Vastu Tips: 2024ರ ಹೊಸ ವರ್ಷಕ್ಕೆ ಸಿರಿ ಸಂಪತ್ತು ಹೆಚ್ಚಾಗಬೇಕಾ?? : ಹಾಗಿದ್ರೆ ಈ ಗಿಡ ನೆಟ್ಟು ನೋಡಿ!

Vastu Tips: ಪ್ರತಿಯೊಬ್ಬರು ಮನೆಯಲ್ಲಿ ಶಾಂತಿ(Peace) ನೆಮ್ಮದಿ, ಅದೃಷ್ಟ(Luck) ಸಮೃದ್ಧಿಯಾಗಲಿ ಎಂದು ನಾನಾ ಬಗೆಯ ಪೂಜೆ (Pooja)ಪುನಸ್ಕಾರಗಳನ್ನ ಮಾಡಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು (Negative Energy) ಕಡಿಮೆಯಾಗಿ, ಸಕರಾತ್ಮಕತೆ(Positivity)ವೃದ್ದಿಯಾಗಬೇಕೆಂದು ಬಯಸುವುದಲ್ಲದೆ ಅದೃಷ್ಟ ಹೆಚ್ಚಿಸಲು ವಾಸ್ತು ಪ್ರಕಾರ (Vastu Tips For Luck)ಕೆಲ ಸಲಹೆಗಳನ್ನು ಕೇಳುವುದುಂಟು. ಮನೆಯಲ್ಲಿ ವಾಸ್ತು ಗಿಡ, ತುಳಸಿ,ಮನಿ ಪ್ಲಾಂಟ್ (money plant) ಹೀಗೆ ವಿಭಿನ್ನ ತಂತ್ರಗಳನ್ನು ಬಳಸುವುದು ವಾಡಿಕೆ.

ಮುಂಬರುವ ಹೊಸ ವರ್ಷದಲ್ಲಿ ಕಷ್ಟಗಳು ದೂರವಾಗಿ ಸಂತೋಷ ಹೆಚ್ಚಾಗಲಿ ಎಂದು ಹೆಚ್ಚಿನವರು ಅಂದುಕೊಳ್ಳುವುದು ಸಹಜ. ಮನೆಯಲ್ಲಿ ಸಿರಿ ಸಂಪತ್ತು, ಶ್ರೇಯಸ್ಸು ಹೆಚ್ಚಾಗಿ ಲಕ್ಷ್ಮೀದೇವಿ ಅನುಗ್ರಹ ಇರಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಮನೆಯಲ್ಲಿ ಸಂಪತ್ತು, ಶ್ರೇಯಸ್ಸು ಹೆಚ್ಚಾಗಲು ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ವಾಸ್ತು ಶಾಸ್ತ್ರದಲ್ಲಿ ಸಲಹೆ ನೀಡಲಾಗಿದೆ.

# ಅಕ್ವೇರಿಯಂ (Aquarium)

ಅಕ್ವೇರಿಯಂ ಇರುವ ಮನೆಯಲ್ಲಿ ಸಿರಿ ಸಂಪತ್ತು ಸಮೃದ್ಧಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ ಅಕ್ವೇರಿಯಂ ಅನ್ನು ಮನೆಯಲ್ಲಿ ಉತ್ತರ ದಿನಕ್ಕಿನಲ್ಲಿಯೇ ಇಡಬೇಕು. ಉತ್ತರ ದಿಕ್ಕಿನಲ್ಲಿ ಅಕ್ವೇರಿಯಂ ಇಡುವುದರಿಂದ ಕುಟುಂಬದಲ್ಲಿ ಸಂತೋಷ ಉಂಟಾಗುತ್ತದೆ. ಹೊಸ ವರ್ಷ ಮನೆಯಲ್ಲಿ ಅಕ್ವೇರಿಯಂ ತಂದರೆ ಅದೃಷ್ಟ ಬರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲದೆ, ಮನೆಯೊಳಗೆ ಪ್ರವೇಶಿಸುವ ಪ್ರತಿಕೂಲ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ ಎಂದು ನಂಬಲಾಗಿದೆ. ಅಕ್ವೇರಿಯಂ ಇರಿಸಿಕೊಳ್ಳಲು ಆಗದಿದ್ದರೆ ಜೋಡಿ ಮೀನುಗಳ ಚಿಹ್ನೆಗಳನ್ನಾದರೂ ಮನೆಯಲ್ಲಿರಿಸಿಕೊಳ್ಳಬಹುದು.

