Heart Attack: ಕೆಲಸದ ವೇಳೆಯೇ ಹಠಾತ್‌ ಹೃದಯಾಘಾತ! ಪೇಂಟರ್‌ ಸಾವು!

Share the Article

Heart Attack: ಕೊರೊನಾ ನಂತರ ಹದಿಹರೆಯದವರಲ್ಲಿ, ಮಕ್ಕಳಲ್ಲಿ ಹೃದಯಾಘಾತ ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ, ಯುವಕರಿಗೆ ಯಾವುದೇ ಒಂದು ಸುಳಿವು ಕೂಡಾ ನೀಡದೇ ಹೃದಯಾಘಾತದಿಂದ ಸಾಯುವ ಪ್ರಕರಣಗಳು ಹೆಚ್ಚುತ್ತಿದ್ದಂತೆ ಜನಸಾಮಾನ್ಯರಲ್ಲಿ ಇದರ ಕುರಿತು ಆತಂಕ ಹೆಚ್ಚಾಗಿದೆ.

ಈಗ ಇದಕ್ಕೆ ಇನ್ನೊಂದು ನಿದರ್ಶನವೆಂಬಂತೆ ವ್ಯಕ್ತಿಯೋರ್ವರು ಹಠಾತ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದರ ಕುರಿತು ಘಟನೆಯೊಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಇದನ್ನು ಓದಿ: Honey Trap: ದಾರಿಯಲ್ಲಿ ಹೋಗುತ್ತಿದ್ದ ಉದ್ಯಮಿಯ ಸೆಳೆದು ಹನಿಟ್ರ್ಯಾಪ್‌! ಬೆತ್ತಲೆ ವೀಡಿಯೋ, ಫೋಟೋ ತೋರಿಸಿ ಈ ತಂಡ ದೋಚಿದೆಷ್ಟು ಗೊತ್ತೇ?

ಡಿ.26 ರಂದು ಆಶಿಶ್‌ ಎಂಬುವವರು ಇಂದೋರ್‌ನ ಸೈಟ್‌ವೊಂದರಲ್ಲಿ ಕೆಲಸದಿಂದ ವಿರಾಮ ತೆಗೆದುಕೊಂಡು ಕುಳಿತಿದ್ದ ಸಮಯದಲ್ಲಿ ಇದ್ದಕ್ಕಿದಂತೆ ನೆಲಕ್ಕೆ ಬಿದ್ದಿದ್ದಾರೆ. ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೂಡಲೇ ಬಂದಿದ್ದು, ಬದುಕಿಸಲು ಪ್ರಯತ್ನ ಪಡುತ್ತಾರೆ. ಆದರೆ ಪೈಂಟರ್‌ ಆಶಿಶ್‌ ಹೃದಯಾಘಾತದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

Leave A Reply