Couple tips: ಮದುವೆಯಾದ ತಕ್ಷಣ ಈ ಗುಣಗಳನ್ನು ಬದಲಿಸಿಕೊಳ್ಳಿ, ಇದು ನಿಮ್ಮ ಜೀವನವನ್ನೇ ಚೇಂಜ್ ಮಾಡುತ್ತೆ!

ನಿಮ್ಮದು ಆರೆಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಆಗಿರಲಿ, ಯಾವುದೇ ರೀತಿಯಲ್ಲಿ ವಿವಾಹವಾಗಿದ್ದರೂ ಕೂಡ ಮದುವೆಯ ನಂತರ ತಮ್ಮ ಕೆಲವು ಗುಣಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಸಂಗಾತಿಯ ಜೊತೆಗಿನ ತಮ್ಮ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡು, ಒಬ್ಬರಿಗೊಬ್ಬರು ಸಾತ್ ಕೊಡುವುದು ಮ್ಯಾರೀಡ್ ಲೈಫ್ ನ ಪ್ರಮುಖ ಭಾಗವಾಗಿದೆ.

ವಿವಾಹದ ನಂತರ ಜೀವನ ಸುಗಮವಾಗಿರಬೇಕೆಂದರೆ ಕೆಲವು ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕು ಎಂದು ಹಿರಿಯರು ಹೇಳುತ್ತಿರುತ್ತಾರೆ. ಹಾಗಾದ್ರೆ ಮದುವೆಯ ನಂತರ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

1.ಗೌರವಿಸುವುದು:

ಪ್ರತಿ ವ್ಯಕ್ತಿಗೂ ತನ್ನ ಗೌರವ ಮುಖ್ಯವಾಗಿರುತ್ತದೆ. ಎಲ್ಲಿ ಗೌರವ ಇರುವುದಿಲ್ಲವೋ ಅಲ್ಲಿ ಸಂಬಂಧಗಳು ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ. ಹಾಗಾಗಿ ನಿಮ್ಮ ಸಂಗಾತಿಗೆ ಗೌರವ ನೀಡಿ. ಅನಗತ್ಯವಾಗಿ ಅವಮಾನಿಸೋದು , ಅಗೌರವದಿಂದ ನೋಡುವುದನ್ನು ಕೆಲವರು ನೇರ ಮಾತು ಎಂದು ನಂಬಿರುತ್ತಾರೆ. ಆದರೆ ಇಂತಹ ನೇರ ಮಾತುಗಳೇ ಸಂಸಾರದಲ್ಲಿ ಬಿರುಕು ಮೂಡಿಸುತ್ತದೆ. ಹಾಗಾಗಿ ನೀವು ನಿಮ್ಮ ಸಂಗಾತಿಗೆ ಎಷ್ಟು ಗೌರವ ನೀಡುವಿರೋ ಅಷ್ಟು ಗಟ್ಟಿಯಾದ ಬಾಂಧವ್ಯ ನಿಮ್ಮದಾಗಿರುತ್ತದೆ.

ಇದನ್ನು ಓದಿ: Belthangady: ಮರ ಕಟ್ಟಿಂಗ್‌ ಮಾಡುವಾಗ ಅವಘಡ, ಕೆಳಗೆ ಬಿದ್ದ ಮೆಷಿನ್‌, ಕುತ್ತಿಗೆಗೆ ಗರಗಸ ಸಿಲುಕಿ ವ್ಯಕ್ತಿ ಸಾವು!!

2. ಅನುಮಾನಿಸದಿರುವುದು:

ಯಾವುದೇ ರೀತಿಯ ಸಂಬಂಧದಲ್ಲೂ ನಂಬಿಕೆ ಎನ್ನುವುದು ಮುಖ್ಯವಾಗಿ ಇರಬೇಕಾಗುತ್ತದೆ. ಇದನ್ನು ಸಂಬಂಧದ ಗಟ್ಟಿಯಾದ ಕೊಂಡಿ ಎನ್ನಬಹುದಾಗಿದೆ. ನಂಬಿಕೆ ಕಳೆದುಕೊಂಡರೆ ಈ ಕೊಂಡಿಯು ಕಳಚಿ ರಿಲೇಶನ್ಶಿಪ್ ನಲ್ಲಿ ಬಿರುಕು ಉಂಟಾಗುತ್ತದೆ. ಹಾಗಾಗಿ ನೀವು ಸಂಗಾತಿಯನ್ನು ಅನಗತ್ಯವಾಗಿ ಶಂಕಿಸುವುದರಿಂದ ನಂಬಿಕೆಯಿಲ್ಲದ ನಿಮ್ಮ ನಡುವಿನ ಬಾಂಧವ್ಯದಲ್ಲಿ ಅಂತರ ಹೆಚ್ಚಾಗುತ್ತದೆ. ನೀವು ಎಲ್ಲರನ್ನೂ ಅನುಮಾನದಿಂದ ನೋಡುವ ಗುಣದವರಾಗಿದ್ದರೆ ಈಗಲೇ ಅದನ್ನು ಬದಲಿಸಿಕೊಳ್ಳಿ.

3.ತಾಳ್ಮೆಯಿಂದಿರುವುದು:

ಜೀವನದಲ್ಲಿ ಎಲ್ಲರಿಗೂ ಸಮಸ್ಯೆಗಳು ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೋಪ ಬರುವುದು ಸಹಜ. ಆದರೆ ಕೋಪವೇ ಎಲ್ಲದಕ್ಕೂ ಪರಿಹಾರವಾಗಿರುವುದಿಲ್ಲ. ಮುಖ್ಯವಾಗಿ ಸಂಗಾತಿಯೊಂದಿಗೆ ಮಾತನಾಡುವಾಗ ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು. ತಾಳ್ಮೆ ಏಷ್ಟೋ ಸಮಸ್ಯೆಗಳನ್ನು ಪರಿಹರಿಸುತ್ತದೆ ಹಾಗೂ ಜೀವನದಲ್ಲಿ ನೆಮ್ಮದಿಯನ್ನು ನೀಡುತ್ತದೆ. ಅತಿಯಾದ ಕೋಪ ಸಂಸಾರಿಕ ಜೀವನದಕ್ಕೆ ಒಳ್ಳೆಯದಲ್ಲ. ತಾಳ್ಮೆ ದಾಂಪತ್ಯ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.

4.ಅಪಹಾಸ್ಯ ಮಾಡದಿರುವುದು:

ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಜನರ ಕಾಲೆಳೆಯುವ ಗುಣವನ್ನು ಹೊಂದಿರುತ್ತಾರೆ. ಅದು ಆ ಕ್ಷಣದಲ್ಲಿ ಅವರಿಗೆ ತಮಾಷೆ ಎಂದೆನಿಸಿದರೂ ಕೂಡ ಬೇರೆಯವರಿಗೆ ಈ ವಿಚಾರ ನೋವು ನೀಡುತ್ತದೆ. ಇದೇ ರೀತಿ ಸಂಗಾತಿಯನ್ನು ಕೂಡ ಅಪಹಾಸ್ಯ ಮಾಡಿದರೆ, ಸಂಸಾರದಲ್ಲಿ ಮನಸ್ತಾಪ ಉಂಟಾಗಬಹುದು. ಹಾಗಾಗಿ ನೀವು ಅಪಹಾಸ್ಯ ಮಾಡುವ ಗುಣ ಉಳ್ಳವರಾಗಿದ್ದರೆ ಅದನ್ನು ಬದಲಿಸಿಕೊಳ್ಳುವುದು ಉತ್ತಮ

Leave A Reply

Your email address will not be published.