# ಲಾಫಿಂಗ್ ಬುದ್ಧ (Laughing Buddha)

ಲಾಫಿಂಗ್ ಬುದ್ಧ ಮನೆಯಲ್ಲಿದ್ದರೆ ಸಂಪತ್ತು, ಐಶ್ವರ್ಯ ಬೆಳೆಯುತ್ತದೆ. ಈ ಹೊಸ ವರ್ಷ ನಿಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ ಮೂರ್ತಿಯನ್ನು ಇಡಬೇಕು. ಇದನ್ನು ಮನೆಯ ಮುಖ್ಯ ಬಾಗಿಲ ಎದುರಿಡಬೇಕು. ಲಾಫಿಂಗ್ ಬುದ್ಧ ಸಂತೋಷ, ಸಮೃದ್ಧಿಯ ಸಂಕೇತವಾಗಿದ್ದು, ಇದನ್ನು ಮನೆಯಲ್ಲಿ ಇರಿಸಿದರೆ ಸಿರಿ ಸಂಪತ್ತಿಗೆ ಕೊರತೆಯಿರುವುದಿಲ್ಲ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಕುಟುಂಬದಲ್ಲಿ ಪ್ರೀತಿ, ಉತ್ತಮ ಸಂಬಂಧಗಳು ಬೆಳೆಯುತ್ತವೆ.

# ವಿಂಡ್ ಚೈಮ್ (Wind Chimes)

ವಿಂಡ್ ಚೈಮ್‌ಗೆ ವಾಸ್ತು ಶಾಸ್ತ್ರದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ವಿಂಡ್ ಚೈಮ್ ಮನೆಯಲ್ಲಿ ಹಾಕಿದರೆ ಶುಭಕರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ವಿಂಡ್ ಚೈಮ್‌ ಗಾಳಿಗೆ ನೇತಾಡಿದ ಸಂದರ್ಭ ಬರುವ ಶಬ್ದವು ಪ್ರತಿಕೂಲ ಶಕ್ತಿಯನ್ನು ಮನೆಗೆ ಪ್ರವೇಶಿಸದಂತೆ ತಡೆಯುತ್ತದೆ. ವಿಂಡ್ ಚೈಮ್ ಹಾಕುವುದರಿಂದ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ.

# ಬಿದಿರು ಗಿಡ

ವಾಸ್ತು ಶಾಸ್ತ್ರದಲ್ಲಿ ಬಿದಿರಿನ ಸಸ್ಯವು ತುಂಬಾ ಶ್ರೇಯಸ್ಸು, ದೀರ್ಘಾಯುಷ್ಯದ ಸಂಕೇತ ಎಂದು ಹೇಳಲಾಗುತ್ತದೆ. ಬಿದಿರಿನ ಸಸಿಯನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಆಕರ್ಷಿಸುತ್ತದೆ. ಅದೃಷ್ಟ ಮತ್ತು ಸಂಪತ್ತಿಗಾಗಿ ಈ ಬಿದಿರಿನ ಸಸಿಯನ್ನು ಮನೆಯ ಪ್ರವೇಶ ದ್ವಾರದ ಬಳಿಯೇ ನೆಡಬೇಕು. ಈ ಸಸ್ಯ ಗಾಳಿಯನ್ನು ಶುದ್ಧಿ ಮಾಡುವ ಜೊತೆಗೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸದಂತೆ ತಡೆಯುತ್ತದೆ. ಇದು ಮನೆಯಲ್ಲಿ ಇರುವುದರಿಂದ ಕುಟುಂಬದಲ್ಲಿ ಆರೋಗ್ಯ, ಸಂತೋಷ ಹೆಚ್ಚಾಗುತ್ತದೆ.

Leave A Reply

Your email address will not be published.