Flake plant: ಈ ಬೆಳೆ ಮುಂದೆ ಅಡಿಕೆ ಯಾವ ಲೆಕ್ಕ – ಒಂದು ಸಲ ನೆಟ್ಟರೆ ಸಾಕು ಅಡಿಕೆಗಿಂತಲೂ ದುಪ್ಪಟ್ಟು ಆದಾಯ ಪಕ್ಕಾ

 

Flake plant: ಒಂದು ಬಾರಿ ನೆಟ್ಟು ಪೋಷಿಸಿದರೆ, ಹೆಚ್ಚು ಶ್ರಮವಿಲ್ಲದೆ ಅಧಿಕ ಲಾಭವನ್ನು ತಂದು ಕೊಡುವ ಬೆಳೆ ಎಂದರೆ ಅದು ಅಡಿಕೆ. ಕರಾವಳಿ ಮತ್ತು ಮಲೆನಾಡಿನ ಸಾಂಪ್ರದಾಯಿಕ ಬೆಳೆಯಾದ ಅಡಿಕೆಯ ಬೆಲೆಯಿಂದ ಇಂದು ನಾಡಿನಾದ್ಯಂತ ಅನೇಕ ರೈತರು ಅಡಿಕೆಯನ್ನು ನೆಡುತ್ತಿದ್ದಾರೆ. ಆದರೆ ಮುಂದೊಂದು ದಿನ ಅಡಿಕೆ ನೆಲಕಚ್ಚಿ ಬೀಳುವುದಂತು ಪಕ್ಕ ಎಂದು ತಜ್ಞರೇ ಅಭಿಪ್ರಾಯಪಡುತ್ತಾರೆ. ಆದರೆ ಇದರ ನಡುವೆಯೇ ಅಡಿಕೆ ಯಾವ ಲೆಕ್ಕ ಎನ್ನುವಂತೆ ಇದಕ್ಕಿಂತಲೂ ದುಪ್ಪಟ್ಟು ಆದಾಯವನ್ನು ತಂದು ಕೊಡುವ ಬೆಳೆಯನ್ನು ರೈತರೊಬ್ಬರು ನೆಟ್ಟು, ಲಕ್ಷ ಲಕ್ಷ ಆದಾಯಗಳಿಸಿ ಸಕ್ಸಸ್ ಆಗಿರುವಂತದ್ದನ್ನು ನಾವು ಕಾಣಬಹುದು.

ಹೌದು, ಇನ್‌ಸ್ಟಾಗ್ರಾಮ್(Instagram) ನಲ್ಲಿ ‘ಕೃಷಿ ಬದುಕು'(Krishi baduku) ಎಂಬ ಪೇಜಿನಲ್ಲಿ ಕೃಷಿ ಕುರಿತು ಅನೇಕ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಅಂತೆಯೇ ಇದೀಗ ಕಡಿಮೆ ಖರ್ಚು, ಕಡಿಮೆ ನೀರಾವರಿ, ಕಡಿಮೆ ಜಾಗದಲ್ಲಿ ಹಾಗೂ ಕಡಿಮೆ ಶ್ರಮದಲ್ಲಿ ರೈತರೊಬ್ಬರು ಚಕ್ಕೆ ಗಿಡಗಳನ್ನು ಬೆಳೆದು ಅಡಿಕೆಗಿಂತಲೂ ದುಪ್ಪಟ್ಟು ಲಾಭಗಳಿಸಿ ಲಕ್ಷಾದೀಶ್ವರರಾಗಿದ್ದಾರೆ. ಹಾಗಿದ್ರೆ ಹೇಗೆ ಇದನ್ನು ಬೆಳೆದರು, ಇದರಿಂದ ಏನೆಲ್ಲಾ ಲಾಭ ಇದೆ ನೋಡೋಣ ಬನ್ನಿ.

