Karnataka government: ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬಿದ್ದ ಮುಸ್ಲಿಂ ಮುಖಂಡರು !!

Karnataka government: ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ರಾಜ್ಯ ಸರ್ಕಾರ(Karnataka government)ಇನ್ನೂ ಏಕೆ ಬಂಧಿಸಿಲ್ಲ ಎಂದು ಮುಸ್ಲಿಂ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

ಹೌದು, ಕಳೆದ ಬುಧವಾರ ಶಿವಮೊಗ್ಗದಲ್ಲಿ ಯುವನಿಧಿ ಯೋಜನಾ ಜಾರಿಯ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಆಗ ಸಭೆಯ ನಡುವೆಯೇ ಎದ್ದು ನಿಂತ ಮುಸ್ಲಿಂ ಮುಖಂಡ, ಸಿಎಂ ಇಬ್ರಾಹಿಮ್ ಅವರ ಸಹೋದರ ಸಿ.ಎಂ.ಖಾದ‌ರ್ ಅವರು ನಿಮ್ಮ ಸರ್ಕಾರ ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಅವರನ್ನು ಇನ್ನೂ ಬಂಧಿಸಿಲ್ಲವೇಕೆ ಎಂದು ಆಕ್ರೋಶ ಹೊರಹಾಕಿದರು.

ಕಲ್ಲಡ್ಕ ಪ್ರಭಾಕರ ಭಟ್ಟರ ಬಗ್ಗೆ ಸರ್ಕಾರ ಮೃಧು ಧೋರಣೆ ತಳೆದಿರುವುದೇಕೆ? ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಮತ ಬ್ಯಾಂಕ್ ಮಾತ್ರವೇ? ಅವರ ಹಿತ ಕಾಯುವುದು ಸರ್ಕಾರದ ಹೊಣೆಯಲ್ಲವೇ’ ಎಂದು ಪ್ರಶ್ನಿಸಿದರು. ಖಾದರ್ ಅವರ ಏಕಾಏಕಿ ಪ್ರಶ್ನೆಯಿಂದ ವೇದಿಕೆಯಲ್ಲಿ ಕುಳಿತಿದ್ದ ಸಚಿವರಾದ ಮಧು ಬಂಗಾರಪ್ಪ, ಡಾ.ಶರಣ ಪ್ರಕಾಶ ಪಾಟೀಲ ಹಾಗೂ ಡಾ.ಎಂ.ಸಿ.ಸುಧಾಕರ ಮುಜುಗರಕ್ಕೀಡಾದರು.

ಇದನ್ನೂ ಓದಿ: Bigg Boss 10: ಪ್ರತಾಪ್ ಆಚೆ ಹೋಗುತ್ತಿದ್ದಂತೆ ಮನೆಗೆ ಬಂದೇ ಬಿಟ್ರು ಪೊಲೀಸ್! ನಿಜಕ್ಕೂ ಆಗಿದ್ದೇನು?

ಆಗ ಸುಂದರೇಶ್, ಕಲ್ಲಡ್ಕ ಪ್ರಭಾಕರ ಭಟ್ಟ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆದರೆ ಇನ್ನೂ ಬಂಧಿಸಿಲ್ಲವೇಕೆ ಎಂದು ಸಿ.ಎಂ.ಖಾದ‌ರ್ ಮರು ಪ್ರಶ್ನಿಸಿದರು. ಸುಂದರೇಶ ನಿರುತ್ತರರಾದರು. ಆಗ ಖಾದರ್ ಅವರು ಮುಸ್ಲಿಮ್ ಹೆಣ್ಣುಮಕ್ಕಳು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ದೇಶದ ಮಹಿಳೆಯರಿಗೆ ಮಾಡುವ ಅಪಮಾನ ಕೂಡಲೇ ಕಲ್ಲಡ್ಕ ಭಟ್ಟರನ್ನು ಬಂಧಿಸಿ’ ಎಂದು ಆಗ್ರಹಿಸಿದರು. ಅದಕ್ಕೆ ಹಲವರು ದನಿಗೂಡಿಸಿದರು.

Leave A Reply

Your email address will not be published.