Home Interesting Chikkamagaluru: ಹೊಸ ವರ್ಷಕ್ಕೆ ಬಿಸಿ ಬಿಸಿ ರಾಗಿ ಮುದ್ದೆ ಉಂಡು ಮಲಗಿದರು, ಬೆಳಗಾಗುವುದರೊಳಗೆ ಹೆಣವಾಗಿದ್ದರು !!

Chikkamagaluru: ಹೊಸ ವರ್ಷಕ್ಕೆ ಬಿಸಿ ಬಿಸಿ ರಾಗಿ ಮುದ್ದೆ ಉಂಡು ಮಲಗಿದರು, ಬೆಳಗಾಗುವುದರೊಳಗೆ ಹೆಣವಾಗಿದ್ದರು !!

Chikkamagaluru

Hindu neighbor gifts plot of land

Hindu neighbour gifts land to Muslim journalist

Chikkamagaluru: ರಾಗಿ ಮುದ್ದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದನ್ನು ತಿಂದರೆ ಗಟ್ಟಿಮುಟ್ಟಾಗಿ ಇರುತ್ತಾರೆ, ಯಾವುದೇ ಖಾಯಿಲೆಗಳು ಬರುವುದಿಲ್ಲ ಎಂದು ಹೇಳುತ್ತಾರೆ. ಇದು ಸತ್ಯ ಕೂಡ. ಆದರೆ ದುರದೃಷ್ಟವಶಾತ್ ಈ ರಾಗಿಮುದ್ದೆಯೇ ದಂಪತಿಗಳಿಬ್ಬರ ಪ್ರಾಣಕ್ಕೆ ಸಂಚಕಾರ ತಂದಿದೆ.

ಹೌದು, ಚಿಕ್ಕಮಗಳೂರಿನ(Chikkamagaluru) ಮನೆಯೊಂದರಲ್ಲಿ ದಿನಂಪ್ರತಿ ಮನೆಯಲ್ಲಿ ಆಹಾರ ತಯಾರಿಸುವಂತೆ ಹೊಸ ವರ್ಷದ ಸಂಭ್ರಮಕ್ಕೂ ತಯಾರಿಸಿದ್ದ ರಾಗಿಮುದ್ದೆ ಹಾಗೂ ಅನ್ನ ಸಾಂಬಾರ್ ಊಟ ಮಾಡಿ ಮಲಗಿದ್ದ ಇಬ್ಬರು ಹೊಟ್ಟೆ ನೋವಿನಿಂದ ಸಾವನ್ನಪ್ಪಿದ್ದಾರೆ. ಹೊಸ ವರ್ಷಾಚರಣೆ ಮುನ್ನಾ ದಿನ ಡಿಸೆಂಬರ್ 31ರಂದು ಕುಟುಂಬದ ಮೂವರು ಮದ್ಯ ಸೇವನೆ ಮಾಡಿದ್ದರು. ನಂತರ ಸಂಜೆ ಚೇಳೆ ರಾಗುಮುದ್ದೆ ಅನ್ನ ಸಾಂಬಾರ್ ಮಾಡಿಕೊಂಡು ಊಟ ಮಾಡಿದ್ದಾರೆ. ಊಟದ ಬಳಿಕ ಹೊಟ್ಟೆನೋವು ಎಂದು ನರಳಾಡಲು ಆರಂಭಿಸಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ದೊಡ್ಡಯಲ್ಲಪ್ಪ (75) ಎನ್ನುವವರು ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ ಬಳಿಕ ಯಲ್ಲಮ್ಮ (50) ಮೃತಪಟ್ಟಿದ್ದಾರೆ.

ಇದನ್ನು ಓದಿ: Mohini Christina: ನಟಿ ಮೋಹಿನಿಗೆ ಏನಾಯ್ತು?? ಚಿತ್ರರಂಗದಲ್ಲಿ ಯಶಸ್ಸು ಕಂಡ ನಟಿ ವೈರಾಗ್ಯ ಜೀವನಕ್ಕೆ ಅಡಿಯಿಟ್ಟಿದ್ದೇಕೆ??

ಇವರ ಸಾವಿಗೆ ವಿಷಾಹಾರ ಸೇವನೆಯೇ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಂದಹಾಗೆ ಇವರು ಕುಟುಂಬ ಸಮೇತವಾಗಿ ಆತ್ಮಹತ್ಯೆಗೆ ಯತ್ನಿಸಿದ್ದರೋ ಅಥವಾ ಇವರಿಗೆ ಗೊತ್ತಿಲ್ಲದೆ ಮನೆಯಲಲಿ ತಯಾರಿಸಿದ್ದ ಅಡುಗೆಯಲ್ಲಿ ವಿಷಜಂತು ಅಥವಾ ವಿಷ ಬಿದ್ದಿತ್ತೋ ಗೊತ್ತಿಲ್ಲ. ಆದರೆ, ಈ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರಿಗೆ ಚಿಕಿತ್ಸೆ ಕೊಡುತ್ತಿದ್ದರೂ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದೀಗ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ಅಸಲಿ ಸತ್ಯ ತಿಳಿಯಬೇಕಿದೆ.