Bigg Boss ವೀಕ್ಷಕರಿಗೆ ಗುಡ್​ ನ್ಯೂಸ್! 100 ದಿನಕ್ಕೆ ಮುಗಿಯೋದಿಲ್ವಂತೆ, ಇಲ್ಲಿದೆ ಬಿಗ್​ ಅಪ್ಡೇಟ್​

Bigg Boss Season Kannada 10: ಬಿಗ್​ ಬಾಸ್​ ಇಷ್ಟು ಸೀಸನ್​ ನೋಡದೇ ಇರುವ ವೀಕ್ಷಕರೂ ಕೂಡ ಈ ಸೀಸನ್​ ನೋಡ್ತಾ ಇದ್ದಾರೆ ಅನ್ನೋದಕ್ಕೆ TRP ನೇ ಸಾಕ್ಷಿ ಅಂತ ಹೇಳಬಹುದು. ಎಸ್​, ಸಖತ್​ ಹೈ TRP Rating ಬರ್ತಾ ಇರುವ ಕಾರಣ ಸಖತ್​ ಆಗಿಯೇ ಮೂವ್​ ಆಗ್ತಾ ಇದೆ ಈ ಸೀಸನ್​.

 

ಸಖತ್​ ಅಗ್ರೆಸಿವ್​ ಆಗಿ ಆಡ್ತಾ ಇದ್ದಾರೆ ಕೆಲ ಸ್ಫರ್ಧಿಗಳು ಎಂದು ಟ್ರೋಲ್​ ಆಗ್ತಾ ಇದೆ ಹಾಗೆಯೇ ಒಳ್ಳೆ ವೀಕ್ಷಣೆ ಕೂಡ ಪಡೆದಿದೆ. ಇನ್ನು 3 ವಾರಗಳು ಮಾತ್ರ ಬಾಕಿ ಇದೆ ನೂರು ದಿನಕ್ಕೆ. ಆದರೆ, ಮನರಯಲ್ಲಿ ಇನ್ನು 10 ಸ್ಪರ್ಧಿಗಳು ಬಾಕಿ ಇದ್ದಾರೆ. ಹಾಗಾದ್ರೆ 100 ದಿನಕ್ಕೆ ಮುಗಿಯೋಲ್ವಾ ಈ ಶೋ?

ಕೆಲವು ಸೀಸನ್​ಗಳು ಕೇವಲ 98ನೇ ದಿನಕ್ಕೆ ಪೂರ್ಣಗೊಂಡ ಉದಾಹರಣೆ ಇದೆ. ಎಂಟನೇ ಸೀಸನ್ 117 ದಿನಗಳ ಕಾಲ ಇತ್ತು. ಏಳನೇ ಸೀಸನ್ 112 ದಿನ ನಡೆದಿತ್ತು. ಟಿಆರ್​ಪಿ ಉತ್ತಮವಾಗಿದ್ದಾಗ ಹೆಚ್ಚುವರಿಯಾಗಿ ಎರಡು ವಾರ ಬಿಗ್ ಬಾಸ್ ಶೋನ ನಡೆಸಲಾಗುತ್ತದೆ. ಈ ಸೀಸನ್​ನಲ್ಲೂ ಎರಡು ವಾರ ಹೆಚ್ಚುವರಿಯಾಗಿ ನಡೆಸಲು ವಾಹಿನಿ ನಿರ್ಧರಿಸಿದೆ ಎನ್ನಲಾಗುತ್ತಿದೆ. ಇದನ್ನು ತಿಳಿದ ಬಿಗ್​ ಬಾಸ್​ ಫ್ಯಾನ್ಸ್​ ಸಖತ್​ ಖುಷಿಯಾಗಿದ್ದಾರೆ. ಇನ್ನು ದಿನ 24 ಗಂಟೆಗಳ ಕಾಲ ಲೈವ್​ ನೋಡಲು ಜಿಯೋ ಆ್ಯಪ್​ ಯೂಸ್​ ಮಾಡಿ.

Leave A Reply

Your email address will not be published.