Odisha Puri Jagannath Temple: ಪುರಿ ಜಗನ್ನಾಥನ ದರ್ಶನಕ್ಕೆ ತೆರಳುವ ಭಕ್ತರೇ ಈ ವಿಚಾರ ತಿಳಿದುಕೊಳ್ಳಿ: ಈ ನಿಯಮ ಪಾಲಿಸದಿದ್ದರೆ ದರ್ಶನ ಭಾಗ್ಯ ಸಿಗದು!!

Odisha Puri Jagannath Temple : ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ (Puri Jagannath Temple in Odisha) 2024ರ ಜನವರಿ 1ರಿಂದ ಭಕ್ತರಿಗೆ ವಸ್ತ್ರ ಸಂಹಿತೆಯ ನಿಯಮ (Dress code Rule)ವನ್ನು ಜಾರಿಗೆ ತರಲಾಗಿದೆ.

 

ಐತಿಹಾಸಿಕ ಶ್ರೀ ಜಗನ್ನಾಥ ದೇವಾಲಯದ (Jagannath Temple) ಪಾವಿತ್ರ್ಯತೆ ಕಾಪಾಡಲು ಭಕ್ತರಿಗೆ ವಸ್ತ್ರ ಸಂಹಿತೆ (Dress code) ಅನ್ನು ಕಡ್ಡಾಯಗೊಳಿಸಿರುವುದಾಗಿ ದೇವಾಲಯದ ಆಡಳಿತ ಮಂಡಳಿ ಸೂಚಿಸಿದೆ. ಕೆಲವು ಭಕ್ತರು ದೇವಾಲಯದ ಘನತೆ ಮತ್ತು ಪಾವಿತ್ರ್ಯತೆಯನ್ನು ಕಡೆಗಣಿಸಿ, ಯಾವುದೋ ಪ್ರವಾಸ ಇಲ್ಲವೇ ಪಾರ್ಟಿಗೆ ಹೋಗುವ ರೀತಿಯಲ್ಲಿ ದೇವಾಲಯಕ್ಕೆ ಪ್ರವೇಶಿಸುವುದನ್ನು ತಪ್ಪಿಸಲು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ (Odisha Puri Jagannath Temple enforces dress code mandatory for devotees)ವಸ್ತ್ರ ಸಂಹಿತೆ ತರಲು ತೀರ್ಮಾನ ಕೈಗೊಂಡಿದೆ.

ಇದನ್ನು ಓದಿ: Yadgiri News: ಶವ ಹೂಳ್ತಿದ್ದ ಸ್ಮಶಾನ ಧ್ವಂಸ; ಮುಸಲ್ಮಾನರ ಭಾವನೆಗೆ ಧಕ್ಕೆ, ದೂರು ದಾಖಲು!!!

ಶ್ರೀ ಜಗನ್ನಾಥ ದೇವಾಲಯವು ಹಿಂದೂಗಳ (Hindu)ಅತ್ಯಂತ ಪೂಜ್ಯ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಹಿನ್ನೆಲೆ ಭಕ್ತರು ಸ್ಥಳದ ಪಾವಿತ್ರ್ಯತೆಯನ್ನು ಗೌರವಿಸಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಭಕ್ತರು ನಿಯಮ ಉಲ್ಲಂಘಿಸಿದರೆ, ದಂಡವನ್ನು ವಿಧಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದ್ದು, ಅದೇ ರೀತಿ ಪ್ಲಾಸ್ಟಿಕ್ ಮತ್ತು ಪಾಲಿಥಿನ್ ಬಳಕೆಯನ್ನು ಕೂಡ ನಿಷೇಧಿಸಲಾಗಿದೆ. ಹಾಫ್ ಪ್ಯಾಂಟ್, ಶಾರ್ಟ್ಸ್, ಟೋರ್ನ್ ಜೀನ್ಸ್, ಸ್ಕರ್ಟ್ ಮತ್ತು ತೋಳಿಲ್ಲದ ಉಡುಪುಗಳಿಗೆ (Dress) ನಿಷೇಧ ಹೇರಲಾಗಿದೆ. ಒಂದು ವೇಳೆ, ಭಕ್ತರು ಸಭ್ಯ ಬಟ್ಟೆಗಳನ್ನು ಧರಿಸದಿದ್ದರೆ, ದೇವಾಲಯ ಪ್ರವೇಶ ನಿಷೇಧ ಹೇರಲಾಗುವ ಎಚ್ಚರಿಕೆ ನೀಡಲಾಗಿದೆ. ಪುರುಷರಿಗೆ ಧೋತಿ ಮತ್ತು ಟವೆಲ್ ಧರಿಸಲು ಅವಕಾಶವಿದ್ದರೆ, ಮಹಿಳೆಯರಿಗೆ ಸೀರೆ ಮತ್ತು ಸಲ್ವಾರ್ ಧರಿಸಲು ಅವಕಾಶವಿದೆ.

 

Leave A Reply

Your email address will not be published.