Blackhead home remedies: ಮಹಿಳೆಯರೇ ಗಮನಿಸಿ, ಮನೆಯಲ್ಲೇ ಇದೊಂದು ಸ್ಕ್ರಬ್ ಬಳಸಿ ಬ್ಲಾಕ್ ಹೆಡ್ ನಿಂದ ಶಾಶ್ವತ ಪರಿಹಾರ ಪಡೆಯಿರಿ!!

Blackhead Home remedies : ಸೌಂದರ್ಯ (beauty)ಎನ್ನುವುದು ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಪ್ರಚಲಿತ ಮಾತು. ಸೌಂದರ್ಯದ ಕಾಳಜಿ(Beauty Tips)ಮಾಡುವ ವಿಷಯದಲ್ಲಿ ಹೆಂಗೆಳೆಯರು ಹೆಚ್ಚು ಲಕ್ಷ್ಯ ವಹಿಸುತ್ತಾರೆ. ಹೆಂಗೆಳೆಯರು ದೇಹ, ಚರ್ಮದ ಕಾಂತಿ ಹೆಚ್ಚಿಸುವ ನಿಟ್ಟಿನಲ್ಲಿ ಏನೇನೋ ಹರಸಾಹಸ ಪಡುತ್ತಾರೆ. ನಮ್ಮಲ್ಲಿ ಹೆಚ್ಚಿನವರಿಗೆ ಬ್ಲ್ಯಾಕ್ ಹೆಡ್ಸ್ ಸಮಸ್ಯೆ (Blackhead)ಹೆಚ್ಚಿನವರನ್ನು ಕಾಡುತ್ತದೆ.ಬ್ಲ್ಯಾಕ್ ಹೆಡ್ಸ್ ನಿಂದಾಗಿ ಮುಖ ಸೌಂದರ್ಯವೇ ಹಾಳಾಗುತ್ತದೆ.ಇದಕ್ಕೆ ಮನೆಯಲ್ಲಿ ಸರಳ ವಿಧಾನಗಳನ್ನು(Blackhead Home remedies) ಅನುಸರಿಸಿ ಪರಿಹಾರ ಪಡೆಯಬಹುದು.

 

ಮನೆಯಲ್ಲಿಯೇ ಸಿಗುವ ಕೆಲವೊಂದು ವಸ್ತುಗಳ ಬಗ್ಗೆ ಸಿಂಪಲ್ ಆಗಿ ಫೇಸ್ ಸ್ಕ್ರಬ್ ತಯಾರಿಸಬಹುದು. ನಾವು ಮನೆಯಲ್ಲಿಯೇ ಸಕ್ಕರೆಯನ್ನು ಬಳಸಿ ತಯಾರಿಸಿದ ಫೇಸ್ ಸ್ಕ್ರಬ್‌ ನಿಂದ ಬ್ಲ್ಯಾಕ್ ಹೆಡ್ಸ್ ಅನ್ನು (How To Get Rid Of Blackheads)ತೊಡೆದು ಹಾಕಬಹುದು.

 

ಸ್ಕ್ರಬ್ ತಯಾರಿಸಲು 1 ಚಮಚ ಕೆನೆ ಮತ್ತು 1 ಚಮಚ ಸಕ್ಕರೆ ಬೇಕಾಗುತ್ತದೆ. ಎರಡೂ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು, ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಸ್ಕ್ರಬ್ ಮಾಡಿಕೊಳ್ಳಿ. ಸುಮಾರು 5 ನಿಮಿಷಗಳ ಕಾಲ ಅದನ್ನು ಮುಖದ ಮೇಲೆ ಚೆನ್ನಾಗಿ ಸ್ಕ್ರಬ್ ಮಾಡಿ 5 ನಿಮಿಷಗಳ ಕಾಲ ಈ ಮಿಶ್ರಣವನ್ನು ಮುಖದ ಮೇಲೆ ಹಾಗೆಯೇ ಬಿಡಬೇಕು. 10 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ಸ್ಕ್ರಬ್ ಅನ್ನು ಬಳಸಿದ ನಂತರ ಚರ್ಮವು ಮೃದುವಾಗಲಿದ್ದು, ಕಾಂತಿಯುತವಾಗಲಿದೆ. ನಿಮ್ಮ ಮನೆಯಲ್ಲಿ ಕೆನೆ ಇಲ್ಲದಿದ್ದರೆ ಸಕ್ಕರೆ ಪುಡಿಯನ್ನು ಮಾತ್ರ ಸ್ಕ್ರಬ್ ಆಗಿ ಬಳಕೆ ಮಾಡಬಹುದು. ಪುಡಿಮಾಡಿದ ಸಕ್ಕರೆ ನಮ್ಮ ಬ್ಲ್ಯಾಕ್ ಹೆಡ್ಸ್ ಅನ್ನು ಕಡಿಮೆ ಮಾಡುತ್ತದೆ. ಅದನ್ನು ಸ್ವಲ್ಪ ಸಮಯದವರೆಗೆ ಮುಖದ ಮೇಲೆ ಹಾಗೆಯೇ ಬಿಟ್ಟರೆ ಮುಖಕ್ಕೆ ಹೊಳಪು ಸಿಗಲಿದೆ.

Leave A Reply

Your email address will not be published.