Home Interesting Metaverse: ದೈಹಿಕವಾಗಿ ಹಿಂಸಿಸದೆ 16ರ ಹುಡುಗಿ ಮೇಲೆ ನಡೆಯಿತು ಭೀಕರ ಗ್ಯಾಂಗ್ ರೇಪ್ – ಯಪ್ಪಾ.....

Metaverse: ದೈಹಿಕವಾಗಿ ಹಿಂಸಿಸದೆ 16ರ ಹುಡುಗಿ ಮೇಲೆ ನಡೆಯಿತು ಭೀಕರ ಗ್ಯಾಂಗ್ ರೇಪ್ – ಯಪ್ಪಾ.. ಏನಿದು ವಿಚಿತ್ರ ಕೇಸ್?!

Metaverse

Hindu neighbor gifts plot of land

Hindu neighbour gifts land to Muslim journalist

Metaverse: ಜಗತ್ತು ಮುಂದುವರಿದಂತೆಲ್ಲಾ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಬದಲಾದ ಈ ಜಗತ್ತು ನಮ್ಮ ಬದುಕಿಗೂ ಸಂಚಕಾರ ತಂದಿಡುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಈ ಆನ್ಲೈನ್ ಗೇಮ್ ಗಳು ಯುವಜನರ ಬಾಳನ್ನೇ ನಾಶವಾಗಿಸುತ್ತಿವೆ. ಇದರ ನಡುವೆಯೇ ಅಂತರ್ಜಾಲದ ಹೊಸ ಅವತಾರವಾದ ಮೆಟಾವರ್ಸ್‌ನ Metaverse) ಮೂಲಕ 16ರ ಅಬಲೆ ಮೇಲೆ ಗ್ಯಾಂಗ್ ರೇಪ್ ನಡೆದಿದೆ.

ಹೌದು, ಇಂತಹ ಆಘಾತಕಾರಿ ಘಟನೆಯೊಂದು ಬ್ರಿಟನ್‌ನಲ್ಲಿ ನಡೆದಿದ್ದು, ಅಂತರ್ಜಾಲದ ಹೊಸ ಅವತಾರವಾದ ಮೆಟಾವರ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಕಾಮುಕರ ಗುಂಪೊಂದು ಗ್ಯಾಂಗ್‌ರೇಪ್‌ ಮಾಡಿದೆ. ಆದರೆ ವಿಚಿತ್ರ ಅಂದರೆ ಈ ಘಟನೆಯಲ್ಲಿ ಬಾಲಕಿಯ ಮೇಲೆ ಯಾವುದೇ ರೀತಿಯ ದೈಹಿಕ ಹಿಂಸೆ ನಡೆದಿಲ್ಲ. ಆದರೆ, ನೈಜ ಜಗತ್ತಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯಂತೆ ಅದೇ ಮಾನಸಿಕ ಮತ್ತು ಭಾವನಾತ್ಮಕ ಆಘಾತವನ್ನುಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.

ಇದನ್ನು ಓದಿ: ಯತೀಂದ್ರ ಹೇಳಿಕೆ ವಿರುದ್ಧ ಪೇಜಾವರ ಶ್ರೀ ತೀಕ್ಷ್ಣ ಪ್ರತಿಕ್ರಿಯೆ!!!

ಏನಿದು ವಿಚಿತ್ರ ಪ್ರಕರಣ?

ಆನ್ಲೈನ್ ಜಾಲದಲ್ಲಿ ಈ ಮೆಟಾವರ್ಸ್‌ ಎನ್ನುವುದು ಕೂಡ ಒಂದು. ಇಲ್ಲಿ ಹೆಡ್‌ಸೆಟ್‌ ಹಾಕಿಕೊಂಡರೆ, ಆತ ವರ್ಚ್ಯುವಲ್‌ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಸುತ್ತಾಡಬಹುದು. ಯಾರೊಂದಿಗೆ ಬೇಕಾದರೂ ಎದುರಿಗೆ ನಿಂತಂತೆ ವ್ಯವಹಾರ ನಡೆಸಬಹುದು. ಇಂಥದ್ದೇ ಮೆಟಾವರ್ಸ್‌ನ ಆಟವೊಂದರಲ್ಲಿ ಭಾಗಿಯಾಗಿದ್ದಾಳೆ. ಈ ವೇಳೆ ಪುರುಷರ ಗ್ಯಾಂಗ್ ಒಂದು ಗೇಮ್ನಲ್ಲೇ ವರ್ಚುವಲ್ ಅವತಾರದಲ್ಲಿ ಅತ್ಯಾಚಾರ ಎಸಗಿರುವುದಾಗಿ ದಿ ಮಿರರ್ ವರದಿ ಮಾಡಿದೆ. ಆಪಾದಿತ ವರ್ಚುವಲ್ ದೌರ್ಜನ್ಯ ನಡೆದಾಗ ಸಂತ್ರಸ್ತೆಯ ಡಿಜಿಟಲ್ ಪಾತ್ರವು ಹೆಚ್ಚಿನ ಸಂಖ್ಯೆಯ ಇತರ ಬಳಕೆದಾರರೊಂದಿಗೆ ಆನ್‌ಲೈನ್ “ರೂಮ್” ನಲ್ಲಿತ್ತು ಎಂದು ತಿಳಿದುಬಂದಿದೆ.