BJP: ಬಿ. ಎಲ್ ಸಂತೋಷ್, ಬಸವನಗೌಡ ಯತ್ನಾಳ್’ಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್ !!
BJP: ಮೊನ್ನೆ ತಾನೆ ಬಿಜೆಪಿ (BJP) ರಾಜ್ಯ ಘಟಕದ ಪದಾಧಿಕಾರಿಗಳ ತಂಡವನ್ನು ಹೊಸದಾಗಿ ರಚನೆ ಮಾಡಲಾಗಿದ್ದು, 10 ಮಂದಿ ರಾಜ್ಯ ಉಪಾಧ್ಯಕ್ಷರನ್ನೊಳಗೊಂಡು, ಕಾಯದರ್ಶಿ ಸೇರಿ ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಈ ವಿಚಾರವಾಗಿ ಬಿ ಎಲ್ ಸಂತೋಷ್, ಬಸವನಗೌಡ ಯತ್ನಾಳ್’ಗೆ ಹೈಕಮಾಂಡ್ ಬಿಗ್ ಶಾಕ್ ನೀಡಿದೆ.
ಬಿ. ಎಲ್ ಸಂತೋಷ್ ಲಿಸ್ಟ್’ಗೆ ಗೇಟ್ ಪಾಸ್ :
ರಾಜ್ಯದ ಯಾವುದೇ ವಿಚಾರ ಬಂದರೂ ಕೂಡ ಬಿ ಎಲ್ ಸಂತೋಷ್(B L Santosh) ಹೇಳಿದಂತೆ ಕೇಳುವ ಬಿಜೆಪಿ(BJP) ಹೈಕಮಾಂಡ್ ಈ ಭಾರಿ ಸಂತೋಷರಿಗೆ ಶಾಕ್ ನೀಡಿದೆ. ಅದೇನೆಂದರೆ ಹೊಸದಾಗಿ ರಚಿಸಲಾದ ಪದಾಧಿಕಾರಿಗಳ ಪಟ್ಟಿಯಲ್ಲಿ ಬಿ.ಎಲ್.ಸಂತೋಷ್ ಬಣಕ್ಕೆ ಹೈಕಮಾಂಡ್ ಗೇಟ್‌ಪಾಸ್ ಕೊಟ್ಟಿದೆ. ಬಿ ಎಲ್ ಸಂತೋಷ್ ಸಿದ್ದಪಡಿಸಿದ ಲಿಸ್ಟ್ ಅನ್ನೂ ಕಡೆಗಣಿಸಿದೆ. ಬಿಜೆಪಿ ನೂತನ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ತೆಗೆದುಕೊಂಡು ಹೋಗಿದ್ದ ಪದಾಧಿಕಾರಿಗಳ ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿ, ಅದೇ ಪಟ್ಟಿಯನ್ನು ಫೈನಲ್ ಕೂಡ ಮಾಡಿತು ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: Mahindra Thar: ಥಾರ್ ಗೆ ಕೇವಲ 700 ರೂಪಾಯಿ ಎಂದ ಮುಗ್ದ ಬಾಲಕನ ಮಾತಿಗೆ ಮನಸೋತ ಆನಂದ್ ಮಹೀಂದ್: ವೀಡಿಯೋ ವೈರಲ್!!
ಬಸವನಗೌಡ ಯತ್ನಾಳ್’ಗಿಲ್ಲ ಯಾವುದೇ ಅಧಿಕಾರ :
ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ನಿರಂತರವಾಗಿ ಕಿಡಿಕಾರುವ ಬಿಜೆಪಿ ಪ್ರಬಲ ನಾಯಕ, ಹಿಂದೂ ಹುಲಿ, ಉತ್ತರ ಕರ್ನಾಟಕದ ಭಾಗದ ಮಾಸ್ ಲೀಡರ್ ಆದ ಬಸವನಗೌಡ ಪಾಟೀಲ್ ಯತ್ನಾಳ್(Basavanagouda patil) ಅವರಿಗೆ ಹೈಕಮಾಂಡ್ ಮತ್ತೆ ಬಿಸಿಮುಟ್ಟಿಸಿದೆ. ಹೊಸದಾಗಿ ರಚಿಸಲಾದ ಪದಾಧಿಕಾರಿಗಳ ತಂಡದಲ್ಲಿ ಯಾವುದೇ ಸ್ಥಾನ ನೀಡದೆ ಬಿಜೆಪಿ ಶಾಕ್ ನೀಡಿದೆ.
ಅಂದಹಾಗೆ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಹಲವರು ಆಕಾಂಕ್ಷಿಗಳಿದ್ದರು. ಆದರೆ ಹೈಕಮಾಂಡ್ ಯಡಿಯೂರಪ್ಪರ ಪುತ್ರ, ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ(B Y Vijayendra) ಅವರಿಗೆ ಪಟ್ಟಾಭಿಷೇಕ ಮಾಡಿಬಿಟ್ಟಿತು. ಈ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿತು. ಮುಖ್ಯವಾಗಿ ಬಿಜೆಪಿ ಪ್ರಬಲ ನಾಯಕ, ಹಿಂದೂ ಹುಲಿ, ಉತ್ತರ ಕರ್ನಾಟಕದ ಭಾಗದ ಮಾಸ್ ಲೀಡರ್ ಆದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಈ ಬಗ್ಗೆ ಭಾರೀ ಆಕ್ರೋಶ ಹೊರಹಾಕಿದ್ದರು. ಇದು ಬೇಡ ವಿಪಕ್ಷ ನಾಯಕ ಸ್ಥಾನವಾದರೂ ಸಿಗುತ್ತದೆ ಎಂದು ಅವರಷ್ಟೇ ಅಲ್ಲದೆ ಅಭಿಮಾನಿಗಳು ಕೂಡ ನಿರೀಕ್ಷಿಸಿದ್ದರು. ಆದರೆ ಆರ್ ಅಶೋಕ್(R Ashok) ಅವರಿಗೆ ಹೈಕಮಾಂಡ್ ಈ ಪಟ್ಟ ಕಟ್ಟಿತು. ಇದು ಹೋಗಲಿ ಪಕ್ಷವು ಪದಾಧಿಕಾರಿಗಳ ತಂಡದಲ್ಲಿ ಉಪಧ್ಯಕ್ಷ ಸ್ಥಾನ ನೀಡುತ್ತೆ ಎಂದು ನಂಬಿದ್ದರು. ಆದರೆ ಇಲ್ಲೂ ಸ್ಥಾನ ಸಿಗದೆ ಯತ್ನಾಳ್ ಅವರು ಅಧಿಕಾರದಿಂದ ವಂಚಿತರಾಗಿದ್ದಾರೆ.