Captain Miller ಕಾರ್ಯಕ್ರಮದಲ್ಲಿ ಯುವಕನಿಂದ ನಿರೂಪಕಿ ಮೇಲೆ ಕಿರುಕುಳ: ಹಲ್ಲೆಗೊಳಗಾದ ನಿರೂಪಕಿ ಮಾಡಿದ್ದೇನು??

Share the Article

ʼCaptain Millerʼ : ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಧನುಷ್‌ ಅಭಿನಯದ ʼಕ್ಯಾಪ್ಟನ್‌ ಮಿಲ್ಲರ್(ʼ‌Captain Millerʼ) ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆದಿದೆ.

ʼಕ್ಯಾಪ್ಟನ್‌ ಮಿಲ್ಲರ್‌ʼ ಸಿನಿಮಾದ ಕಲಾವಿದರು ಹಾಗೂ ಧನುಷ್ ಅವರ ಅಪಾರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಇಬ್ಬರು ನಿರೂಪಕಿಯರು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರೆನ್ನಲಾಗಿದೆ. ಐಶ್ವರ್ಯಾ ರಘುಪತಿ ಅವರು ಕೂಡ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು ಎನ್ನಲಾಗಿದೆ. ಐಶ್ವರ್ಯಾ ರಘುಪತಿ ಅವರಿಗೆ ಯುವಕನೊಬ್ಬ ಮೈ ಮೇಲೆ ಕೈ ಹಾಕಿ ಕಿರುಕುಳ ನೀಡಿದ್ದು, ಹೀಗಾಗಿ , ಐಶ್ವರ್ಯಾ ಅವರು ಕಿರುಕುಳ ನೀಡಿದಾತನ ಕಾಲರ್‌ ಹಿಡಿದು, ಕ್ಷಮೆ ಕೇಳಲು ತಿಳಿಸಿದ್ದಾರೆ. ಕಾಲಿಗೆ ಬಿದ್ದು ಕ್ಷಮೆ ಕೇಳಲು ಐಶ್ವರ್ಯ ಹೇಳಿದ್ದು, ಈ ಸಂದರ್ಭ ಯುವಕ ಪರಾರಿಯಾಗಲು ಮುಂದಾಗಿದ್ದು, ಆದರೆ ಐಶ್ವರ್ಯಾ ಆತನ ಕಾಲರ್‌ ಹಿಡಿದು ಕಪಾಳಕ್ಕೆ ಬಾರಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: Kidney failure: ದೇಹದಲ್ಲಿ ಈ ಲಕ್ಷಣ ಕಂಡುಬಂದ್ರೆ ಕಿಡ್ನಿ ಫೇಲ್ಯೂರ್ ಆಗೋದು ಪಕ್ಕಾ ಎಂದರ್ಥ !!

ಈ ಘಟನೆಯ ಬಗ್ಗೆ ನಿರೂಪಕಿ ಐಶ್ವರ್ಯಾ ಅವರು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. “ಗುಂಪಿನ ನಡುವೆ ಒಬ್ಬಾತ ನನಗೆ ಕಿರುಕುಳ ನೀಡಿದ್ದು, ಆತನನ್ನು ತಕ್ಷಣ ಹಿಡಿದು ಬಾರಿಸುವವರೆಗೂ ನಾನು ಬಿಡಲಿಲ್ಲ. ಆತ ಓಡಲು ಯತ್ನಿಸಿದ, ನಾನು ಆತನ ಬೆನ್ನಟ್ಟಿದೆ. ಆತನಿಗೆ ಹೆಣ್ಣಿನ ಅಂಗಾಂಗವನ್ನು ಹಿಡಿಯುವ ತಾಕತ್ತು ಇದೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಆತನ ಮೇಲೆ ಕೂಗಾಡಿ ಹಲ್ಲೆ ನಡೆಸಿದೆ” ಎಂದು ಬರೆದುಕೊಂಡಿದ್ದಾರೆ.

Leave A Reply