Nut rot: ಅಡಿಕೆಯ ಹಿಂಗಾರ ಕೊಳೆತು ಬೀಳುತ್ತಿವೆಯೇ ?! ತಕ್ಷಣ ಈ ಕೆಲಸ ಮಾಡಿ, ಮುಂದಾಗೋ ಅಪಾಯ ತಪ್ಪಿಸಿ

Nut rot: ಒಂದು ಬಾರಿ ನೆಟ್ಟು ಪೋಷಿಸಿದರೆ, ಹೆಚ್ಚು ಶ್ರಮವಿಲ್ಲದೆ ಅಧಿಕ ಲಾಭವನ್ನು ತಂದು ಕೊಡುವ ಬೆಳೆ ಎಂದರೆ ಅದು ಅಡಿಕೆ. ಕರಾವಳಿ ಮತ್ತು ಮಲೆನಾಡಿನ ಸಾಂಪ್ರದಾಯಿಕ ಬೆಳೆಯಾದ ಅಡಿಕೆಯ ಬೆಲೆಯಿಂದ ಇಂದು ನಾಡಿನಾದ್ಯಂತ ಅನೇಕ ರೈತರು ಅಡಿಕೆಯನ್ನು ನೆಡುತ್ತಿದ್ದಾರೆ. ಆದರೆ ಇದಕ್ಕೆ ಅಂಟುವ ನಾನಾರೋಗಗಳಿಂದ ಇಂದು ಬೆಳೆಗಾರರು ಪರದಾಡುವಂತಾಗಿದ್ದಾರೆ. ಅದರಲ್ಲಿ ಈ ಹಿಂಗಾರ ಅಥವಾ ಹೊಂಬಾಳೆ ಕೊಳೆತವಂತೂ ರೈತರನ್ನು ಕಂಗೆಡಿಸಿದೆ. ಆದರೆ ನೀವು ಇದೊಂದು ಕೆಲಸ ಮಾಡುವದಿಂದ ಈ ಕೊಳೆ ರೋಗವನ್ನು ತಪ್ಪಿಸಬಹುದು.

ಹೌದು, ಅಡಿಕೆ ಕಾಯಿ ಬಿಡುವ ಹಿಂಗಾರವು ಕೊಳೆತು(Nut rot) ಅಥವಾ ಒಣಗಿ ಹೋಗುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಬ್ಬಾ.. ಒಳ್ಳೆ ಹಿಂಗಾರ ಇದೆ, ಒಳ್ಳೆಯ ಫಸಲು ಈ ಬಾರಿ ನಮ್ಮದಾಗುತ್ತದೆ ಎನ್ನುವಾಗ ಹಿಂಗಾರ ಪೂರ್ತಿ ಒಣಗಿಬಿಟ್ಟು ರೈತರ ಆಸೆಯನ್ನು ಕಮರಿಸುತ್ತಿದೆ. ಹಾಗಿದ್ದರೆ ಈ ರೋಗ ಅಡಿಕೆ ಗಿಡಗಳಿಗೆ ಏಕೆ ಬರುತ್ತದೆ? ಇದನ್ನು ತೊಲಗಿಸುವ ವಿಧಾನ ಯಾವುದು ? ತಿಳಿಯೋಣ ಬನ್ನಿ.

ಹಿಂಗಾರ ಒಣಗುವುದು ಯಾಕೆ?
ಹಿಂಗಾರವು ಕೊಳೆಯುವುದು ಅಥವಾ ಒಣಗುವುದಕ್ಕೆ ಮೂಲಕ ಕಾರಣ ಒಂದು ಶಿಲೀಂದ್ರ. ಇದು ಒಂದು ಹಿಂಗಾರ ಕೊಳೆತರೆ ಗಿಡದಲ್ಲಿರುವ ಎಲ್ಲಾ ಹಿಂಗಾರವನ್ನು ತಿನ್ನುತ್ತಾ ಇಡೀ ತೋಟವನ್ನೇ ಹಾಳು ಮಾಡುತ್ತದೆ.

ಹಿಂಗಾರ ಕೊಳೆಯದಂತೆ ಏನು ಮಾಡಬೇಕ?
ಕೆಲವೊಂದು ಮರದಲ್ಲಿ ಒಂದು ಅಥವಾ ಎರಡು ಹಿಂಗಾರಗಳು ಕೊಳೆಯುವುದುಂಟು. ಇಲ್ಲ ಒಂದು ಹಿಂಗಾರವು ಅರ್ಧ ಕೊಳೆತು, ಮತ್ತರ್ಧ ಪಸಲು ಬಿಡುವುದೂ ಉಂಅಂಉ. ಒಟ್ಟಿನಲ್ಲಿ ಯಾವುದೇ ಕೊಳೆತ ಹಿಂಗಾರವಾಗಲಿ ನೀವು ಆ ಕೊಳೆತ ಹಿಂಗಾರವನ್ನು ತಕ್ಷಣ ಕಿತ್ತು ಸುಟ್ಟು ಹಾಕಬೇಕು.

ಒಂದು ವೇಳೆ ನೀವು ಕೊಳೆತ ಹಿಂಗಾರವನ್ನು ಗೊಬ್ಬರ ಮಾಡುತ್ತೇವೆ ಇಲ್ಲ ಗಿಡದ ಬುಡಕ್ಕೆ ಹಾಕುತ್ತೇವೆ ಎಂದು ಹಾಕಿದರೆ ಇದರಿಂದ ನಿಮ್ಮ ತೋಟವನ್ನೇ ಕಳೆದುಕೊಳ್ಳುವಂತಹ ಸಂಭವ ಎದುರಾದೀತು! ಏಕೆಂದರೆ ಅದು ಯಾವುದೇ ಕಾರಣಕ್ಕೂ ಗೊಬ್ಬರವಾಗುವುದಿಲ್ಲ ಕೊಳೆಯುವುದೂ ಇಲ್ಲ. ಬದಲಿಗೆ ತೋಟವನ್ನೇ ನಾಶ ಮಾಡಬಿಡುತ್ತದೆ. ಹೀಗಾಗಿ ನೀವು ನಿಮ್ಮ ತೋಟದಲ್ಲಿ ಯಾವುದೇ ಗಿಡಗಳಲ್ಲಿ ಒಣಗಿದ ಹಿಂಗಾರ ಇದ್ದರೆ ಅದನ್ನು ತಕ್ಷಣ ತೆಗೆದು ಸುಟ್ಟಿ ಬಿಡುವುದು ಉತ್ತಮ. ಇದರಿಂದ ನಿಮ್ಮ ತೋಟವನ್ನು ನೀವು ಉಳಿಸಿಕೊಳ್ಳಬಹುದು.

Leave A Reply

Your email address will not be published.