ಚಕ್ಕೆ ಬೆಳೆ:
• ಈ ಚಕ್ಕೆ ಬೆಳೆ(Flake Plant)ಯನ್ನು ನಮ್ಮಲ್ಲಿ ಯಾರೂ ಬೆಳೆಯುವುದಿಲ್ಲ.
• ನಾವು ಬಳಕೆ ಮಾಡುವುದರಲ್ಲಿ ಶೇ 90 ರಷ್ಟು ಆಮದು ಆಗುತ್ತದೆ. ಅಂದರೆ ಬೇರೆಡೆಯಿಂದ ತಂದು ನಾವು ಬಳಸುತ್ತೇವೆ.
• ಚಕ್ಕೆ ಗಿಡದಲ್ಲಿ 3 ಭಾಗಗಳಾದ ಚಕ್ಕೆ, ಎಲೆ ಹಾಗೂ ಮೊಗ್ಗು ನಮಗೆ ಆದಾಯವನ್ನು ತಂದುಕೊಡುತ್ತದೆ.
• ಒಂದು ಕೆಜಿ ಚಕ್ಕೆ ಬೆಲೆ 750ರೂ ಇದೆ
• ಅದರ ಎಲೆ ಕೂಡ ಬಳಸಲ್ಪಡುತ್ತದೆ. ಅದನ್ನು ಒಣಗಿಸಿ ಮಾರಿದರೆ ಕೆಜಿಗೆ 40ರೂ ನಂತೆ ವ್ಯಾಪಾರ ಆಗುತ್ತದೆ
• ಗಿಡದಲ್ಲಿ ಮೊಗ್ಗು ಕೂಡ ಬಿಡಲಿದ್ದು, ಅದಕ್ಕೆ ಬರೋಬ್ಬರಿ 1800 ರೂ ಕೆಜಿಗೆ ಮಾರಾಟವಾಗುತ್ತದೆ.
• ಚಕ್ಕೆ, ಮೊಗ್ಗು, ಎಲೆಯಿಂದ ಒಂದು ಗಿಡಕ್ಕೆ ವರ್ಷಕ್ಕೆ ಕಡಿಮೆ ಅಂದರೂ 3ರಿಂದ ನಾಲ್ಕು ಸಾವಿರದಷ್ಟು ಆದಾಯ ಹರಿದು ಬರುತ್ತದೆ.

ಇನ್ನು 8-8 ಅಡಿಗೆ ಈ ಚಕ್ಕೆ ಗಿಡಗಳನ್ನು ನೆಟ್ಟಿದ್ದೇನೆ. ಇದೇ ರೀತಿ ಅಡಿಕೆ ನೆಡುತ್ತಾರೆ. ಆದರೆ ಒಂದು ಅಡಿಕೆ ಗಿಡದಲ್ಲಿ ವರ್ಷಕ್ಕೆ 1 ಸಾವಿರ ಅಷ್ಟೇ ಲಾಭ ಬರುತ್ತದೆ. ಆದರೆ ಚಕ್ಕೆ ಗಿಡಕ್ಕೆ 3-4ಸಾವಿರ ಲಾಭ ಬರುತ್ತದೆ. ಅಲ್ಲದೆ ಅಡಿಕೆಗೆ ನಿರಂತರವಾಗಿ ನೀರು ಬೇಕು, ನೂರಾರು ರೋಗ, ಕೆಲಸ ಹೆಚ್ಚು. ಆದರೆ ಚಕ್ಕೆಗೆ ಯಾವುದೇ ಕೆಲಸ ಇರೋದಿಲ್ಲ. ತಂದು ನೆಟ್ಟುಬಿಟ್ಟರೆ ಸಾಕು. ಒಂದು ವರ್ಷ ಆದಮೇಲೆ ಕಟಾವು ಮಾಡಿ ಮಾರಿದರೆ ಆಯಿತು. ಅಧಿಕ ಲಾಭ ನಿಮ್ಮದಾಗೋದು ಪಕ್ಕಾ!!

https://www.instagram.com/reel/C1dr9PvPath/?igsh=YjVuOGxlbThnMGp3
ಅಂದಹಾಗೆ ಕೃಷಿ ಬದುಕು ಪೇಜಿನಲ್ಲಿ ಅಪ್ಲೋಡ್ ಮಾಡಿರುವ ಈ ವಿಡಿಯೋದಲ್ಲಿ ರೈತರ ಹೆಸರು ಹೇಳಿಲ್ಲ. ಅವರು ಎಲ್ಲಿಯವರೂ ಎಂದು ಉಲ್ಲೇಖಿಸಿಲ್ಲ, ಆದರೆ ಅವರೇ ಚಕ್ಕೆ ಬೆಳೆಯ ಕುರಿತು ಮಾಹಿತಿ ನೀಡುತ್ತಾ ಹೋಗುತ್ತಾರೆ.

Leave A Reply

Your email address will not be published.