Sandalwood tree protection: ತೋಟದಲ್ಲಿರೋ ಶ್ರೀಗಂಧಕ್ಕೆ ಕಳ್ಳರ ಕಾಟವೇ ?! ಈ ಸಿಂಪಲ್ ಪ್ಲಾನ್ ಬಳಸಿ, ಕಳ್ಳಕಾಕರಿಂದ ರಕ್ಷಿಸಿ

 

Sandalwood tree protection: ಕರ್ನಾಟಕವನ್ನು ಶ್ರೀಗಂಧದ ನಾಡು ಎಂದು ಕರೆಯುತ್ತಾರೆ. ಅಂದರೆ ಗಂಧ ಹೆಚ್ಚು ಬೆಳೆಯುವ ರಾಜ್ಯ ನಮ್ಮ ಕರ್ನಾಟಕ. ಹೀಗಾಗಿ ಹಲವರು ತೋಟಗಳಲ್ಲಿ ಶ್ರೀಗಂಧವನ್ನು ಬೆಳೆದಿರುತ್ತಾರೆ. ಆದರೆ ಅದು ಬಲಿತನ ನಂತರ ಅದಕ್ಕೆ ಕಳ್ಳರ ಕಾಟ ತುಂಬಾ ಹೆಚ್ಚಾಗಿರುತ್ತದೆ. ಇಂದು ನೋಡಿದ ಗಂಧದ ಮರ ಬೆಳಗಾಗುವಷ್ಟರಲ್ಲಿ ಇರುವುದಿಲ್ಲ. ಬುಡ ಕಡಿದು ಗಂಧವನ್ನು ಕದ್ದು ಹೊತ್ತಿರುತ್ತಾರೆ. ಇದು ರೈತರಿಗೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಆದರೆ ನೀವು ಈ ಒಂದು ಪ್ಲಾನ್ ಯೂಸ್ ಮಾಡಿದ್ರೆ ಯಾವ ಕಳ್ಳರಿಂದಲೂ ಕೂಡ ನಿಮ್ಮ ತೋಟದ ಗಂಧವನ್ನು ಕದಿಯಲು ಸಾಧ್ಯವಿಲ್ಲ.

ಹೌದು, ಗಂಧ ಬೆಳೆದ ರೈತರಿಗೆ ಕಳ್ಳರ ಸಮಸ್ಯೆಯೇ ಹೆಚ್ಚು. ಇವರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ. ಎಂತ ಮೆಸ್ ಹಾಕಿದರೂ ಕೂಡ, ಬೇಲಿ ಮಾಡಿದರೂ ಸಹ ಅದನ್ನು ತುಂಡರಿಸಿ ಕೊಂಡೋಗುತ್ತಾರೆ. ಆದರೆ ಕೃಷಿ ಬದುಕು ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೈತರೊಬ್ಬರು ಕಳ್ಳರಿಂದ ಗಂಧಧ ಮರವನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿಸಿದ್ದು, ಈ ಟ್ರಿಕ್ ಅನ್ನು ನೀವು ಬಳಸಿದರೆ ಯಾವ ಕಳ್ಳರಿಂದಲೂ ನಿಮ್ಮ ಗಂಧದ ಗಿಡವನ್ನು ಕದಿಯಲಾಗುವುದಿಲ್ಲ. ಸುಲಭದಲ್ಲಿ ಗಂಧದ ಮರವನ್ನು ರಕ್ಷಣೆ(Sandalwood tree protection) ಮಾಡಿಕೊಳ್ಳಬಹುದು.

ಪೈಪ್ ಬಳಸಿ, ಗಂಧದ ಗಿಡ ಉಳಿಸಿ:
ಗಂಧದ ಗಿಡ ನಿಮ್ಮ ಎತ್ತರಕ್ಕೆ ಅಥವಾ ಒಂದು ಹಂತಕ್ಕೆ ಬೆಳೆದಾಗ ನೀವು 12 ಇಂಚಿನ ಪಿಯುಸಿ ಪೈಪ್ ಅಥವಾ ಒಂದು ಅಡಿಯಷ್ಟು ಅಗಲ ಬರುವ ಪೈಪನ್ನು ತಂದು ಗಿಡಕ್ಕೆ ಹಾಕಿ. ಗಿಡದ ಮುಕ್ಕಾಲು ಭಾಗ ಆ ಪೈಪ್ ಮುಚ್ಚುವಂತಿದ್ದರೆ ಸಾಕು. ನಂತರ ಅದರ ಸುತ್ತಲೂ ಎತ್ತರವಾಗಿ ಮಣ್ಣು ಹಾಕಿ. ಆಗ ಯಾವು ಕಳ್ಳನಿಗೂ ಸಹ ತೆಗೆಯಲು ಆಗದು. ಅವನು ಜೆಸಿಬಿ ತಂದೇ ಅದನ್ನು ಬಗೆಯಬೇಕೆ ಹೊರತು ಬೇರೆ ಯಾವುದರಿಂದಲೂ ಲೂಟಿ ಮಾಡಲು ಸಾಧ್ಯವಿಲ್ಲ. ನಂತರ ನೀವು ಬೇಳೆದ ಗಂಧ ಕೊನೇವರೆಗೂ ನಿಮ್ಮ ಪಾಲಿನದ್ದೇ ಆಗಿರುತ್ತದೆ.

https://www.instagram.com/reel/C00gPD4vNpR/?igsh=MWRjMXdtMXhkZjF3cg==

ಈ ರೀತಿ ಪೈಪ್ ಹಾಕುವುದುರಿಂದ ಗಿಡಗಳಿಗೆ ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ. ಯಾಕೆಂದರೆ ಅದರ ಎಲೆಗಳು ಮೇಲಿರುವುದರಿಂದ ಸೂರ್ಯನ ಶಾಖ ಅದಕ್ಕೆ ತಗುಲಿದರೆ ಸಾಕು. ಒಟ್ಟಿನಲ್ಲಿ ಗಂಧದ ಬೆಳೆಗಾರರಿಗೆ ತಮ್ಮ ಗಿಡ ಉಳಿಸಿಕೊಳ್ಳಲು ಇದೊಂದು ಸರಳ ಹಾಗೂ ಸುಲಭ ಉಪಾಯ ಆಗಿದೆ.

Leave A Reply

Your email address will not be published.