Batteries plus: ಮೊಬೈಲ್ ಚಾರ್ಜ್ ಹಾಕುವಾಗ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ !ಈ ಒಂದು ಮಿಸ್ಟೇಕ್ ನಿಂದಲೇ ನಿಮ್ಮ ಬ್ಯಾಟರಿ ಬೇಗ ಖಾಲಿ ಆಗೋದು
Charging Tips: ದಿನನಿತ್ಯ ಅತೀ ಹೆಚ್ಚು ಬಳಕೆ ಮಾಡುವ ವಸ್ತುಗಳಲ್ಲಿ ಸ್ಮಾರ್ಟ್ ಫೋನ್ ಕೂಡಾ ಒಂದು. ಆದರೆ ಪ್ರತಿಯೊಬ್ಬರೂ ಮೊಬೈಲ್ ಚಾರ್ಜಿಂಗ್ ವಿಚಾರದಲ್ಲಿ ಒಂದಲ್ಲಾ ಒಂದು ತಪ್ಪು ಮಾಡೇ ಮಾಡುತ್ತಾರೆ. ಹೌದು, ಚಾರ್ಜಿಂಗ್ ವಿಷಯದಲ್ಲಿ ನೀವು ಕೆಲವು ತಪ್ಪು ಮಾಡುವುದರಿಂದ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಬರುವುದಿಲ್ಲ. ಅದಕ್ಕಾಗಿ ನೀವು ಈ ಟಿಪ್ಸ್ (Charging Tips) ಫಾಲೋ ಮಾಡಿ.
ಮುಖ್ಯವಾಗಿ ನಿಮ್ಮ ಮೊಬೈಲ್ ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗಲು ಬಿಡಬೇಡಿ. ಇದು ಬ್ಯಾಟರಿ ಅವಧಿಯನ್ನು ಕಡಿಮೆ ಮಾಡುತ್ತದೆ.
ಇನ್ನು ನಿಮ್ಮ ಸ್ಮಾರ್ಟ್‌ಫೋನ್ ಕಂಪನಿಯ ಚಾರ್ಜರ್ ಅನ್ನೇ ಯಾವಾಗಲೂ ಬಳಸಿ. ಬೇರೆ ಮೊಬೈಲ್ಗಳ ಚಾರ್ಜರ್ ಬಳಸಬೇಡಿ.
ಇದನ್ನು ಓದಿ: Bantwala: ಕಾಣೆಯಾಗಿದ್ದ ಕೋಣಗಳು ಪತ್ತೆ, ಎರಡು ಜೀವಂತವಾಗಿ, ಒಂದು ಶವವಾಗಿ ಪತ್ತೆ!
ಇನ್ನು ಅತಿ ಅವಶ್ಯಕ ಇಲ್ಲದ ಹೊರತು ಫಾಸ್ಟ್ ಚಾರ್ಚರ್ ಹಾಗೂ ಪವರ್ ಬ್ಯಾಂಕ್ ಬಳಸಬೇಡಿ.
ಮೊಬೈಲ್ ಬೇಗ ಚಾರ್ಜ್ ಆಗಬೇಕು ಅಂದ್ರೆ ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಅಥವಾ ಏರೊಪ್ಲೇನ್ ಮೋಡ್ಗೆ ಹಾಕಿ ಚಾರ್ಜ್ ಮಾಡಿ.
ಇನ್ನು ರಾತ್ರಿ ಚಾರ್ಜ್ ಹಾಕಿ ಮಲಗುವ ಅಭ್ಯಾಸ ತಪ್ಪು . ಓವರ್ ಚಾರ್ಜಿಂಗ್ ಬ್ಯಾಟರಿಯೊಳಗೆ ಶಾಖವನ್ನು ಉತ್ಪಾದಿಸುತ್ತದೆ. ಇದು ಬ್ಯಾಟರಿಗೆ ಹಾನಿಯುಂಟು ಮಾಡುತ್ತದೆ.
ನಿಮ್ಮ ಮೊಬೈಲ್ನಲ್ಲಿ ನೀವು ಬಳಸದ ವೇಳೆ ಕೂಡ ಅನೇಕ ಅಪ್ಲಿಕೇಶನ್ಗಳು ಓಪನ್ ಇದ್ದರೆ ಇದು ಚಾರ್ಜ್ ಕಬಳಿಸುತ್ತದೆ. ಹೀಗಾಗಿ ಬಳಸದ ವೇಳೆ ಟ್ಯಾಬ್ಗಳನ್ನು, ಆ್ಯಪ್ಗಳನ್ನು ಕ್ಲೋಸ್ ಮಾಡಿ.