ಕೆ, ಚಿಟ್ ಫಂಡ್ ಆಪರೇಟರ್ಗೆ ಪೂಲ್ ಮಾಡಿದ ಹಣದ ಪೂರ್ವನಿರ್ಧರಿತ ಅನುಪಾತವನ್ನು ಕಮಿಷನ್ ಶುಲ್ಕವಾಗಿ ಪಾವತಿಸುತ್ತಾರೆ. ಕಮಿಷನ್ ಮತ್ತು ಇತರ ವೆಚ್ಚಗಳನ್ನು ಕಡಿತಗೊಳಿಸಿದ ನಂತರ, ಉಳಿದ ಮೊತ್ತವನ್ನು ಇತರ ಸದಸ್ಯರಿಗೆ ಲಾಭಾಂಶವಾಗಿ ಪಾವತಿಸಲಾಗುತ್ತದೆ.
ತಮ್ಮ ಭಾಗವನ್ನು ಕ್ಲೈಮ್ ಮಾಡಿದ ನಂತರವೂ, ವಿಜೇತ ಬಿಡ್ದಾರರು ನಿಧಿಗೆ ಕೊಡುಗೆ ನೀಡುವುದನ್ನು ಮುಂದುವರಿಸಲು ನಿರ್ಬಂಧವನ್ನು ಹೊಂದಿರುತ್ತಾರೆ. ಚಿಟ್ ಫಂಡ್ ಚಕ್ರವು ಸಾಮಾನ್ಯವಾಗಿ ಎಲ್ಲಾ ಸದಸ್ಯರಿಂದ ಮಾಸಿಕ ಕೊಡುಗೆಗಳೊಂದಿಗೆ ಹೂಡಿಕೆದಾರರ ಸಂಖ್ಯೆಯವರೆಗೆ ಇರುತ್ತದೆ. ಪ್ರತಿ ಮಧ್ಯಂತರದ ಕೊನೆಯಲ್ಲಿ ಬಹಿರಂಗ ಹರಾಜನ್ನು ನಡೆಸಲಾಗುತ್ತದೆ, ಇದು ಸದಸ್ಯರು ಸಂಗ್ರಹಿಸಿದ ಹಣವನ್ನು ಬಿಡ್ ಮಾಡಲು ಅವಕಾಶ ನೀಡುತ್ತದೆ. ಕಡಿಮೆ ಬಿಡ್ ಮಾಡಿದವರನ್ನು ವಿಜೇತ ಎಂದು ಘೋಷಿಸಲಾಗುತ್ತದೆ ಮತ್ತು ಪೂಲ್ ಮಾಡಿದ ನಿಧಿಗಳಿಗೆ ಅರ್ಹರಾಗಿರುತ್ತಾರೆ.